Close Menu
    Top News

    ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ

    October 30, 2026

    ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    October 30, 2026

    ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    October 29, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ
    News

    ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ

    adminBy adminOctober 30, 2026

    ಶಿರ್ವ: ಗ್ರಾಹಕರ ವಿಶ್ವಾಸ ಗಳಿಸಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿಯ ದ್ವಿತೀಯ ಶಾಖೆಯು ಅಕ್ಟೋಬರ್ 31ರಂದು ಶಿರ್ವ ಮುಖ್ಯ ರಸ್ತೆಯ ಬೆಹರೈನ್ ಟವರ್ಸ್‌ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

    https://chat.whatsapp.com/FCEnlTkAKCC0MGPhXtX4i4
    ಉಡುಪಿಯ ಕುಂಜಿಬೆಟ್ಟುವಿನಲ್ಲಿ ಪ್ರಧಾನ ಶಾಖೆ ಹಾಗೂ ಪ್ರಥಮ ಶಾಖೆಯನ್ನು ಹೊಂದಿರುವ ಈ ಸೊಸೈಟಿಯು ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಶಿರ್ವದಲ್ಲಿ ನೂತನ ಶಾಖೆಯನ್ನು ಆರಂಭಿಸುತ್ತಿದೆ. ಕೇವಲ ಮೂರು ವರ್ಷಗಳ ಹಿಂದೆ ಆರಂಭಗೊಂಡಿರುವ ಸೊಸೈಟಿಯು ಗ್ರಾಹಕರ ವಿಶ್ವಾಸದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಶಿರ್ವದಲ್ಲಿ ಎರಡನೇ ಶಾಖೆಯ ಉದ್ಘಾಟನೆಯೊಂದಿಗೆ ಸೊಸೈಟಿಯ ಸೇವೆಗಳು ಮತ್ತಷ್ಟು ಜನರಿಗೆ ತಲುಪಲಿವೆ ಎಂಬ ನಿರೀಕ್ಷೆಯಿದೆ.


    ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೂತನ ಶಾಖೆ ಉದ್ಘಾಟಿಸಲಿದ್ದು, ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ.ಫಾ. ಚಾರ್ಲ್ ಮಿನೇಜಸ್ ಆಶೀರ್ವಚನ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ-ಆಪರೇಟಿವ್, ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್. ಕೆ., ಕೇರಳದ ಡಿವೈನ್ ರಿಟ್ರೇಟ್ ಸೆಂಟರ್‌ ಧರ್ಮಗುರು ಫಾ.ರಿಚಡ್೯ ಕ್ವಾಡ್ರಸ್, ಉಡುಪಿ ಜಿಲ್ಲಾ ಸೌಹಾರ್ದ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಪಿ.ಜಗನ್ನಾಥ ಶೆಟ್ಟಿ, ಕಥೋಲಿಕ್ ಸಭಾ ಉಡುಪಿ ಪ್ರದೇಶ್‌ ಅಧ್ಯಕ್ಷ ಮೆಲ್ವಿನ್ ಆರಾನ್ನ, ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್‌ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಹಾಗೂ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
    ಸೊಸೈಟಿಯ ನಿರ್ದೇಶಕ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಯ ಅವಿರತ ಪರಿಶ್ರಮ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜ ಅವರ ಸಹಕಾರಿ ಕ್ಷೇತ್ರದ ಅನುಭವ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸೊಸೈಟಿ ಮೆಚ್ಚುಗೆ ಗಳಿಸಿದೆ. ಇದೇ ಬೆಳವಣಿಗೆಯ ಹಾದಿಯಲ್ಲಿ ಸಂಸ್ಥೆಯ ಮೂರನೇ ಶಾಖೆಯು ನವೆಂಬರ್ ತಿಂಗಳಲ್ಲಿ ಪೆರಂಪಳ್ಳಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    Cooperative Cooperative Department Cooperative Registrar Jeevan Dsouza Shirva Souharda Sahakari Udupi Syndicate Credit Souharda Co Operative Society
    Previous Articleರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    Related Posts

    ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    October 30, 2026

    ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    October 29, 2026

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಲ್ಲಿ ನವೆಂಬರ್‌ 1ರಂದು ಸಹಕಾರಿ ಕ್ರೀಡೋತ್ಸವ

    October 29, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ

    October 30, 2026

    ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    October 30, 2026

    ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    October 29, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.