ಎಸ್.ಕೆ.ಜಿ.ಐ.ಕೋ-ಆಪ್ ಸೊಸೈಟಿಗೆ 4.95 ಕೋಟಿ ರೂ. ಲಾಭ
ಎಸ್.ಕೆ.ಜಿ.ಐ.-ಪಾಲ್ಕೆ ಪ್ರಶಸ್ತಿ ಪ್ರದಾನ, ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ
ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2023-2024ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ ಉರ್ವ ಚರ್ಚ್ ಸೆಂಟೆನರಿ ಹಾಲ್‌ನಲ್ಲಿ ಜರಗಿತು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆರ್ಥಿಕ ತ:ಖ್ತೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ, 2024-2025ನೇ ಸಾಲಿನ ಆಯ-ವ್ಯಯ ಪಟ್ಟಿ ಹಾಗೂ 2024-2025ರ ಸಾಲಿನ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ಮಂಡಿಸಿದರು. ವಜ್ರಮಹೋತ್ಸವ ವರ್ಷದ ಪ್ರಯುಕ್ತ 2023-2024ರ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆಯಲಾಯಿತು.
ಪಂಚ ಕಸುಬುಗಳಲ್ಲಿ ಸಾಧನೆಗೈದ ಐದು ಮಂದಿ ಶಿಲ್ಪಿಗಳಾದ ಸ್ವರ್ಣಶಿಲ್ಪ- ಎಚ್. -ಗೋಪಾಲ ಆಚಾರ್ಯ-ಬೆಳ್ತಂಗಡಿ, ಕಾಷ್ಠಶಿಲ್ಪ- ಮಾಧವ ಆಚಾರ್ಯ- ಸಂತೆಕಟ್ಟೆ ಉಡುಪಿ, ಎರಕ ಶಿಲ್ಪ- ರಾಮಚಂದ್ರ ಆಚಾರ್ಯ ಕುಂಟಾಡಿ ಕಾರ್ಕಳ, ಅಯಸ್ ಶಿಲ್ಪ- ಸೀತಾರಾಮ ಆಚಾರ್ಯ- ಗುಂಡಮಜಲು ಮುಡಿಪು, ಶಿಲಾ ಶಿಲ್ಪ- ಸೂರ್ಯಕಾಂತ ಆಚಾರ್ಯ- ಶಿರ್ವ ಇವರಿಗೆ ೨೦೨೩-೨೦೨೪ರ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ – ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಪಿ.ನಾರಾಯಣ ಆಚಾರ್-ಕುಳಾಯಿ (ವೈದಿಕ ಕ್ಷೇತ್ರ), ಡಾ|| ಎಸ್.ಪಿ. ಗುರುದಾಸ್-ಮಂಗಳೂರು (ಹರಿಕಥಾ ಕ್ಷೇತ್ರ), ರಮೇಶ್ ಕೆ.-ಕಲ್ಲಡ್ಕ (ಕಲಾ ಕ್ಷೇತ್ರ), ಮೀನಾಕ್ಷಿ ನಾರಾಯಣ ಆಚಾರ್- ಬಂಟ್ವಾಳ (ನಾಟಿ ವೈದ್ಯೆ), ಶ್ರೇಯ ಎ.- ಅಲಂಕಾರು (ಯಕ್ಷಗಾನ ಕ್ಷೇತ್ರ) ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
2023-2024ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನ ಕೋಟೇಶ್ವರ ಶಾಖೆ ಮತ್ತು ದ್ವಿತೀಯ ಸ್ಥಾನ ಮಂಗಳೂರು ಶಾಖೆಗೆ ನೀಡಲಾಯಿತು. ಎರಡನೇ ವರ್ಗದಲ್ಲಿ ಪ್ರಥಮ ಸ್ಥಾನ ಶಿರ್ವ-ಮಂಚಕಲ್ ಶಾಖೆಗೆ ಮತ್ತು ದ್ವಿತೀಯ ಸ್ಥಾನ ಬೆಳ್ಳಂಪಳ್ಳಿ ಶಾಖೆಗೆ ನೀಡಲಾಯಿತು. ಪ್ರೋತ್ಸಾಹಕ ಪ್ರಶಸ್ತಿಯನ್ನು ಗುರುವಾಯನಕೆರೆ ಶಾಖೆಗೆ ನೀಡಲಾಯಿತು.
