ಮೈಸೂರು: ಸಪ್ತಶ್ರೀ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಮೈಸೂರು ನಗರ ರಾಮಕೃಷ್ಣನಗರದ ರಮಾ ಗೋವಿಂದ ರಂಗಮಂದಿರದಲ್ಲಿ 73ನೇ ಸಹಕಾರಿ ಸಪ್ತಾಹ, ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ವಯೋಮಾನ ಸದಸ್ಯರು ಹಾಗೂ ಸದಸ್ಯತ್ವದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
https://chat.whatsapp.com/FCEnlTkAKCC0MGPhXtX4i4
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಪ್ತಶ್ರೀ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎಂ.ಎಸ್.ಚಂದ್ರಶೇಖರ್ ವಹಿಸಿದ್ದರು. ಶಾಸಕ ಟಿ.ಎಸ್ ಶ್ರೀವತ್ಸ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಎಂ.ಸಿ.ಡಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಲ್ಲೇನಹಳ್ಳಿ ಶಂಕರ್ ಭಾಗವಹಿಸಿದ್ದರು. ಸಾಹಿತಿಗಳಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ನೌಕರ ವೃಂದದವರು, ಸದಸ್ಯರು, ಪ್ರತಿಭಾ ಪುರಸ್ಕೃತರು ಭಾಗವಹಿಸಿದ್ದರು. ಸೊಸೈಟಿಯ ನಿರ್ದೇಶಕ ಎನ್ ನಾಗಚಂದ್ರ ಕಾರ್ಯಕ್ರಮ ನಿರೂಪಿಸಿದರು.



