ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ರಮಾನಾಥ ಸನಿಲ್ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.
https://chat.whatsapp.com/FCEnlTkAKCC0MGPhXtX4i4
ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ ಎಸ್.ಕೊಂಡಾಣ, ಸೀತಾರಾಮ್ ಎನ್, ಗೋಪಾಲ್ ಎಂ, ಆನಂದ ಕೆ., ಗಣೇಶ್, ವಸಂತ್ ಬಿ., ಶ್ರೀಕಾಂತ್ ಸುವರ್ಣ, ಎಂ.ಪಿ ರವಿಶಂಕರ್, ರಾಜಮ್ಮ ಹಾಗೂ ಶ್ರೀಪ್ರಮೀಳಾ ಎಸ್. ಅಮೀನ್ ಇವರ ಉಪಸ್ಥಿತಿಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.


೨೦೧೨ರ ಜನವರಿ ೩೦ರಂದು ಚಿತ್ತರಂಜನ್ ಬೋಳಾರ್ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಸಂಘವು ಇಂದು ಅವರ ಕಾರ್ಯತತ್ಪರತೆ, ಸೇವಾಭಾವ ದೂರದೃಷ್ಟಿ, ಇಚ್ಚಾಶಕ್ತಿಯ ಕಾರಣವಾಗಿ ನಿರಂತರ ನಾಲ್ಕನೇ ಬಾರಿ ಸತತವಾಗಿ ಅವಿರೋಧವಾಗಿ ಆಯ್ಕೆಗೊಂಡು ಮತ್ತೆ ಮುಂದಿನ ಅವಧಿಗೆ ಸಂಘವನ್ನು ಮುನ್ನಡೆಸುವ ಹೊಣೆಗಾರಿಕೆ ಹೊತ್ತಿದ್ದಾರೆ. ಸ್ಥಾಪನೆಯ ಇದುವರೆಗಿನ ಹದಿನೈದು ವರ್ಷಗಳಲ್ಲಿ ೩೫ ಶಾಖೆಗಳನ್ನು ತೆರೆದು, ಸಹಕಾರ ರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಲಾಭಧಾಯಕ ಆರ್ಥಿಕ ಚಟುವಟಿಕೆಯ ಜೊತೆಜೊತೆಗೆ ಸಂಘವನ್ನು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸೇವಾಭಾವದಿ ವಿಸ್ತಾರಕವಾಗಿಸಿದ್ದಾರೆ. ವಿವಿಧ ಸಂಘ ಸಂಸ್ಥೆ, ದೇಗುಲ, ಮಂದಿರ, ಪ್ರತಿಷ್ಠಾನ ಮುಂತಾದುವುಗಳಲ್ಲಿ ಹಿರಿಯ ಸ್ಥಾನವನ್ನು ಅಲಂಕರಿಸಿ ಕ್ರಿಯಾಶೀಲತೆ ಮೆರೆಯುತ್ತಿದ್ದಾರೆ. ತನ್ನ ಸಾಧನೆ, ಯಶಸ್ಸು, ಕೊಡುಗೆ, ಸೇವೆ ಕಾರಣವಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಸಹಕಾರ ರತ್ನ ಪ್ರಶಸ್ತಿ ಜೊತೆಗೆ ಅಸಂಖ್ಯಾತ ಸಮ್ಮಾನ, ಅಭಿದಾನ, ಬಿರುದುಗಳಿಗೆ ಪಾತ್ರರಾಗಿದ್ದಾರೆ. ದಕ್ಷ ಆಡಳಿತ, ಸ್ವಷ್ಟ ನಿಲುವು ಅಪಾರ ಜ್ಞಾನ ಗ್ರಾಹಕ ಸ್ನೇಹಿ ಸೇವೆ. ಸಂಘದ ಶ್ರೇಷ್ಠ ಬೆಳವಣಿಗೆಗೆ ಬಹುವಾಗಿ ಕಾರಣವಾಗಿ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಮಗದೊಮ್ಮೆ ಅವಿರೋಧವಾಗಿ ಆಯ್ಕೆಗೊಳ್ಳುವಲ್ಲಿ ಸಹಕಾರಿಯಾಗುವಂತೆ ಮಾಡಿದೆ.


