ನವೆಂಬರ್ 20, ಶನಿವಾರ ಮೂಡುಬಿದ್ರೆಯ ಶ್ರೀ ಧವಲಾ ಮಹಾವಿದ್ಯಾಲಯ ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಹಕಾರ ತತ್ವದಡಿ “ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ” ಎಂಬ ಧ್ಯೇಯದೊಂದಿಗೆ ಆರಂಭಿಸುತ್ತಿರುವ ಯುವ ಸ್ಪಂದನ ಸೌಹಾರ್ದ ಕೋಅಪರೆಟಿವ್ ಸೊಸೈಟಿ ಲಿ. ನ ಜಾಲತಾಣ ಲೋಕಾರ್ಪಣಾ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಇಂದು ಸಹಕಾರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತ ರವಾದದ್ದು , ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಯುವ ಸ್ಪಂದನದಂತಹ ಸಹಕಾರಿ ಸಂಘದ ಮೂಲಕ ತಮ್ಮ ಅಗತ್ಯತೆಯನ್ನು ತಾವೇ ಈಡೇರಿಸಲು ಹೊರಟಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.
ಶ್ರೀ ಧವಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುದರ್ಶನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಯುವಸ್ಪಂದನ ಜಾಲತಾಣದ ಲೋಕಾರ್ಪಣೆಯನ್ನು ನೆರೆವೇರಿಸಿದರು.
ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥರಾದ ಡಾ. ರೂಪಾ ಕೆ ಎಲ್ಲರನ್ನೂ ಸ್ವಾಗತಿಸಿದರು. ಯುವ ಸ್ಪಂದನ ಸೌಹಾರ್ದ ಕೋಆಪರೇಟಿವ್ ನ ಮುಖ್ಯ ಪ್ರವರ್ತಕರಾದ ಶ್ರೀ ಜಿತಿನ್ ಜಿಜೋ ಪ್ರಾಸ್ತಾವಿಕನುಡಿಗಳನ್ನಾಡಿದರು ಮತ್ತು ಪ್ರವರ್ತಕರಾದ ಪೃಥ್ವೀಶ್ ಧರ್ಮಸ್ಥಳ ಇವರು ವಂದನಾರ್ಪಣೆಯನ್ನು ಮಾಡಿದರು ಹಾಗೂ ಉಪನ್ಯಾಸಕರಾದ ಶ್ರೀಮತಿ. ಮಲ್ಲಿಕಾ ಇವರು ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು .ಯುವಸ್ಪಂದನ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಎಲ್ಲಾ ಪ್ರವರ್ತಕರು ಉಪಸ್ಥಿತರಿದ್ದರು.