Close Menu
    Top News

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    August 24, 2026

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    August 24, 2026

    ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    August 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ಯಶಸ್ವಿ 120ನೇ ವಾರ್ಷಿಕ ಮಹಾಸಭೆ
    News

    ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ಯಶಸ್ವಿ 120ನೇ ವಾರ್ಷಿಕ ಮಹಾಸಭೆ

    adminBy adminAugust 24, 2026

    ಮೈಸೂರು: ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ನಿಯಮಿತದ 2025-26ನೇ ಸಾಲಿನ 120ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

    https://chat.whatsapp.com/FCEnlTkAKCC0MGPhXtX4i4
    ನಗರದ ಜೆ.ಕೆ.ಮೈದಾನದ ಅಲ್ಯುಮಿನಿಯಂ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆ ಬ್ಯಾಂಕ್‌ನ ಅಧ್ಯಕ್ಷ ಜೆ.ಯೋಗೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಮಾತನಾಡಿದ ಅವರು, ಈ ಸಾರಿ ಸಭೆಯಲ್ಲಿ ನಮ್ಮ ಮೇಲೆ ನಂಬಿಕೆ ಇಟ್ಟು ಆಡಳಿತ ಮಂಡಳಿಯ ಎಲ್ಲಾ ತೀರ್ಮಾನಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮರಣ ನಿಧಿಗೆ ವಂತಿಗೆ ಕೊಡದಿದ್ದವರಿಗೂ ಮರಣನಿಧಿ ಕೊಡಲು ತೀರ್ಮಾನ ಕೈಗೊಳ್ಳಲು ನಮಗೆ ಅವಕಾಶ ನೀಡಿದ್ದಾರೆ. 1ಕೋಟಿ 30ಲಕ್ಷ ರೂ. ಲಾಭವನ್ನು 33373 ಸದಸ್ಯರ ಉಳಿತಾಯ ಖಾತೆಗೆ ಶೇ.10 ಲಾಭಾಂಶವನ್ನು ಪ್ರತಿ ಸದಸ್ಯರಿಗೂ ನೀಡಲಾಗುತ್ತಿದೆ. ಈಗಾಗಲೇ ಪ್ರತ್ಯೇಕ ಶಾಖೆ ತೆರೆಯಲು ಗುದ್ಧಲಿಪೂಜೆ ನೇರವೇರಿಸಿದ್ದು, ಮುಂದಿನ ಸಭೆಯೊಳಗೆ ಅದರಲ್ಲಿ ಭವನ ನಿರ್ಮಾಣಕ್ಕೆ ಎಲ್ಲರನ್ನು ಗಣನೆಗೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಸಂಘದ ಸದಸ್ಯರ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 120ನೇ ವರ್ಷದ ವಾರ್ಷಿಕ ಸಭೆ ಹಿನ್ನೆಲೆಯಲ್ಲಿ 120 ಮಂದಿ ನಮ್ಮ ಸಂಘಕ್ಕೆ ನೊಂದಣಿಯಾದ ಹಿರಿಯ ಸದಸ್ಯರಿಗೂ ಸನ್ಮಾನ ಮಾಡಲಾಗಿದೆ ಎಂದರು.


