Close Menu
    Top News

    ಬೀಳಗಿಯ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ 15 ಹುದ್ದೆಗಳಿಗೆ ಅರ್ಜಿ ಆಹ್ವಾನ

    October 16, 2026

    ಕೇಂದ್ರ ಸಹಕಾರ ಸಚಿವಾಲಯಕ್ಕೆ ಇಬ್ಬರು ನಿರ್ದೇಶಕರ ನೇಮಕ

    October 16, 2026

    ಅ.21ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 22ನೇ ಶಾಖೆ ಕಾಪುವಿನಲ್ಲಿ ಆರಂಭ

    October 16, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ರಂಗದಲ್ಲಿ ಸೇವೆ ಮುಂದುವರಿಕೆ: ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌
    News

    ಸಹಕಾರ ರಂಗದಲ್ಲಿ ಸೇವೆ ಮುಂದುವರಿಕೆ: ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌

    adminBy adminOctober 16, 2026

    ಸಮಾಜಮುಖಿ ಸೇವಾಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    ಮಂಗಳೂರು: ಸಹಕಾರ ಕ್ಷೇತ್ರದಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಸೇವೆ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವರ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಮುಖಿ ಸೇವಾಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಭಗವಂತ, ಸ್ವಾಮೀಜಿಗಳ ಆಶೀರ್ವಾದ, ಹಿತೈಷಿಗಳು, ಹಿರಿಯರು, ಚಿಕಿತ್ಸೆ ನೀಡಿದ ವೈದ್ಯರು ಮತ್ತು ಎಲ್ಲರ ಪ್ರೀತಿ-ವಿಶ್ವಾಸದಿಂದ ತಾವು ಮತ್ತೆ ಗುಣಮುಖರಾಗಿ ನಿಮ್ಮೆಲ್ಲರ ಮುಂದೆ ಬಂದು ನಿಲ್ಲುವಂತಾಗಿದೆ. ಆಸ್ಪತ್ರೆಯಲ್ಲಿ ಇರುವಾಗ ದೇವರ ಪ್ರಸಾದ ತಂದು ನೀಡಿದ ಅರ್ಚಕರು, ಆತ್ಮೀಯರು ಕಾಳಜಿ ವಹಿಸಿದ್ದಾರೆ ಎಂದು ಕೃತಜ್ಞತೆ ಅರ್ಪಿಸಿದರು. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ತುರ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚಿಸಿ ಉತ್ತಮ ಆರೋಗ್ಯ ಸೇವೆ ಸಿಗುವಂತೆ ನೋಡಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು. ಎಲ್ಲರ ಪ್ರೀತಿ, ಆಶೀರ್ವಾದಿಂದ ಮತ್ತೆ ನಿಮ್ಮ ಜತೆ ಕೆಲಸ ಮಾಡುವಂತೆ ಆಗಿದೆ ಎಂದರು.
    ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ
    ಮುಂದಕ್ಕೆ ದೇವರ ಕೆಲಸಗಳಿಗೆ ಆದ್ಯತೆ ನೀಡುತ್ತೇನೆ. ತಿರುಪತಿಗೆ ಒಂದು ಕೋಟಿ ರೂಪಾಯಿಗಳನ್ನು ಕಳುಹಿಸಲಾಗುವುದು. ಉಡುಪಿ ಮಠ ಹಾಗೂ ಜಿಲ್ಲೆಯ ಎಲ್ಲ ದೇವಸ್ಥಾನಗಳ ಕಾರ್ಯಗಳಿಗೂ ಉತ್ತಮ ರೀತಿಯಲ್ಲಿ ನೆರವು ನೀಡುವುದಾಗಿ ಘೋಷಿಸಿದರು. ನವೋದಯ ಸಂಘ ಹಾಗೂ ಮಹಿಳೆಯರ ಕಲ್ಯಾಣ: ನವೋದಯ ಸ್ವಸಹಾಯ ಸಂಘದ ಬಡ ಮಹಿಳೆಯರ ನೆರವಿಗಾಗಿ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು. ಫೆಬ್ರವರಿ ೧೮ರಿಂದ ನಡೆಯಲಿರುವ ಕಾರ್ಕಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೂ ಒಂದು ದಿನದ ಪೂಜೆ ಹಾಗೂ ವೈಯಕ್ತಿಕವಾಗಿ ೫೦ ಲಕ್ಷ ರೂ. ನೀಡುವುದಾಗಿ ತಿಳಿಸಿದರು.


