Close Menu
    Top News

    ಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    September 2, 2026

    ರಾಯಚೂರಿನ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 26.90 ಲಕ್ಷ ರೂ. ನಿವ್ವಳ ಲಾಭ

    September 2, 2026

    ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ

    September 2, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆತ್ಮಶಕ್ತಿ ಸಹಕಾರ ಸಂಘದಲ್ಲಿ ಸಹಕಾರ ಸಂಘಗಳ ಕಾನೂನು, ಭದ್ರತೆ, ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ
    News

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಸಹಕಾರ ಸಂಘಗಳ ಕಾನೂನು, ಭದ್ರತೆ, ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ

    adminBy adminSeptember 2, 2026

    ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ಖಾಯಂ ಜನತಾ ನ್ಯಾಯಾಲಯ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ಸಹಕಾರ ಸಂಘಗಳ ಕಾನೂನು, ಭದ್ರತೆ ಹಾಗೂ ಸುರಕ್ಷತಾ ಬಗ್ಗೆ ಅರಿವು ಕಾರ್ಯಾಗಾರವು ಪಡೀಲ್‌ನ ಆತ್ಮಶಕ್ತಿ ಸೌಧದಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ.ತಾರಾನಾಥ ಪೂಜಾರಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿ ಜಸ್ಟಿಸ್ ಎಂದರೆ ಅಲ್ಲಿ ಸೋಲು ಗೆಲುವಿನ ಪ್ರಶ್ನೆಯಲ್ಲ. ನ್ಯಾಯ ಅಂದರೆ ಸಂದರ್ಭವನ್ನು ಎದುರಿಸುವ ಶಕ್ತಿ. ಸಹಕಾರ ಕ್ಷೇತ್ರದಲ್ಲಿ ಸಂಘಗಳ ಪ್ರಗತಿಗೆ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊಡುಗೆ ಅಪಾರವಾದುದ್ದು, ಎಂದು ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅತೀ ಕಡಿಮೆ ಅವಧಿಯಲ್ಲಿ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ ೩೫ ಶಾಖೆಗಳನ್ನು ಸ್ಥಾಪಿಸಿ, ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಉತ್ತಮ ಸಾಧನೆ ಮಾಡುತ್ತಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
    ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಜಗದೀಶ್ ಕೆ. ಶೇಣವ ಮಾತನಾಡಿ, ಪರಸ್ಪರ ಸಹಕಾರದಿಂದ ಸೊಸೈಟಿಗಳು ಶೀಘ್ರಗತಿಯಲ್ಲಿ ಸೇವೆ ನೀಡುವುದರಿಂದ ಜನರು ತಮ್ಮ ವ್ಯವಹಾರಗಳನ್ನು ಹೆಚ್ಚಾಗಿ ಸೊಸೈಟಿಯಲ್ಲಿ ನಡೆಸುತ್ತಿದ್ದಾರೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇತರ ಸಹಕಾರ ಸಂಘಗಳ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಇಂತಹ ಮಾಹಿತಿ ಕಾರ್ಯಾಗಾರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ ಮಾತನಾಡಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಹೊಸ ಕಾನೂನುಗಳು, ನಿಯಮಗಳು ಜಾರಿಯಾಗುತ್ತಾ ಇದೆ. ಆದ್ದರಿಂದ ವ್ಯಾಜ್ಯಗಳನ್ನು ಬೇಗ ವಿಲೇವಾರಿ ಮಾಡಬೇಕು. ವಯಸ್ಕರ, ಅಪ್ರಾಪ್ತರ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸಿ ಜನರಿಗೆ ಸಹಕರಿಸಬೇಕು. ಖಾಯಂ ಜನತಾ ನ್ಯಾಯಾಲಯದಲ್ಲಿ ಯಾವುದೇ ಕೋರ್ಟ್ ಶುಲ್ಕ ಇಲ್ಲದೇ ಪ್ರಕರಣಗಳನ್ನು ದಾಖಲಿಸಬಹುದಾಗಿದ್ದು, ಇದರಿಂದ ಸಹಕಾರಿ ಸಂಘಗಳಿಗೆ ತುಂಬಾ ಪ್ರಯೋಜನವಾಗಲಿದೆ ಎಂದು ತಿಳಿಸಿ ಖಾಯಂ ಜನತಾ ನ್ಯಾಯಾಲಯದ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
    ಕಂಕನಾಡಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗುರುರಾಜ ರವರು ಮಾತನಾಡಿ “ಎಲ್ಲಾ ಸಹಕಾರಿ ಸಂಘಗಳು ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಚಿನ್ನಾಭರಣ ಸಾಲ ನೀಡುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು.
    ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಸಹಕಾರಿ ಸಂಘಗಳಲ್ಲಿ ಕೂಡ ಈಗ ವಕೀಲರ ಕೇಸ್‌ಗಳು ಹೆಚ್ಚಾಗಿದ್ದು ಇದರ ಬಗ್ಗೆ ಎಲ್ಲರಿಗೂ ಸೂಕ್ತ ಕಾನೂನಿನ ಅರಿವು ಬೇಕಾಗಿದೆ. ನಕಲಿ ಚಿನ್ನಗಳನ್ನು ಮಧ್ಯವರ್ತಿಗಳ ಮುಖೇನ ಸೊಸೈಟಿಯಲ್ಲಿ ಅಡವು ಇಡುವುದರಿಂದ ಜನ ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ನಾವು ಕೂಡಾ ಜಾಗೃತರಾಗಿರಬೇಕು. ಸಹಕಾರ ಸಂಘಗಳ ಉನ್ನತಿಗೆ ಇಂತಹ ತರಬೇತಿಗಳ ಅಗತ್ಯವಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
    ಈ ಕಾರ್ಯಾಗಾರದಲ್ಲಿ ಸಹಕಾರ ಸಂಘಗಳಿಗೆ ಸಂಬ೦ಧಿಸಿದ ಕಾನೂನು ವಿಚಾರಗಳು, ಸಂಘಗಳ ಭದ್ರತೆ ಮತ್ತು ಸುರಕ್ಷತಾ ಕ್ರಮಗಳು, ಕಾನೂನು ಸಮಸ್ಯೆಗಳಿಗೆ ಲಭ್ಯವಿರುವ ನೆರವು ಹಾಗೂ ಸಹಕಾರ ಸಂಘಗಳ ಸುಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಯಿತು. ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಎದುರಾಗಬಹುದಾದ ಕಾನೂನು ಮತ್ತು ಸುರಕ್ಷತಾ ಸವಾಲುಗಳ ಕುರಿತು ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ದ. ಕ ಹಾಗೂ ಉಡುಪಿ ಜಿಲ್ಲೆಯ ಹೆಚ್ಚಿನ ಸಹಕಾರ ಸಂಘಗಳ ಪದಾಧಿಕಾರಿಗಳು ಈ ಮಾಹಿತಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಸೀತಾರಾಮ್ ಎನ್, ಗೋಪಾಲ್ ಎಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಖಾಯಂ ಜನತಾ ನ್ಯಾಯಾಲಯದ ಪ್ಯಾನೆಲ್ ವಕೀಲರಾದ ಮಾನಸ ಹೆಗ್ಡೆ, ಪಾಲಿಸಿ ಗ್ರೇಸ್ ಇನ್ಶೂರೆನ್ಸ್ ಇದರ ಹಿರಿಯ ಉಪಾಧ್ಯಕ್ಷರಾದ ರಾಮ್ ಮನೋಹರ್ ರೈ , ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್‌ ಗೌರವ ಅಧ್ಯಕ್ಷರಾದ ವಾಮನ್ ಕೆ. ಮತ್ತಿತರರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ ವಂದಿಸಿದರು. ಸಹಾಯಕ ಪ್ರಬಂಧಕರಾದ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

     

    Atmashakthi Vividhoddesha Sahakari Sangha Banking Chittaranjan Bolar Co Operative ministry Cooperative Cooperative Department Cooperative Registrar I. Tharanatha Poojary
    Previous Articleವಿಶ್ವಕರ್ಮ ಸಹಕಾರ ಬ್ಯಾಂಕ್ ಕಾರ್ಕಳ ಶಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
    Next Article ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ

    Related Posts

    ಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    September 2, 2026

    ರಾಯಚೂರಿನ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 26.90 ಲಕ್ಷ ರೂ. ನಿವ್ವಳ ಲಾಭ

    September 2, 2026

    ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ

    September 2, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    September 2, 2026

    ರಾಯಚೂರಿನ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 26.90 ಲಕ್ಷ ರೂ. ನಿವ್ವಳ ಲಾಭ

    September 2, 2026

    ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ

    September 2, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.