ಮೈಸೂರು: ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯು ಮೇಘಾಲಯದ ಅಪೆಕ್ಸ್ ಮತ್ತು ಸಹಕಾರಿ ಬ್ಯಾಂಕುಗಳ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಲು ಅಧ್ಯಯನ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ರಾಜ್ಯಪಾಲರಾದ ಸಿ.ಹೆಚ್ ವಿಜಯಶಂಕರ್ ಅವರನ್ನು ಲೋಕಭವನದಲ್ಲಿ ಭೇಟಿ ಮಾಡಲಾಯಿತು.
https://chat.whatsapp.com/FCEnlTkAKCC0MGPhXtX4i4
ಬ್ಯಾಂಕಿನ ಅದ್ಯಕ್ಷರಾದ ಜೆ.ಯೋಗೇಶ್ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ 120 ವರ್ಷದ ಇತಿಹಾಸವಿರುವ ಬ್ಯಾಂಕಿನ ವಾರ್ಷಿಕ ವರದಿಯ ಪುಸ್ತಕದ ಪ್ರತಿಯನ್ನು ನೀಡಿ ಬ್ಯಾಂಕಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಪ್ರತಿವರ್ಷವೂ ಲಾಭದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿ ಮೈಸೂರಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉನ್ನತ ಮಟ್ಟದ ಹೆಸರು ಗಳಿಸಿದ್ದು ಇದಕ್ಕೆ ಸ್ವಾತಂತ್ರ್ಯ ಹೋರಾಟಗಾರರು, ಸಮಾಜದ ಹೆಸರಾಂತ ಗಣ್ಯ ವ್ಯಕ್ತಿಗಳು ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದನ್ನು ರಾಜ್ಯಪಾಲ ವಿಜಯಶಂಕರ್ ಅವರು ಪ್ರಶಂಸಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಟಿ.ರವಿ, ನಿರ್ದೇಶಕರಾದ ಎನ್.ಯೋಗಾನಂದ, ಜಿ.ನಿರಂಜನ್, ಹೆಚ್ ಹರೀಶ್ ಕುಮಾರ್, ಆರ್ ರವಿಕುಮಾರ್(ರಾಜಕೀಯ), ಆರ್ ಸೋಮಣ್ಣ, ಕೆ ಗಿರೀಶ್, ಪಡುವಾರಹಳ್ಳಿ ಎಂ ರಾಮಕೃಷ್ಣ, ಪಿ.ರಾಜೇಶ್ವರಿ, ಆರ್ ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಸಿ.ಎಸ್ ರಾಮಕೃಷ್ಣಯ್ಯ ಹಾಗೂ ಕಾರ್ಯದರ್ಶಿ ಕೆ.ಹರ್ಷಿತ್ ಗೌಡ ಉಪಸ್ಥಿತರಿದ್ದರು.
ಅಪೆಕ್ಸ್ ಬ್ಯಾಂಕಿಗೆ ಭೇಟಿ
ತಮ್ಮ ಅಧ್ಯಯನ ಪ್ರವಾಸದಲ್ಲಿ ಮೇಘಾಲಯದ ಹೆಸರಾಂತ ದಿ ಮೇಘಾಲಯ ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿ. ಶಿಲ್ಲಾಂಗ್ ಇಲ್ಲಿಗೆ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆದರು. ಬ್ಯಾಂಕಿನ ಅಧ್ಯಕ್ಷರಾದ ಜೆ ಯೋಗೇಶ್, ಉಪಾಧ್ಯಕ್ಷ ಟಿ.ರವಿ, ನಿರ್ದೇಶಕರಾದ ಎನ್ ಯೋಗಾನಂದ್, ಜಿ.ನಿರಂಜನ್, ಹೆಚ್ ಹರೀಶ್ ಕುಮಾರ್, ರಾಜಕೀಯ ರವಿಕುಮಾರ್, ಆರ್ ಸೋಮಣ್ಣ, ಕೆ ಗಿರೀಶ್, ಪಡುವಾರಹಳ್ಳಿ ಎಂ ರಾಮಕೃಷ್ಣ, ಪಿ.ರಾಜೇಶ್ವರಿ, ಆರ್ ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಸಿ.ಎಸ್ ರಾಮಕೃಷ್ಣಯ್ಯ ಹಾಗೂ ಕಾರ್ಯದರ್ಶಿ ಕೆ ಹರ್ಷಿತ್ ಗೌಡ ಉಪಸ್ಥಿತರಿದ್ದರು.