    ಸಹಕಾರಿ ರಂಗದಲ್ಲಿ ನಿಷ್ಪಕ್ಷಪಾತ ಸೇವೆ:
    ಕಳೆದ ೪೦-೪೫ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಸಹಕಾರಿ ಕ್ಷೇತ್ರದಲ್ಲಿ ಯಾರೇ ಅನ್ಯಾಯಕ್ಕೊಳಗಾದರೂ ಅವರ ರಕ್ಷಣೆಗೆ ನಿಲ್ಲುವುದಾಗಿ ಭರವಸೆ ನೀಡಿದರು. ಯಾವುದೇ ಪಕ್ಷ, ಜಾತಿ ಅಥವಾ ಭೇದಭಾವವಿಲ್ಲದೆ ಕೇವಲ ‘ಸಹಕಾರ ಪಕ್ಷ’ ಎನ್ನುವ ದೃಷ್ಟಿಯಿಂದ ಸಮರ್ಪಕವಾಗಿ ಸೇವೆ ಸಲ್ಲಿಸುವುದಾಗಿ ಅವರು ಹೇಳಿದರು.
    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಮತ ಹಾಗೂ ಕುಟುಂಬಕ್ಕೆ ಸೀಮಿತವಾಗದೆ ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಕೆಲಸಗಳ ಮೂಲಕ ಸಾರ್ವಜನಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿ ನೂರ್ಕಾಲ ನಮ್ಮೆಲ್ಲರೊಂದಿಗೆ ಇರಲಿ ಹಾಗೂ ಅವರ ಆರೋಗ್ಯದ ಸುಧಾರಣೆ ಮತ್ತು ಸಮಾಜ ಸೇವೆಯು ದೀರ್ಘಕಾಲ ಮುಂದುವರಿಯಲಿ ಎಂದು ಹಾರೈಸಿದರು. ರಾಜೇಂದ್ರ ಕುಮಾರ್ ಅವರು ಯಾವುದೇ ಅನ್ಯಾಯವಾದರೂ ಜಾತಿ-ಧರ್ಮ ನೋಡದೆ, ಎಲ್ಲರಿಗೂ ನ್ಯಾಯ ಒದಗಿಸಲು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
    ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾದ ವಾಹನವನ್ನು ಕೇವಲ ಕಸದ ಗಾಡಿ ಎಂದು ಭಾವಿಸದೆ, ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿದ ಪವಿತ್ರ ಹೂವುಗಳನ್ನು ಗೌರವಯುತವಾಗಿ ಸಂಗ್ರಹಿಸಿ ಮರುಬಳಕೆ ಮಾಡುವ ಅತ್ಯುತ್ತಮ ಮತ್ತು ದೇಶದಲ್ಲೇ ಮಾದರಿಯಾಗುವಂತಹ ಕಾರ್ಯಕ್ರಮ ಎಂದು ಶ್ಲಾಘಿಸಿದರು. ಡಾ. ರಾಜೇಂದ್ರ ಕುಮಾರ್ ಅವರಿಗೆ ಭಗವಂತನು ಉತ್ತಮ ಆರೋಗ್ಯ, ಆಯುರಾರೋಗ್ಯ ಮತ್ತು ದೀರ್ಘಕಾಲದ ಆಯಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ ಅವರು, ಮುಂಬರುವ ದಿನಗಳಲ್ಲಿ ಅವರು ಜಿಲ್ಲೆಗೆ ಇನ್ನಷ್ಟು ಹೆಚ್ಚಿನ ಸೇವೆಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.


    ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕೊಡುಗೆಯಾಗಿ ನೀಡಿದ ವಾಹನ ಕೇವಲ ಕಸದ ಗಾಡಿಯಲ್ಲ, ‘ಕಸದ ಗಾಡಿ’ ಎಂದು ಭಾವಿಸಬಾರದು. ಇದು ದೇವರಿಗೆ ಸಮರ್ಪಿಸಿದ ಹೂವಿನ ಪವಿತ್ರತೆಯನ್ನು ಕಾಪಾಡುವ ಮತ್ತು ಮರುಬಳಕೆ ಮಾಡುವ ಅತ್ಯಂತ ಆಳವಾದ ಭಾವನೆಯಿಂದ ರೂಪಿಸಿದ ವಿನೂತನ ಯೋಜನೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ೮೦೦ಕ್ಕೂ ಅಧಿಕ ದೇವಸ್ಥಾನಗಳಿದ್ದು, ಭಕ್ತರು ದೇವರಿಗೆ ಅರ್ಪಿಸುವ ಹೂವುಗಳನ್ನು ಕಸದಂತೆ ಬಿಸಾಡದೆ, ಅವುಗಳ ಪವಿತ್ರತೆಯನ್ನು ಕಾಪಾಡಿಕೊಂಡು ಮರುಬಳಕೆ ಮಾಡುವ ಉದ್ದೇಶದಿಂದ ಈ ಯೋಜನೆಗೆ ರೂಪು ನೀಡಲಾಗಿದೆ ಎಂದರು.


    ಉಡುಪಿ ಸುಗಂಧ:
    ದೇವಸ್ಥಾನಗಳ ನಿರ್ಮಾಲ್ಯ ಹೂವುಗಳಿಂದ ಅಗರಬತ್ತಿ, ಧೂಪ ಹಾಗೂ ರೂಮ್ ಫ್ರೆಶ್ನರ್‌ಗಳಂತಹ ವಿವಿಧ ಉತ್ಪನ್ನಗಳನ್ನು ತಯಾರಿಸುವ ‘ಉಡುಪಿ ಸುಗಂಧ’ ಪ್ರಾಜೆಕ್ಟ್ ಅನ್ನು ಜಿಲ್ಲಾಡಳಿತ, ಎನ್‌ಜಿಒ ಮತ್ತು ಚೇಂಬರ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ಆರಂಭಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದರ ಮೂರು ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳ ವೆಚ್ಚದ ಕುರಿತು ಚರ್ಚಿಸಿದಾಗ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಫೋನ್ ಮಾಡಿದ ಕೇವಲ ೧೦ ಸೆಕೆಂಡುಗಳಲ್ಲಿ ಸ್ಪಂದಿಸಿ, ಇಡೀ ಜಿಲ್ಲೆಯಲ್ಲಿ ಸಂಚರಿಸಿ ಹೂವುಗಳನ್ನು ಸಂಗ್ರಹಿಸಲು ಒಂದು ಸುಸಜ್ಜಿತ ವಾಹನವನ್ನು ಕೊಡಿಸಿಕೊಡುವುದಾಗಿ ಒಪ್ಪಿಕೊಂಡರು ಎಂದು ಪ್ರಶಂಸಿಸಿದರು. ಈ ಯೋಜನೆಯಡಿ ಸುಮಾರು ೩೦ ಜನ ಹೆಣ್ಣುಮಕ್ಕಳಿಗೆ ಹೂವಿನಿಂದ ಉತ್ಪನ್ನಗಳನ್ನು ತಯಾರಿಸುವ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಈ ಸಾಮುದಾಯಿಕ ಉದ್ಯಮಕ್ಕೆ ಈಗ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಂದಲೂ ಉತ್ತಮ ಸ್ಪಂದನೆ ಹಾಗೂ ಬೇಡಿಕೆ ಬರುತ್ತಿದೆ ಎಂದು ತಿಳಿಸಿದರು.
    ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕೇವಲ ಉಡುಪಿ ಮತ್ತು ಮಂಗಳೂರಿಗೆ ಮಾತ್ರ ಸೀಮಿತವಾಗದೆ, ಇಡೀ ರಾಜ್ಯಾದ್ಯಂತ ಅನೇಕ ಸಕ್ಕರೆ ಕಾರ್ಖಾನೆಗಳಿಗೆ ಸಾಲಸೌಲಭ್ಯ ಕಲ್ಪಿಸುವ ಮೂಲಕ ರೈತರ ಮುಖದಲ್ಲಿ ಸಂತೋಷ ಮೂಡಿಸಿ, ಬೆನ್ನೆಲುಬಾಗಿ ನಿಂತಿದ್ದಾರೆ. ಮಂಗಳೂರಿನ ಬ್ಯಾಂಕಿನ ಸಹಭಾಗಿತ್ವವಿಲ್ಲದೆ ರಾಜ್ಯದ ಯಾವುದೇ ಸಕ್ಕರೆ ಕಾರ್ಖಾನೆಗೆ ಆರ್ಥಿಕ ನೆರವು ಲಭಿಸುವುದಿಲ್ಲ ಎಂಬುದು ಕಟು ಸತ್ಯ ಎಂದರು. ರಾಜೇಂದ್ರ ಕುಮಾರ್ ಅವರು ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ಯಾರಿಗೂ ಎಂದೂ ಕೆಟ್ಟದ್ದು ಮಾಡಿಲ್ಲ, ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾರೆ. ಅವರ ಉತ್ತಮ ಕೆಲಸಗಳಿಗೆ ದೇವರ ಆಶೀರ್ವಾದ ಸದಾ ಇರಲಿದ್ದು, ಅವರು ಇನ್ನಷ್ಟು ಗಟ್ಟಿಯಾಗಿ, ಬಹುಕಾಲ ಸಹಕಾರಿ ರಂಗವನ್ನು ಮುನ್ನಡೆಸಲಿ ಎಂದು ಹಾರೈಸಿದರು.
    ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್.ಕೋಟ್ಯಾನ್, ಅಶೋಕ್ ಕುಮಾರ್ ಶೆಟ್ಟಿ, ಜೈರಾಜ್ ಬಿ.ರೈ, ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ.ಮಹೇಶ್ ಹೆಗ್ಡೆ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್. ಮನ್ಮಥ , ಕುಶಾಲಪ್ಪ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಘರಾಜ್ ಜೈನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಉಪಸ್ಥಿತರಿದ್ದರು.
    ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

