ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮುಡಿಪು ಶಾಖೆಯ ೭ನೇ ವಾರ್ಷಿಕೋತ್ಸದ ಪ್ರಯುಕ್ತ ೫೫ನೇ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರವು ಕಟ್ಟೆ ಪ್ರೆಂಡ್ಸ್ (ರಿ) ಮುಡಿಪು, ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ) ಬಾಳೆಪುಣಿ, ಲಯನ್ಸ್ ಮತ್ತು ಲಿಯೋ ಕ್ಲಬ್, ಮಂಗಳೂರು , ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ , ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ ಇಲ್ಲಿಯ ನುರಿತ ತಜ್ಞ ವೈದ್ಯ ತಂಡದವರಿAದ ದಿನಾಂಕ ೧೪/೧೦/೨೦೨೩ ರಂದು ಗೋಪಾಲಕೃಷ್ಣ ಸಭಾಗೃಹ ಮುಡಿಪು ಇಲ್ಲಿ ಜರುಗಿತು.
ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ ರವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.
ಆರೋಗ್ಯ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಿಬಿರಕ್ಕೆ ಸಹಕರಿಸಿದ ಕಟ್ಟೆ ಪ್ರೆಂಡ್ಸ್ (ರಿ) ಮುಡಿಪು, ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ) ಬಾಳೆಪುಣಿ, ಲಯನ್ಸ್ ಮತ್ತು ಲಿಯೋ ಕ್ಲಬ್, ಮಂಗಳೂರು ,ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ ಅಭಿನಂದನೆ ಹಾಗೂ ಧನ್ಯವಾದವನ್ನು ಸಲ್ಲಿಸಿದರು ನಂತರ ಮಾತಾನಾಡಿ ಸಂಘವು ಕೇವಲ ಶಿಬಿರ ಮಾತ್ರವಲ್ಲ , ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿ ಗಳಿಗೆ ನಿರಂತರವಾಗಿ ಅವಶ್ಯವಾದ ಯಾವುದೇ ರೀತಿಯ ನೇರವನ್ನು ಕೂಡಾ ನಮ್ಮ ಸಹಕಾರಿ ಸಂಸ್ಥೆ ನೀಡುತ್ತಾ ಬಂದಿದೆ .
ನಮ್ಮ ಸಂಘವು ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಸಂಘವು ತನ್ನ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ನಿರಂತರವಾಗಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದೆ. ೫೫ ನೆ Ã ಉಚಿತ ಆರೋಗ್ಯ ಶಿಬಿರವು ಇದಾಗಿದ್ದು ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಈಗಾಗಲೇ ಸುಮಾರು ೧೫೦೦೦ ಕ್ಕೂ ಮಿಕ್ಕಿ ಜನರು ಪಡೆದಿರುತ್ತಾರೆ. ಕಣ್ಣಿನ ಪೊರೆಯ ಶಸ್ತçಚಿಕಿತ್ಸೆಯನ್ನು ೪೦೦ ಕ್ಕೂ ಮಿಕ್ಕಿ ಜನರಿಗೆ ಮಾಡಲಾಗಿದೆ. ಈಗಾಗಲೇ ಸಂಘವು ಸುಮಾರು ೧೦೦೦೦ ಕ್ಕೂ ಮಿಕ್ಕಿ ಜನರಿಗೆ ಉಚಿತ ಕನ್ನಡಕವನ್ನು ವಿತರಿಸುತ್ತಾ ಬಂದಿರುತ್ತದೆ. ಅಷ್ಟೆ ಅಲ್ಲದೆ ಹಲವು ರೋಗಿಗಳಿಗೆ ಆರ್ಥಿಕ ನೆರವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಮೂಲಕ ನೀಡುತ್ತಾ ಬಂದಿದೆ ಸಂಘವು ಕೇವಲ ಬ್ಯಾಂಕಿAಗ್ ವ್ಯವಹಾರವಲ್ಲದೆ ಹಲವು ಸಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಗ್ರಾಹಕರು ಬ್ಯಾಂಕ್‌ನಲ್ಲಿ ದೊರಕುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
ಶಿಬಿರದ ಉದ್ಘಾಟನೆಯಲ್ಲಿ ಭಾಗವಹಿಸಿದ ಹಿರಿಯ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಯ ನಿವೃತ್ತ ವೈದ್ಯರಾದ ಡಾ ಸದಾನಂದ ಕಾಮತ್ ರವರು ಮಾತಾಡಿ ಆರೋಗ್ಯವು ಎಲ್ಲರಿಗೂ ಅಗತ್ಯವಾದ ಒಂದು ಆಂಶ, ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳುವುದು ಹಾಗೂ ಇಂತಹ ಸಮಾಜ ಸೇವಾ ಕಾರ್ಯಕ್ರಮŒವನ್ನು ಆಯೋಜನೆ ಮಾಡುವ ಸಂಘದ ಕಾರ್ಯವನ್ನು ಶ್ಲಾಘಿಸಿದರು .ಸಂಘವು ಇಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಧ್ಯಕ್ಷರಾದ ಶ್ರೀ ನಾಗೇಶ್ ಕಾಮತ್ ಇವರು ಆರ್ಥಿಕ ಸೇವೆಯ ಜೊತೆಗೆ ಸಾಮಾಜಿಕ ಸೇವೆಯನ್ನು ಸಂಘ ನೀಡುತ್ತಿದ್ದು ಮುಂದೆಯು ಇಂತಹ ಕಾರ್ಯಕ್ರಮ ಮಾಡುವಂತೆ ಪ್ರೋತ್ಸಾಹಿಸಿದರು ಶಿಬಿರಕ್ಕೆ ಶುಭಕೋರಿದರು.
