ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ, ಕೃಷ್ಣಾಪುರ ಶಾಖೆಯ ಗ್ರಾಹಕರ ಸಭೆಯು ಇತ್ತೀಚೆಗೆ ಆಯಾ ಶಾಖೆಗಳಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ ದಶಮಾನೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಸದಸ್ಯರಾದ ಪುಟ್ಟಸ್ವಾಮಿ ಹೆಚ್, ರಮೇಶ್ ಯು, ಶ್ರೀಧರ್ ಹಾಗೂ ಅಶೋಕ್ ಎಂ.ಕೆ ಉದ್ಘಾಟಿಸಿದರು. ಸಂಘದ ಸದಸ್ಯರಾದ ಸುಮ ಪ್ರಸಾದ್ ಮಾತನಾಡಿ ಶಾಖೆಯು ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ನೀಡುತ್ತಿದ್ದು, ಶಾಖೆಯ ಸಿಬ್ಬಂದಿಗಳ ನಗುಮೊಗದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಸದಸ್ಯರಾದ ರಾಜಾರಾಮನ್ ತಾಳಿಪಾಡಿ ಮಾತನಾಡಿ ಶಾಖೆಯಲ್ಲಿ ಇ-ಸ್ಟಾಂಪಿಂಗ್ ಸೇವೆ ಶೀಘ್ರವಾಗಿ ನೀಡುತ್ತಿರುವ ಹಾಗೂ ಆಯ್ದ ರಜಾ ದಿನಗಳಲ್ಲಿ ಬ್ಯಾಂಕಿಂಗ್ ಹಾಗೂ ಇ-ಸ್ಟಾಂಪಿಂಗ್ ಸೇವೆ ನೀಡುತ್ತಿರುವದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದರು.


ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಮುದ್ದು ಮೂಡುಬೆಳ್ಳೆ, ಗೋಪಾಲ್ ಎಮ್, ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು. ಕರಂಗಲ್ಪಾಡಿ ಶಾಖೆಯ ಸಿಬ್ಬಂದಿ ಟೀಷ್ಮಾ ಸ್ವಾಗತಿಸಿ, ನವ್ಯ ವಂದಿಸಿದರು. ಶಾಖಾಧಿಕಾರಿ ಕೌಶಿಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕೃಷ್ಣಾಪುರ ಶಾಖೆಯ ಗ್ರಾಹಕರ ಸಭೆ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೃಷ್ಣಾಪುರ ಶಾಖೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಕೃಷ್ಣಾಪುರ ಶಾಖೆಯಲ್ಲಿ ಜರುಗಿತು.
ಸಂಘದ ಸದಸ್ಯರಾದ ಪಿ.ಕೆ.ಉಪಾಧ್ಯಾಯ, ಶ್ರೀನಿವಾಸ್ ರಾವ್, ರಾಧಾ, ಅಬ್ದುಲ್ ಖಾದರ್ ಹಾಗೂ ದೀಕ್ಷಿತಾ ಉದ್ಘಾಟಿಸಿದರು. ಸಂಘದ ಸದಸ್ಯರಾದ ಪಿ.ಕೆ.ಉಪಾಧ್ಯಾಯ ಮಾತನಾಡಿ ಸಹಕಾರ ಸಂಘಗಳಲ್ಲಿ ಬೆಳವಣಿಗೆಯಲ್ಲಿ ಠೇವಣಿದಾರರು ಹಾಗೂ ಸಾಲಗಾರರ ಪಾತ್ರ ತುಂಬಾ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಭೆ ಆಯೋಜಿಸಿ ಸಂಘದ ಗ್ರಾಹಕರನ್ನು ನೆನೆಪಿಸಿಕೊಳ್ಳುವ ಕಾರ್ಯ ಮಾಡಿರುವುದು ಶ್ಲಾಘನೀಯ” ಎಂದರು.
ಪಿ.ಎಚ್.ಎಂ ರಫೀಕ್ ಮಾತನಾಡಿ “ಕೃಷ್ಣಾಪುರ ಶಾಖೆಯಲ್ಲಿ ಸಿಬ್ಬಂದಿಗಳ ಸೇವೆಯು ಉತ್ತಮವಾಗಿದ್ದು, ಇದು ಶಾಖೆಯ ಬೆಳವಣಿಗೆಗೆ ಕಾರಣ. ಆತ್ಮಶಕ್ತಿಯು ಹೀಗೆಯೆ ಉತ್ತಮ ಸೇವೆಗಳನ್ನು ನೀಡುತ್ತಾ ಇನ್ನಷ್ಟು ಬೆಳಗಲಿ” ಎಂದು ಶುಭಹಾರೈಸಿದರು. ಯಶಸ್ವಿನಿ ಮಾತನಾಡಿ “ಆತ್ಮಶಕ್ತಿಯು ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕ ಸ್ನೇಹಿ ಸೇವೆ ನೀಡುವುದರ ಮೂಲಕ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ” ಎಂದು ಪ್ರಶಂಸಿಸಿದರು.
ಸಂಘದ ನಿರ್ದೇಶಕರಾದ ರಮಾನಾಥ ಸನಿಲ್, ಮುಖ್ಯ ಕಾರ್ಯನಿರ್ವಹಣಾದಿಕಾರಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು. ಸಂಘದ ಕೃಷ್ಣಾಪುರ ಶಾಖೆಯ ಸಿಬ್ಬಂದಿ ಶ್ರುತಿಕುಮಾರಿ ಸ್ವಾಗತಿಸಿ, ಅಶ್ವಿನಿ ವಂದಿಸಿದರು. ಶಾಖಾಧಿಕಾರಿ ಸುಜಾತಾ ಕಾರ್ಯಕ್ರಮ ನಿರೂಪಿಸಿದರು.



ಗ್ರಾಹಕರ ಸಹಕಾರದಿಂದ ಸಂಸ್ಥೆ ಉನ್ನತಿ
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ “ಸಂಸ್ಥೆಯು 13 ವರ್ಷದಲ್ಲಿ 33 ಶಾಖೆಗಳನ್ನು ತೆರೆದು, 2000 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲು ಗ್ರಾಹಕರೇ ಕಾರಣ. ಗ್ರಾಹಕರ ಸಹಕಾರದಿಂದ ನಮ್ಮ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಬ್ಯಾಂಕಿಂಗ್ ಸೇವೆಯ ಜೊತೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸಂಘದ ವತಿಯಿಂದ 86ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಕರಂಗಲ್ಪಾಡಿ ಶಾಖೆಯ ದಶಮಾನೋತ್ಸವ ಪ್ರಯುಕ್ತ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.50 ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಟ ಮೌಲ್ಯ ರೂ. 8,000 ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು. ಆಯ್ದ ರಜಾ ದಿನಗಳಲ್ಲಿಯೂ ಸ್ಟಾಂಪಿಂಗ್ ಸೇವೆಗಳನ್ನು ನೀಡಲಾಗುತ್ತಿದೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತು ವಾಹನ ವಿಮಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಒಳ್ಳೆಯ ಅಂಕ ಬಂದಾಗ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ಸಂಘದಲ್ಲಿ ಲಭ್ಯವಿರುವ ಪ್ರತಿಯೊಂದು ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