    ದೇವರ ಪೂರ್ಣ ಆಶೀರ್ವಾದ: ಪೇಜಾವರ ಶ್ರೀ
    ಆಶೀರ್ವಚನ ನೀಡಿದ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಹಕಾರ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರಕುಮಾರ್ ಅವರು ನಡೆಸಿರುವ ದೇವರ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳು ಮಹತ್ತರವಾಗಿವೆ. ಅವರಿಗೆ ದೇವರ ಪೂರ್ಣ ಆಶೀರ್ವಾದವಿದೆ. ದೇವರ ಶ್ರೀರಕ್ಷೆ ಅವರಿಗೆ ಸದಾ ಇರಲಿ ಎಂದು ಹಾರೈಸಿದರು. ನವರಾತ್ರಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಗುಣಮುಖರಾಗಿ ಆಗಮಿಸಿರುವುದು ಸಂತಸ ತಂದಿದೆ. ಅವರು ನೂರು ಕಾಲ ಆಯುರಾರೋಗ್ಯದೊಂದಿಗೆ ಬದುಕಿ, ಸಮಾಜದೊಂದಿಗೆ ಸದಾ ಇದ್ದು ಸೇವೆ ಸಲ್ಲಿಸಬೇಕು ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಅವರ ದೈವ ಸೇವೆ ಹಾಗೂ ಸಮಾಜ ಸೇವೆಯು ಸದಾ ನಿರಂತರವಾಗಿರಲಿ ಎಂದು ಹರಸಿದರು.
    ಭಗವಂತನು ಕೇವಲ ಗುಡಿಗಳಲ್ಲಿ ಮಾತ್ರವಲ್ಲದೆ ಸರ್ವರ ಹೃದಯದಲ್ಲೂ ನೆಲೆಸಿದ್ದಾನೆ ಎಂಬ ಕೃಷ್ಣನ ವಾಣಿಯಂತೆ, ಸಮಾಜದ ಪ್ರತಿಯೊಬ್ಬರ ಒಳಿತಿಗಾಗಿ ಶ್ರಮಿಸುವುದೇ ನಿಜವಾದ ದೇವಪೂಜೆ. ಮಹಾಭಾರತ ಹಾಗೂ ರಾಮಾಯಣದಲ್ಲಿ ಬರುವ ದಾನಶೂರ ಕರ್ಣ, ಹನುಮಂತ, ರಾಮನಂತಹ ದೃಢತೆ ಹಾಗೂ ಸಾಧನೆಯ ಗುಣಗಳನ್ನು ರಾಜೇಂದ್ರ ಕುಮಾರ್ ಅವರ ವ್ಯಕ್ತಿತ್ವದಲ್ಲಿ ಕಾಣಬಹುದು ಎಂದರು.
    ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ ಮಾಡಲಾಯಿತು. ನವೋದಯ ಸ್ವ ಸಹಾಯ ಸಂಘಗಳ ನಾಲ್ವರು ಸದಸ್ಯರಿಗೆ ತಲಾ ಒಂದು ಲಕ್ಷ ರೂ. ಮಾನವೀಯ ನೆರವು ನೀಡಲಾಯಿತು.
    ದೇವಸ್ಥಾನಗಳ ಪ್ರಸಾದ, ಬೆಳ್ಳಿ ಗದೆ
    ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಆಸ್ಪತ್ರೆಯಿಂದ ಗುಣಮುಖರಾಗಿ ಆಗಮಿಸಿದ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರಿಗೆ ಸುಬ್ರಹ್ಮಣ್ಯ, ಕೊಲ್ಲೂರು, ಶರವು ಸಹಿತ ವಿವಿಧ ದೇವಸ್ಥಾನಗಳ ಪ್ರಸಾದವನ್ನು ನೀಡಲಾಯಿತು. ಬೆಳ್ಳಿ ಗದೆ ನೀಡಿ ಅವರನ್ನು ಗೌರವಿಸಲಾಯಿತು.