ಲಯನ್ಸ್ ಕ್ಲಬ್ ಇದರ ಆಧ್ಯಕ್ಷರಾದ ಶ್ರೀ ಶೀನಾ ಪೂಜಾರಿ ಮಾತಾಡಿ ಆತ್ಮಶಕ್ತಿ ಬ್ಯಾಂಕಿAಗ್ ಜೊತೆಗೆ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ ತಮ್ಮ ಸಂಸ್ಥೆ ಕೂಡ ಇದರೊಂದಿಗೆ ಕೈ ಜೋಡಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕುರ್ನಾಡು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ ಇವರು ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಮುಡಿಪು ಜನತೆ ಪಡೆಯಿರಿ ಹಾಗೂ ಶಿಬಿರಕ್ಕೆ ಶುಭವನ್ನು ಹಾರೈಸಿದರು
ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿಯ ವೈದ್ಯರಾದ್ಯ್ ಡಾ†† ಆತೀ¥s಼Á. ರವರು ಮಾತಾಡಿ ದಂತ ಚಿಕಿತ್ಸೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್. ಪಿ, ನಿರ್ದೇಶಕರುಗಳಾದ,ಶ್ರೀ ಗೋಪಾಲ್ ಎಮ್, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್, ಕಟ್ಟೆ ಪ್ರೆಂಡ್ಸ್ (ರಿ) ಮುಡಿಪು ಇದರ ಅಧ್ಯಕ್ಷರಾದ ಶ್ರೀ ಸುಖೇಶ,ಅಮ್ಮೆಂಬಳ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಕರುಣಾಕರ್,ಕೆನರಾ ಬ್ಯಾಂಕ್ ನ ನಿವೃತ್ತ ಸಹಾಯಕ ಪ್ರಬಂಧಕರಾಗಿರುವ ಶ್ರೀ ಉಮೇಶ್ ಭಟ್, ಬಾಳೆಪುಣಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ (ರಿ) ಇದರ ಉಪಾಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ,ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ , ಯೆನೆಪೋಯ ಇಲ್ಲಿಯ ವೈದ್ಯಕೀಯ ಅಧಿಕಾರಿ ಡಾ†† ಹನ್ನ, ಲಿಯೋ ಕ್ಲಬ್ ನ ಅಧ್ಯಕ್ಷರಾದ ಶ್ರೀ ಕ್ರಿಸ್ಟಲಿಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಶಿಬಿರದಲ್ಲಿ ಸುಮಾರು ೨೫೦ ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರ ದ ಪ್ರಾಯೋಜನವನ್ನು ಪಡೆದುಕೊಂಡರು.
ಸಂಘ ದ ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸೌಮ್ಯಲತ ರವರು ಸ್ವಾಗತಿಸಿ, ಶಾಖಾಧಿಕಾರಿಯಾದ ಕುಮಾರಿ ರಕ್ಷಿತ ರವರು ವಂದಿಸಿದರು.ಸAಘದ ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕ ಸನಿಲ್ ಹಾಗೂ ಪ್ರಭಾರ ಶಾಖಾಧಿಕಾರಿ ಕುಮಾರಿ ವಿಂಕಿತ ರವರು ಕಾರ್ಯಕ್ರಮವನ್ನು ನಿರೂಪಿಸಿದರು.