Close Menu
    Top News

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    September 10, 2026

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ
    News

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    adminBy adminSeptember 10, 2026

    ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತವು 2025-26ನೇ ಸಾಲಿನಲ್ಲಿ ₹1,087.99 ಕೋಟಿ ದಾಖಲೆಯ ವ್ಯವಹಾರ ನಡೆಸಿ, ₹4.04 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಸಾಧನೆಯ ಹೊಸ ಮೈಲಿಗಲ್ಲು ನೆಟ್ಟಿದೆ.

    https://chat.whatsapp.com/FCEnlTkAKCC0MGPhXtX4i4

    ​ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಅವರು ಈ ಮಾಹಿತಿ ನೀಡಿದರು.

    ಸಂಘದ ಹಿರಿಯ ಸದಸ್ಯರಾದ ಈಶ್ವರ ಭಟ್ ಡಿ, ಮಾಜಿ ಅಧ್ಯಕ್ಷರಾದ ಅನಂತ ಭಟ್ ಎನ್, ಮಾಜಿ ಉಪಾಧ್ಯಕ್ಷರಾದ ಪ್ರಕಾಶ್ ಕೆ.ಎಸ್, ಮಜಿ ರಾಮ್ ಭಟ್, ವೆಂಕಟರಮಣ ಭಟ್ ಸೂರ್‍ಯ ದೀಪ ಬೆಳಗಿಸಿ ಉದ್ಘಾಟಿಸಿದರು.ವಿಟ್ಲ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಶುಂಪಾಲ ಪಿ ರಾಧಾಕೃಷ್ಣ ಭಟ್ ಈ ಸಂದರ್ಭದಲ್ಲಿ ಸ್ತೋತ್ರ ಪಠಿಸಿದರು.

    ಸಹಕಾರವೇ ಶಕ್ತಿ ಎಂಬುದನ್ನು ಸಾಬೀತುಪಡಿಸುತ್ತಾ ಮುನ್ನಡೆಯುತ್ತಿರುವ ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ ತನ್ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸಂಭ್ರಮದಿಂದ ಆಚರಿಸಿದೆ. ಶಾಂತಿನಗರ ಅಕ್ಷಯ ಸಮುದಾಯ ಭವನದಲ್ಲಿ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಈ ಸಾಲಿನ ಬೃಹತ್ ಆರ್ಥಿಕ ಸಾಧನೆಯನ್ನು ಅನಾವರಣಗೊಳಿಸಲಾಯಿತು.

    ಸಭೆಯಲ್ಲಿ ಸಂಘದ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಮಾತನಾಡಿ ’2025-26ರಲ್ಲಿ ಸಂಘದಲ್ಲಿ 731 “ಎ” ತರಗತಿ ಸದಸ್ಯರು ಸೇರ್ಪಡೆಗೊಂಡಿದ್ದು 57ಸದಸ್ಯರು ಸದಸ್ಯತನವನ್ನು ಹಿಂದಕ್ಕೆ ಪಡೆದುದರಿಂದ ವರ್ಷದ ಅಂತ್ಯಕ್ಕೆ 9189 ಸದಸ್ಯರಿದ್ದು ಸಂಘದ ಒಟ್ಟು ಪಾಲು ಬಂಡವಾಳ ರೂ. 3,04,00,770.00 ಆಗಿರುತ್ತದೆ. ’2025-26ರಲ್ಲಿ ಸಂಘದ ಆರಂಭದ ಠೇವಣಿ 134.73 ಕೋಟಿ ರೂಪಾಯಿಗಳಾಗಿದ್ದು ವರ್ಷದ ಅಂತ್ಯಕ್ಕೆ 149.84 ಕೋಟಿ ರೂಪಾಯಿಗಳಿಗೆ ಏರಿದ್ದು ಠೇವಣಾತಿ ಶೇಕಡಾ 11.22 ಬೆಳವಣಿಗೆ ಆಗಿರುತ್ತದೆ.
    ’2025-26 ನೇ ಸಾಲಿನಲ್ಲಿ 1087.99 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿ ದಾಖಲೆಯ 4,04,48,775.71 ಲಾಭವನ್ನು ಗಳಿಸಿದ್ದು, ಅಡಿಟ್ ವರ್ಗೀಕರಣದಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ “ಎ” ತರಗತಿ ಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.

    ’2025-26 ನೇ ಸಾಲಿನ ಆಡಳಿತ ಮಂಡಳಿ ವರದಿ , ಲೆಕ್ಕ ಪರಿಶೋದನಾವರದಿ, ನಿವ್ವಳ ಲಾಭದ ವಿಂಗಡಣೆ, ಬಜೆಟ್ ಮೀರಿ ಖರ್ಚಾದ ವೆಚ್ಚಗಳ ಮಂಜೂರಾತಿ,2026-27ನೇ ಸಾಲಿನ ಅಂದಾಜು ಆಯವ್ಯಯ ಪತ್ರ ಮಂಜೂರಾತಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ ಮಂಡಿಸಿದರು.

    ಸಭೆಯಲ್ಲಿ ಸಂಘದ ನಿರ್ದೇಶಕರುಗಳಾದ ಜಯಂತಿ ಎಚ್‌ ರಾವ್‌, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ, ಪೂವಪ್ಪ ಎಸ್‌, ದಿವಾಕರ ವಿ, ಕೇಶವ ಎ, ಗೋವರ್ಧನ ಕುಮಾರ್‌ , ಭಾಸ್ಕರ ಶೆಟ್ಟಿ, ರಾಮದಾಸ ಶೆಣೈ ವಿ, ಮೋಹನ್‌ ಕೆ ಎಸ್‌, ವಿಶ್ವನಾಥ ಎಂ, ತಿರುಮಲೇಶ್ವರ ಭಟ್‌ ಪಿ, ಸತೀಶ್‌ ಪಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಸಂಘವು ಸದಸ್ಯರ ಮತ್ತು ಗ್ರಾಹಕರ ನಂಬಿಕೆಯನ್ನು ಕಾಯ್ದುಕೊಂಡು ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

    ಸಂಘದ ಅಧ್ಯಕ್ಷರಾದ ಹೆಚ್‌. ಜಗನ್ನಾಥ ಸಾಲ್ಯಾನ್‌ ಸ್ವಾಗತಿಸಿ, ಉಪಾಧ್ಯಕ್ಷ ಮನೋರಂಜನ್‌ ಕೆ.ಆರ್‌ ಧನ್ಯವಾದವಿತ್ತರು. ಕಲ್ಲಡ್ಕ ಶಾಖೆಯ ಶಾಖಾಧಿಕಾರಿ ಶ್ರೀಮತಿ ಶ್ರೀನಿಧಿ ವಿ ಕುಡ್ವ ಕೆ ಪ್ರಾರ್ಥಿಸಿದರು. ಮಹೇಶ್‌ ಕುಮಾರ್‌ ಎಸ್‌ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಯಶಸ್ವಿಗೆ ಸಂಘದ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು.

    ​​

    Banking Co Operative ministry Cooperative Cooperative Department Cooperative Registrar H Jagannatha Salyan Vitla Vitla Grameena Sahakari Sangha
    Previous Articleಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
    Next Article ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    Related Posts

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    September 10, 2026

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.