ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಪ್ರಧಾನ ಕಛೇರಿ ಹಾಗೂ ಬಿ.ಸಿ ರೋಡ್ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಕೈಕಂಬ ಬಿ.ಸಿರೋಡ್ ಬಳಿ ಇರುವ ಸಂಘದ ನೂತನ ನಿವೇಶನದಲ್ಲಿ ಶನಿವಾರ ನಡೆಯಿತು.

ಮೊಡಂಕಾಪು ವಲಯದ ಧರ್ಮಗುರು ವಂ|ಫಾ। ವಲೇರಿಯನ್ ಡಿಸೋಜ ಆಶೀರ್ವಚನ ನೆರವೇರಿಸುವ ಮೂಲಕ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೊ ಹಾಗೂ ಉಪಾಧ್ಯಕ್ಷ ವಲೇರಿಯನ್ ಬರೆಟ್ರೊ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLKಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕ ರಾಜೇಶ್ ನಾಯ್ಕ್ ಯು, ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಪುರಸಭೆ ಸದಸ್ಯ ಮಹಮ್ಮದ್ ನಂದರಬೆಟ್ಟು ಭಾಗವಹಿಸಿದ್ದರು. ಸಂಘದ ಪರವಾಗಿ ಐವನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ವಿನ್ಸೆಂಟ್ ಕ್ಲಾಡಿ ಕಾರ್ಲೊ ವಂದಿಸಿದರು. ಸಿಬ್ಬಂದಿ ವಿವಿಯನ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

