ಉಡುಪಿ: ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಕಟಪಾಡಿ ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ಕಟಪಾಡಿ ಎ ಆರ್ ಕಾಮತ್ ಮೆಮೋರಿಯಲ್ ಹಾಲ್ ಆವರಣದಲ್ಲಿ ಕೆ.ಸತ್ಯೇಂದ್ರ ಪೈಯವರ ಅಧ್ಯಕ್ಷತೆಯಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ನಿರ್ದೇಶಕರಾದ ಸುದರ್ಶನ್ ಮಲ್ಯ ಸ್ವಾಗತ ಕೋರಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಶ್ರೀನಿವಾಸ್ ಶೆಣೈ, ವಿಜೇಂದ್ರ ಜಿ. ಭಟ್, ಗಣೇಶ್ ಕಿಣಿ ಮತ್ತು ನೀತಾ ಶೆಣೈ ಉಪಸ್ಥಿತರಿದ್ದರು. ಸದಸ್ಯರಿಗೆ ಶೇಕಡಾ 12 ಡಿವಿಡೆಂಡ್ ಘೋಷಿಸಲಾಯಿತು.


