ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ ವಿವಿಧ 39 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸನ್ನದು ಲೆಕ್ಕಪರಿಶೋಧಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ಸಹಾಯಕರು ಇತ್ಯಾದಿ ಹಲವು ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.
ಹುದ್ದೆಗಳ ವಿವರ
ಸನ್ನದು ಲೆಕ್ಕಪರಿಶೋಧಕರು (Charted Accountant) : ಸಿಎ/ ಸಿಎಸ್ /ICWA. ಗರಿಷ್ಠ ವಯಸ್ಸು 35 ವರ್ಷ.
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ) : ಕಾನೂನು ಪದವಿ ಜತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ. ಬ್ಯಾಂಕಿಂಗ್ ಅಥವಾ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವ ಹೊಂದಿದವರಿಗೆ ಆದ್ಯತೆ. ಗರಿಷ್ಠ 35 ವರ್ಷ.
ಮಾನವ ಸಂಪನ್ಮೂಲ ಅಧಿಕಾರಿ (ಎಂಬಿಎ, ಎಚ್.ಆರ್ ) (ಅಧಿಕಾರಿ ಶ್ರೇಣಿ) : ಎಂಬಿಎ, ಎಚ್.ಆರ್ ಪದವಿ. ಗರಿಷ್ಠ 35 ವರ್ಷ.
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ) : ಎಂಎ ಕನ್ನಡ ಅಥವಾ MSW ಪದವಿ. 3 ವರ್ಷ ಕನಿಷ್ಠ ಕಾರ್ಯಾನುಭವ. ಗರಿಷ್ಠ 35 ವರ್ಷ.
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ) : ಯಾವುದೇ ಪದವಿ. ಗರಿಷ್ಠ 30 ವರ್ಷ.
ಸಹಾಯಕರು : ಯಾವುದೇ ಪದವಿ. ಗರಿಷ್ಠ 30 ವರ್ಷ.
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ) : ಯಾವುದೇ ಪದವಿ. ಗರಿಷ್ಠ 30 ವರ್ಷ.
ಕಿರಿಯ ಸಹಾಯಕರು : ಪಿಯುಸಿ. ಗರಿಷ್ಠ 25 ವರ್ಷ.
ಉಪಸಿಬ್ಬಂದಿ ಕಮ್ ವಾಹನ ಚಾಲಕ : ಎಸ್‌ಎಸ್‌ಎಲ್‌ಸಿ ಪಾಸ್. ಡಿಎಲ್ ಕಡ್ಡಾಯ.
ಅರ್ಜಿ ಸಲ್ಲಿಸುವ ವಿಧಾನ
ಮೇಲಿನ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು www.souharda.coop ನಿಂದ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿ ಹಾಗೂ ಅರ್ಹತಾ ದಾಖಲೆಳನ್ನು ಮತ್ತು ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಸೌಹಾರ್ಧ ಸಹಕಾರಿ ಸೌಧ, ನಂ 68, ಒಂದನೇ ಮಹಡಿ, 17 & 18ನೇ ಅಡ್ಡರಸ್ತೆ ಮಧ್ಯೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು -560055.
ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಅಧಿಸೂಚನೆ ಮತ್ತು ಮಾಹಿತಿಗಳನ್ನು www.souharda.coop ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 26, 2024. ಸಂಜೆ 5.30.
ಅರ್ಜಿ ಶುಲ್ಕ ವಿವರ
ಮೇಲಿನ ಹುದ್ದೆಗಳ ಪೈಕಿ ಮೊದಲ 5 ಹುದ್ದೆಗಳಿಗೆ ಅರ್ಜಿ ಶುಲ್ಕ ರೂ.500. ನಂತರದ 4 ಹುದ್ದೆಗಳಿಗೆ ಅರ್ಜಿ ಶುಲ್ಕ ರೂ.300. ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಡಿಡಿ ತೆಗೆದು, ಅರ್ಜಿಯ ಜತೆಗೆ ಲಗತ್ತಿಸಿ ಕಳುಹಿಸುವುದು.
ಅರ್ಜಿಯಲ್ಲಿ ನಮೂದಿಸುವ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನೇಮಕಾತಿ ಪ್ರಕ್ರಿಯೆಯ ಸಂವಹನಕ್ಕೆ ಪರಿಗಣಿಸಲಾಗುವುದು.
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸನ್ನದು ಲೆಕ್ಕಪರಿಶೋಧಕರು (Charted Accountant) 1
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ) 2
ಮಾನವ ಸಂಪನ್ಮೂಲ ಅಧಿಕಾರಿ (ಎಂಬಿಎ, ಎಚ್.ಆರ್ ) (ಅಧಿಕಾರಿ ಶ್ರೇಣಿ) 1
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ) 1
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ) 11
ಸಹಾಯಕರು 8
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ) 2
ಕಿರಿಯ ಸಹಾಯಕರು 11
ಉಪಸಿಬ್ಬಂದಿ ಕಮ್ ವಾಹನ ಚಾಲಕ 2
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
ದೂರವಾಣಿ ಸಂಖ್ಯೆ : 080-23378375.
ಇ-ಮೇಲ್ ವಿಳಾಸ : souharda@souharda.coop.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: editor@sahakaraspandana.in, sahakaraspandana@gmail.com
ಮಾಹಿತಿಗೆ: 9901319694.