ಮಂಗಳೂರು: ಎಸ್.ಕೆ.ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸೆ.8ರಂದು ಬೆಳಗ್ಗೆ 9.30ಕ್ಕೆ ಕೊಟ್ಟಾರಚೌಕಿಯ ಎಸ್.ಕೆ.ಗೋಲ್ಡ್ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿಯ
ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಸಂಸ್ಥೆಯ ಸಂಸ್ಥಾಪಕರಾದ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರ ಜೀವನ ಮತ್ತು ಮೌಲ್ಯಗಳು ಎನ್ನುವ ವಿಚಾರದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗದಲ್ಲಿ ಸಾರ್ವಜನಿಕರಿಗೆ ಸ್ಪರ್ಧೆ ನಡೆಯಲಿದೆ. ಭಾಷಣದ ಅವಧಿ 3 ನಿಮಿಷವಾಗಿದ್ದು, ಭಾಷಣ ಸ್ವಯಂ ರಚಿತವಾಗಿರಬೇಕು. ನೋಂದಣಿಗೆ ಸೆ.5 ಅಂತಿಮ ದಿನವಾಗಿದ್ದು ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.
ನೋಂದಾಯಿಸಿದ ಮೊದಲ 25 ಮಂದಿಗೆ ಪ್ರಥಮ ಆದ್ಯತೆಯಾಗಿದ್ದು, ಪ್ರಥಮ 5 ಸಾವಿರ ರೂ.ಮತ್ತು ಸ್ಮರಣಿಕೆ, ದ್ವಿತೀಯ 3 ಸಾವಿರ ರೂ.ಮತ್ತು ಸ್ಮರಣಿಕೆ, ತೃತೀಯ 2 ಸಾವಿರ ರೂ. ಮತ್ತು ಸ್ಮರಣಿಕೆ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


