ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಕಂಪ್ಯೂಟೀಕರಣ ಯೋಜನೆ ರೀತಿಯಲ್ಲಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಎಆರ್ಡಿಬಿಗಳ ಗಣಕೀಕೃತ ಕಾರ್ಯಕ್ಕೆ ಅನುಮೋದನೆ ನೀಡಲಾಗಿದೆ . ಸೆಂಟ್ರಲ್ ರಿಜಿಸ್ಟ್ರಾರ್ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್ ಕಚೇರಿಗಳನ್ನು ನ್ಯಾಷನಲ್ ಯೂನಿಫೈಡ್ ಸಾಫ್ಟ್ವೇರ್ ಮೂಲಕ ಕಂಪ್ಯೂಟರೀಕರಣಗೊಳಿಸುವುದಾಗಿಯೂ ಹಾಗೂ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸೆಂಟ್ರಲ್ ಪ್ರಾಜೆಕ್ಟ್ ಮಾನಿಟರಿಂಗ್ ಯೂನಿಟ್ ಅನ್ನು ಆರಂಭಿಸುವುದಾಗಿ ತಿಳಿಸಲಾಗಿದೆ. ಇದರ ಅಂದಾಜು ವೆಚ್ಚ 225 ಕೋಟಿ ರೂ ಎಂದಿದೆ.
ನವದೆಹಲಿ, ಅಕ್ಟೋಬರ್ 8: ದೇಶದ ಸಹಕಾರಿ ಕ್ಷೇತ್ರಕ್ಕೆ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Union Ministry of Cooperation) ಪ್ರಮುಖ ತೀರ್ಮಾನಗಳನ್ನು ಇದೀಗ ಕೈಗೊಂಡಿದೆ. ದೇಶದ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಿಜಿಸ್ಟ್ರಾರ್ಗಳನ್ನು (registrars of cooperatives) ಸಂಪೂರ್ಣವಾಗಿ ಕಂಪ್ಯೂಟರೀಕರಿಸಲಾಗುವುದಾಗಿಯೂ ಈ ಪೈಕಿ 13 ರಾಜ್ಯಗಳಲ್ಲಿರುವ 1,851 ಕೃಷಿ ಮತ್ತು ಗ್ರಾಮೀಣಾಭವೃದ್ಧಿ ಬ್ಯಾಂಕ್ಗಳನ್ನೂ (ಎಆರ್ಡಿಬಿ) ಸದೃಡವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಿಡಲು ಆದೇಶಿಸಿದೆ.
ಈ ಯೋಜನೆಯು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (Primary Agriculture Credit Societies) ಕಂಪ್ಯೂಟೀಕರಣ ಯೋಜನೆಯ ರೀತಿಯಲ್ಲಿಯೇ ಕೇಂದ್ರದ ಪ್ರಾಯೋಜಕತ್ವದಲ್ಲಿ ಎಆರ್ಡಿಬಿಗಳ ಗಣಕೀಕೃತ ಕಾರ್ಯಕ್ಕೆ ಅನುಮೋದನೆ ನೀಡಲಾಗಿದೆ. ಸೆಂಟ್ರಲ್ ರಿಜಿಸ್ಟ್ರಾರ್ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್ ಕಚೇರಿಗಳನ್ನು ನ್ಯಾಷನಲ್ ಯೂನಿಫೈಡ್ ಸಾಫ್ಟ್ವೇರ್ ಮೂಲಕ ಕಂಪ್ಯೂಟರೀಕರಣಗೊಳಿಸಲಾಗುತ್ತದೆ.