ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಘೋಷಿಸಲಾಗಿದ್ದು ಇದರಿಂದ ವೇತನ ಪಡೆಯುವವರಿಗೆ ನೆರವಾಗಲಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ಕಸ್ಟಮ್ಸ್ ಸುಂಕ ರಚನೆಯ ಸಮಗ್ರ ಪರಿಶೀಲನೆ ನಡೆಸುವ ಭರವಸೆಯನ್ನು ವಿತ್ತ ಸಚಿವರು ನೀಡಿದ್ದಾರೆ. ಇ-ಕಾಮರ್ಸ್‌ನಲ್ಲಿ ಟಿಡಿಎಸ್ ದರವನ್ನು 0.1% ಕ್ಕೆ ಇಳಿಸಲಾಗುವುದು. ದತ್ತಿಗಳಿಗೆ ಎರಡು ತೆರಿಗೆ ವಿನಾಯಿತಿ ಆಡಳಿತಗಳನ್ನು ಒಂದಾಗಿ ವಿಲೀನ, ಚಿನ್ನ ಮತ್ತು ಬೆಳ್ಳಿ ಮೇಲಿನ ಸುಂಕ ತಗ್ಗಿಸಿ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಮತ್ತು ಪ್ಲಾಟಿನಂ ಮೇಲೆ 6.5% ಕ್ಕೆ ಇಳಿಸಲು ಪ್ರಸ್ತಾಪ ನೀಡಲಾಗಿದೆ.
ಹೊಸ ತೆರಿಗೆ ಪದ್ಧತಿಯಲ್ಲಿರುವವರಿಗೆ 50,000 ರೂ.ನಿಂದ 75,000 ರೂ.ಗೆ ಹೆಚ್ಚಳ ಮಾಡಲಾಗಿದೆ.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಹೊಸ ತೆರಿಗೆ ಸ್ಲ್ಯಾಬ್‌ಗಳು:
3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
3 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಶೇ.5 ತೆರಿಗೆ
7 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.10 ತೆರಿಗೆ
10 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ.15 ತೆರಿಗೆ
12 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.20 ತೆರಿಗೆ
15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆ
ಯಾವುದೆಲ್ಲ ಅಗ್ಗ
ಕ್ಯಾನ್ಸರ್ ಔಷಧ, ಪೆಟ್ರೋಲ್ 2 ರೂ. ಇಳಿಕೆ, ಮೊಬೈಲ್ ಫೋನ್, ಆಮದು ಚಿನ್ನ, ಆಮದು ಬೆಳ್ಳಿ, ಸೀ ಫುಡ್, ಎಕ್ಸ್‌ರೇ ಮೆಷಿನ್, ಸೋಲಾರ್ ಪ್ಯಾನೆಲ್
ಯಾವುದು ದುಬಾರಿ
ವಿದ್ಯುತ್ ಉಪಕರಣ, ಪ್ಲಾಸ್ಟಿಕ್, ಬಟ್ಟೆ
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694