     

    Banking Co Operative ministry Cooperative Cooperative Department Cooperative Registrar Dr Mohan Alva Dr. M.N Rajendrakumar Dr. Mohan Alvw Pejavara Shree
    Previous Articleಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆ ಉಡುಪಿಯಲ್ಲಿ ಅ.25ರಂದು ಉದ್ಘಾಟನೆ
    Next Article ಪ್ರಾಮಾಣಿಕ ಸೇವೆಗೆ ಸಮಾಜದಿಂದ ಗೌರವ ನಿರಂತರ

    Related Posts

    ಬೀಳಗಿಯ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ 15 ಹುದ್ದೆಗಳಿಗೆ ಅರ್ಜಿ ಆಹ್ವಾನ

    October 16, 2026

    ಕೇಂದ್ರ ಸಹಕಾರ ಸಚಿವಾಲಯಕ್ಕೆ ಇಬ್ಬರು ನಿರ್ದೇಶಕರ ನೇಮಕ

    October 16, 2026

    ಅ.21ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 22ನೇ ಶಾಖೆ ಕಾಪುವಿನಲ್ಲಿ ಆರಂಭ

    October 16, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಬೀಳಗಿಯ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ 15 ಹುದ್ದೆಗಳಿಗೆ ಅರ್ಜಿ ಆಹ್ವಾನ

    October 16, 2026

    ಕೇಂದ್ರ ಸಹಕಾರ ಸಚಿವಾಲಯಕ್ಕೆ ಇಬ್ಬರು ನಿರ್ದೇಶಕರ ನೇಮಕ

    October 16, 2026

    ಅ.21ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 22ನೇ ಶಾಖೆ ಕಾಪುವಿನಲ್ಲಿ ಆರಂಭ

    October 16, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.