ಕುಶಾಲನಗರ ಶಾಖೆ ಉದ್ಘಾಟಿಸಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ
ಮಂಗಳೂರು: ಪ್ರಣವ ಸೌಹಾರ್ದ ಸಹಕಾರಿ ಸಂಘದ ಬೆಳವಣಿಗೆ ಶ್ಲಾಘನೀಯವಾದುದು. ಉತ್ತಮ, ಪ್ರಾಮಾಣಿಕ ಆಡಳಿತದಿಂದ ಸಂಸ್ಥೆ ಉನ್ನತಿ ಹೊಂದುತ್ತಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘದ ಎಂಟನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಹಕಾರ ತತ್ವದಡಿ ಕೆಲಸ ಮಾಡುವಾಗ ಸಾಮಾಜಿಕ ಬದ್ಧತೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಆರ್.ಪ್ರಸಾದ್ ಸ್ವಾಗತಿಸಿ, ಪ್ರಣವ ಸೌಹಾರ್ದದ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಸಾಮಾಜಿಕ ಕಾರ್ಯಕರ್ತ ಭಾರತೀಶ್ ದೇಶದ ಈಗಿನ ವ್ಯವಸ್ಥೆ ಹಾಗೂ ನಮ್ಮ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಧ್ವನಿ ಫೌಂಡೇಶನ್ ಅಧ್ಯಕ್ಷೆ ಶ್ವೇತಾ ಮಡಪ್ಪಾಡಿ ಮಾತನಾಡಿ, ಆರ್ಥಿಕ ಸಂಸ್ಥೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಸಹಾಯಕ್ಕೆ ನಿಲ್ಲಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮೈಸೂರು, ಮಂಡ್ಯ, ಕೊಡಗು ಜಿಲ್ಲೆಯ ಸೌಹಾರ್ದ ಒಕ್ಕೂಟ ಅಧ್ಯಕ್ಷ ನಾರಾಯಣ ರಾವ್, ಕುಶಾಲನಗರ ನಳಂದ ಇಂಟರ್‌ನ್ಯಾಶನಲ್ ಸ್ಕೂಲ್ ನಿರ್ದೇಶಕ ನಾಮ್‌ಗೇಲ್ ಶುಭ ಹಾರೈಸಿದರು.
ಪ್ರಣವ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ನಿರ್ದೇಶಕರು, ಕುಶಾಲನಗರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ನವೀನ್, ರಘು, ನಿಸಾರ್ ಅಹಮದ್, ಲೂವಿಸ್ ರಾಡ್ರಿಗಸ್, ಸಂಗಮೇಶ್, ಅರ್ಚನಾ ಉಪಸ್ಥಿತರಿದ್ದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಜಿ.ಪ್ರಶಾಂತ್ ಪೈ ವಂದಿಸಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694.