Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆದಾಯ ತೆರಿಗೆ ಸುಳ್ಳು ಮಾಹಿತಿ ನೀಡಿದರೆ ಕಠಿಣ ಶಿಕ್ಷೆ
    News

    ಆದಾಯ ತೆರಿಗೆ ಸುಳ್ಳು ಮಾಹಿತಿ ನೀಡಿದರೆ ಕಠಿಣ ಶಿಕ್ಷೆ

    adminBy adminJune 28, 2025

    ಹೊಸ ನಿಯಮದ ಪ್ರಕಾರ ಶೇ.200ರವರೆಗೆ ದಂಡ, ಜೈಲು ಶಿಕ್ಷೆ!!

    ನವದೆಹಲಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಅಥವಾ ಆದಾಯ ಮುಚ್ಚಿಟ್ಟರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಹೊಸ ಆದಾಯ ತೆರಿಗೆ ನಿಯಮಗಳು ಜಾರಿಯಾಗಿದ್ದು, ತೆರಿಗೆದಾರರು ಸುಳ್ಳು ಕಡಿತಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ.200ರವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಹೊಸ ಮತ್ತು ಕಠಿಣ ನಿಯಮಗಳನ್ನು ಇಲಾಖೆ ಜಾರಿಗೆ ತಂದಿದ್ದು, ಇದರಿಂದ ಇನ್ಮುಂದೆ, ಸಣ್ಣ ತಪ್ಪುಗಳಿಗೂ ತೆರಿಗೆ ಪಾವತಿದಾರರು ದೊಡ್ಡ ಬೆಲೆ ತೆರಬೇಕಾಗುತ್ತದೆ.

    https://chat.whatsapp.com/EbVKVnWB6rlHT1mWtsgbch
    ತೆರಿಗೆದಾರರು ಸುಳ್ಳು ಕಡಿತಗಳನ್ನು (ಡಿಡಕ್ಷನ್‌ಗಳ) ತೋರಿಸಿದರೆ ಅಥವಾ ತಮ್ಮ ಆದಾಯ ಮರೆಮಾಚಿದರೆ ಪಾವತಿಸಬೇಕಾದ ತೆರಿಗೆಯ ಮೇಲೆ ಶೇ.200ರವರೆಗೆ ದಂಡ, ವಾರ್ಷಿಕ ಶೇ.24ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೆ ಸೆಕ್ಷನ್ 276 ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ನಿಮ್ಮ ಲೆಕ್ಕಪರಿಶೋಧಕರು (ಸಿಎ) ಅಥವಾ ತೆರಿಗೆ ಸಲಹೆಗಾರರು ತಪ್ಪು ಮಾಡಿದರೂ, ಕಾನೂನಿನ ಪ್ರಕಾರ ತೆರಿಗೆದಾರರಾದ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ‘ರಿಟರ್ನ್ ಸಿದ್ಧಪಡಿಸಿದ ವ್ಯಕ್ತಿಯಲ್ಲ, ಬದಲಾಗಿ ತೆರಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ, ಐಟಿಆರ್‌ ಸಲ್ಲಿಕೆ ವೇಳೆ ಪ್ರತಿಯೊಂದು ಮಾಹಿತಿಯೂ ನಿಖರವಾಗಿದೆ ಮತ್ತು ಅದಕ್ಕೆ ಸೂಕ್ತ ದಾಖಲೆಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಇಲಾಖೆ ತಿಳಿಸಿದೆ. ಈ ಹೊಸ ಕಠಿಣ ನಿಯಮಗಳು ಯಾವುದೇ ವಿನಾಯಿತಿ ಇಲ್ಲದೆ ಎಲ್ಲರಿಗೂ ಅನ್ವಯಿಸುತ್ತವೆ. ಅಂದರೆ, ಸಂಬಳ ಪಡೆಯುವ ನೌಕರರು, ಫ್ರೀಲ್ಯಾನ್ಸರ್‌ಗಳು ಹಾಗೂ ಡಾಕ್ಟರ್, ವಕೀಲರು ಸೇರಿದಂತೆ ಇತರ ವೃತ್ತಿಪರರು ಮತ್ತು ಉದ್ಯಮಿಗಳಿಗೂ ಅನ್ವಯಿಸುತ್ತದೆ.