2023-2024ನೇ ಸಾಲಿನಲ್ಲಿ ಸಂಸ್ಥೆ ರೂ.4,95,81,869.97 ನಿವ್ವಳ ಲಾಭ ಗಳಿಸಿದ್ದು, ರೂ.21,706 ಲಕ್ಷ ಠೇವಣಿ ಇದ್ದು, ರೂ.18,994.64 ಲಕ್ಷ ಸದಸ್ಯರ ಸಾಲ ಹೊರಬಾಕಿ ಇದ್ದು, ಒಟ್ಟು ವ್ಯವಹಾರ ರೂ.1,009.21 ಕೋಟಿ ಆಗಿದೆ. ಸೊಸೈಟಿಯ ದುಡಿಯುವ ಬಂಡವಾಳ ರೂ.24,775.37 ಲಕ್ಷ ಇರುತ್ತದೆ. ಸೊಸೈಟಿಯ ಆಪದ್ಧನ ನಿಧಿ ರೂ.1,032.16 ಲಕ್ಷ, ಕಟ್ಟಡ ನಿಧಿ ರೂ.264.99 ಲಕ್ಷ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 17 ಬ್ಯಾಂಕಿಂಗ್ ಹಾಗೂ 1 ಕೈಗಾರಿಕಾ ಶಾಖೆ, ಆಡಳಿತ ಕಛೇರಿ, ಹಾಗೂ ಉಳಿದ 6 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿ, ಸದಸ್ಯರ ಬೇಡಿಕೆಗೆ ಸ್ಪಂದಿಸಿ ವ್ಯವಹಾರ ನಡೆಸುತ್ತಿದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿ ದರ ನೀಡುತ್ತಾ, ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆಗೈಯುತ್ತಾ ಸದಸ್ಯರಿಗೆ ಕಳೆದ 34 ವರ್ಷದಿಂದ ಡಿವಿಡೆಂಡ್ ನೀಡುತ್ತಾ, ಸದಸ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ. ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಮಾತನಾಡಿ, ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳು ಎಲ್ಲರ ಹೃದಯ ತಟ್ಟಿದಲ್ಲಿ ಅದೇ ಸಂತೃಪ್ತಿ ಎಂದರು ಹಾಗೂ ಸೊಸೈಟಿಯ ಬೆಳವಣಿಗೆಗಾಗಿ ಸಹಕರಿಸಿ-ಪ್ರೋತ್ಸಾಹಿಸಿದ ಎಲ್ಲಾ ನಿರ್ದೇಶಕರನ್ನು, ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಸಂಸ್ಥೆಯ ಕಾನೂನು ಸಲಹೆಗಾರ ಎಂ.ಪುರುಷೋತ್ತಮ ಭಟ್ ಸಂಸ್ಥೆ ಕಾರ್ಯವನ್ನು ಪ್ರಶಂಸಿಸಿ, ಸಲಹೆ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷಎ.ಆನಂದ ಆಚಾರ್ಯ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ಜಯ ವಿ.ಆಚಾರ್ಯ, ಕೆ.ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್ ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು. ಪ್ರಕಾಶ್ ಆಚಾರ್ಯ ಕೆ., ಮಂಜುನಾಥ ಆಚಾರ್ಯ ಮತ್ತು ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ಪುರೋಹಿತ್ ವೈ.ವಿ.ವಿಶ್ವಜ್ಞಮೂರ್ತಿ ಪ್ರಾರ್ಥನೆಗೈದು, ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಉಷಾ ಮನೋಜ್ ಹಾಗೂ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು. ಕೆ.ಯಜ್ಞೇಶ್ವರ ಆಚಾರ್ಯ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com