    ಮುಖ್ಯಕಾರ್ಯನಿರ್ವಾಹಕ ಕೆ.ಹರ್ಷಿತ್‌ ಗೌಡ ಮಾತನಾಡಿ, ಬೈಲಾ ತಿದ್ದುಪಡಿ, ಆಡಳಿತ ಮಂಡಳಿಯ ಬಜೆಟ್‌, ಮುಂದಿನ ವರ್ಷದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳಿಗೂ ಸದಸ್ಯರು ಅನುಮತಿ ನೀಡಿದ್ದಾರೆ. ಮರಣ ನಿಧಿ ಕಟ್ಟಿಸಿಕೊಳ್ಳುವುದಕ್ಕೆ ಕೊನೆ ಸರ್ವ ಸದಸ್ಯರ ಸಭೆಯಲ್ಲಿ ನೀಡಿದ್ದ ಅವಕಾಶವನ್ನೂ ಈ ಸಭೆಯಲ್ಲಿಯೂ ಸಹ ಅವಕಾಶ ನೀಡುವ ಸಂಬಂಧ ಆಡಳಿತ ಮಂಡಳಿಯ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ಆಡಳಿತ ಮಂಡಳಿಯ ಚುನಾವಣೆಗೆ ಎಂದಿನಂತೆ ಸಹಕಾರ ಇಲಾಖೆಯಿಂದಲೇ ಅಧಿಕಾರಿಗಳು ಬರುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆಗೆ ಸಹಕಾರ ಇಲಾಖೆಯಿಂದ ಬರುತ್ತಿದ್ದ ಚುನಾವಣಾಧಿಕಾರಿಗಳು ಮುಂದಿನ ದಿನಗಳಲ್ಲಿ ಸಹಕಾರಿ ಕಾಯಿದೆ ರೀತಿಯಲ್ಲಿ ಅದನ್ನು ಕಾರ್ಯದರ್ಶಿಗಳೇ ಮಾಡಬಹುದು. ಕೇವಲ ಅಧ್ಯಕ್ಷ, ಉಪಾಧ್ಯಕ್ಷರ ಸಭೆಯನ್ನು ಆ ಒಂದು ದಿನಕ್ಕೆ ಸಭೆ ಕರೆಯುವ ಅಧಿಕಾರ ಇರುತ್ತದೆ ಎಂಬ ನಿಯಮ ಅಷ್ಟೇ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
    ಸಿಎ ನಿವೇಶನ 10 ವರ್ಷದಲ್ಲಿ ಕಟ್ಟಡ ಕಟ್ಟಲಿಲ್ಲ ಎಂದರೆ ವಾಪಸ್‌ ಹೊರಟು ಹೋಗುತ್ತದೆ. ಈ ಕಾರಣದಿಂದ ವಾಪಾಸ್‌ ಹೋಗಿದ್ದ ನಿವೇಶನವನ್ನು ಮರಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪಡೆಯಲಾಗಿತ್ತು. ನ್ಯಾಯಾಲಯದ ಆದೇಶದಂತೆ 6ತಿಂಗಳಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಹಿಂದಿನ ಶಿಲಾನ್ಯಾಸ ನಾಮಫಲಕವನ್ನು ಸಹ ಕಟ್ಟಡದಲ್ಲಿ ಅಳವಡಿಸಲಾಗುವುದು. ಅಂತೆಯೇ ಹೊಸ ಶಿಲ್ಯಾನಾಸವನ್ನು ನಿಯಮನೂಸಾರ ಅಳವಡಿಸಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದರು.
    ಉಪಾಧ್ಯಕ್ಷ ಟೆಂಟ್‌ ಟಿ.ರವಿ, ನಿರ್ದೇಶಕರಾದ ಎಸ್‌.ಬಿ.ಎಂ.ಮಂಜು, ಎನ್‌.ಯೋಗಾನಂದ, ಜೆ.ನಿರಂಜನ್‌, ಎಚ್‌.ಹರೀಶ್‌ ಕುಮಾರ್‌, ಆರ್.ರವಿಕುಮಾರ್(ರಾಜಕೀಯ), ಎಂ.ರಾಮಕೃಷ್ಣ, ಆರ್‌.ಸೋಮಣ್ಣ, ಕೆ.ಗಿರೀಶ್‌, ಸಿ.ಚಂದ್ರಶೇಖರ್‌, ಪಿ.ರಾಜೇಶ್ವರಿ, ಎಂ.ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಎಂ.ವೈ.ರಮೇಶಗೌಡ, ಸಿ.ಎಸ್‌.ರಾಮಕೃಷ್ಣಯ್ಯ ಇನ್ನಿತರರು ಉಪಸ್ಥಿತರಿದ್ದರು.

     

    Co Operative ministry Cooperative Cooperative Department Cooperative Registrar The Mysore Co Operative Bank
    Previous Articleಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ 2.25 ಕೋಟಿ ದಾಖಲೆಯ ನಿವ್ವಳ ಲಾಭ; ಶೇ.25 ಡಿವಿಡೆಂಡ್‌ ಘೋಷಣೆ
    Next Article ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    Related Posts

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    August 24, 2026

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    August 24, 2026

    ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    August 24, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    August 24, 2026

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    August 24, 2026

    ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    August 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.