    ದಂಡಕ್ಕೆ ಕಾರಣವಾಗುವ ಸಾಮಾನ್ಯ ತಪ್ಪುಗಳು
    ತಪ್ಪಾದ ಐಟಿಆರ್‌ ಫಾರ್ಮ್ ಆಯ್ಕೆ: ನಿಮ್ಮ ಆದಾಯದ ಮೂಲಕ್ಕೆ ಸರಿಹೊಂದುವ ಫಾರ್ಮ್ ಅನ್ನು ಆಯ್ಕೆ ಮಾಡದೇ ಇರುವುದು
    ದಾಖಲೆಗಳಿಲ್ಲದ ಡಿಡಕ್ಷನ್: ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಅಥವಾ ಇತರ ಕಡಿತಗಳಿಗೆ ಸರಿಯಾದ ಪುರಾವೆ ಒದಗಿಸದೇ ಕ್ಲೈಮ್‌ ಮಾಡುವುದು
    ಆದಾಯ ಮರೆಮಾಚುವಿಕೆ: ಬಡ್ಡಿ, ಫ್ರೀಲ್ಯಾನ್ಸ್ ಗಳಿಕೆ ಅಥವಾ ಇತರ ಮೂಲಗಳಿಂದ ಬಂದ ಹೆಚ್ಚುವರಿ ಆದಾಯವನ್ನು ಘೋಷಿಸದೇ ಇರುವುದು
    ವೈಯಕ್ತಿಕ ಖರ್ಚುಗಳನ್ನು ತೋರಿಸುವುದು: ವೈಯಕ್ತಿಕ ಖರ್ಚುಗಳನ್ನು ವ್ಯಾಪಾರದ ಖರ್ಚುಗಳೆಂದು ತಪ್ಪಾಗಿ ತೋರಿಸುವುದು

    ಒಮ್ಮೆ ತಪ್ಪು ಮಾಹಿತಿ ನೀಡಿ, ನಂತರ ಆದಾಯ ತೆರಿಗೆ ಇಲಾಖೆ ಅದನ್ನು ಪತ್ತೆಹಚ್ಚಿದರೆ, ನಿಮ್ಮ ರಿಟರ್ನ್ ಅನ್ನು ಪರಿಷ್ಕರಿಸಿದರೂ (ರಿವೈಸ್‌) ದಂಡದಿಂದ ಪಾರಾಗಲು ಸಾಧ್ಯವಿಲ್ಲ.

    ದಂಡದಿಂದ ಪಾರಾಗುವುದು ಹೇಗೆ?
    ಎಐಎಸ್‌ನೊಂದಿಗೆ ಹೋಲಿಕೆ: ಆದಾಯದ ವಿವರಗಳನ್ನು ವಾರ್ಷಿಕ ಮಾಹಿತಿ ಹೇಳಿಕೆ (ಎಐಎಸ್‌)ನೊಂದಿಗೆ ಹೋಲಿಸಿ ಖಚಿತಪಡಿಸಿಕೊಳ್ಳಿ
    ದಾಖಲೆಗಳನ್ನು ಇಟ್ಟುಕೊಳ್ಳಿ: ನೀವು ಕ್ಲೈಮ್ ಮಾಡುವ ಪ್ರತಿಯೊಂದು ಕಡಿತಕ್ಕೂ ಸೂಕ್ತ ದಾಖಲೆಗಳನ್ನು (ಬಾಡಿಗೆ ರಶೀದಿ, ಬಿಲ್‌ಗಳು) ಇಟ್ಟುಕೊಳ್ಳಿ.
    ಸರಿಯಾದ ಐಟಿಆರ್‌ ಫಾರ್ಮ್ ಆಯ್ಕೆ: ನಿಮ್ಮ ಆದಾಯಕ್ಕೆ ಅನುಗುಣವಾಗಿ ಸರಿಯಾದ ಐಟಿಆರ್‌ ಫಾರ್ಮ್ (ಐಟಿಆರ್‌-1 ರಿಂದ ಐಟಿಆರ್‌-7) ಅನ್ನು ಆಯ್ಕೆ ಮಾಡಿ.
    ಕೊನೆಯ ದಿನಾಂಕದೊಳಗೆ ಫೈಲ್ ಮಾಡಿ: ತಡವಾಗಿ ರಿಟರ್ನ್ ಸಲ್ಲಿಸುವುದನ್ನು ತಪ್ಪಿಸಿ. ಈ ಮೂಲಕ ದಂಡದಿಂದ ತಪ್ಪಿಸಿಕೊಳ್ಳಿ.

    ವೃತ್ತಿಪರರ ಸಲಹೆ ಪಡೆಯಿರಿ: ಅನುಮಾನಗಳಿದ್ದರೆ, ಐಟಿಆರ್‌ ಸಲ್ಲಿಕೆ ಮಾಡುವ ಮೊದಲು ಸರಿಯಾದ ತೆರಿಗೆ ವೃತ್ತಿಪರರೊಂದಿಗೆ ಸಮಾಲೋಚಿಸಿ.

    Central government IAS Income Tax IT Returns ITR
    Previous Articleಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ರಾಜಿ ಮಾಡಿಕೊಳ್ಳದೆ ಸಾಧನೆ
    Next Article ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಗುವಿನ ಚಿಕಿತ್ಸೆಗೆ ನೆರವು

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.