ಕಾರ್ಕಳ: ಸೂರ್ಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಮೂರನೇ ವಾರ್ಷಿಕ ಮಹಾಸಭೆ ಕಾರ್ಕಳ ಜೋಡು ರಸ್ತೆಯ ಉಷಾ ಪಾರ್ಟಿ ಹಾಲ್‌ನಲ್ಲಿ ಭಾನುವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಸೊಸೈಟಿಯ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನಿ ಕುಲಾಲ್ ಅವರು ಸಂಸ್ಥೆಯ ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಮೈತ್ರಿ ನಾಯ್ಕ್ ಅವರು ಹಣಕಾಸಿನ ವರದಿಯನ್ನು ವಾಚಿಸಿದರು. ನಿರ್ದೇಶಕರಾದ ಪ್ರಶಾಂತ್ ಆಚಾರ್ಯ ಸಂಸ್ಥೆಯ ಮುಂದಿನ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿಯೂ ಲಾಭ ಗಳಿಸಿದ್ದು, ಲಾಭದ ವಿಂಗಡಣೆ ಕುರಿತು ನಿರ್ದೇಶಕರಾದ ಶ್ರುತಿ ಅವರು ಸಭೆಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಘದ ಸದ್ಯಸರ ಮಕ್ಕಳಾದ ಪೃಥ್ವಿ ಪೂಜಾರಿ ಹಾಗೂ ಆಯುಶ್ರೀ ಎಂ. ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿಯ ಅಧ್ಯಕ್ಷ ಶ್ರೀಧರ್ ಪೂಜಾರಿ ಮಾತನಾಡಿ, ಸೂರ್ಯ ಸೌಹಾರ್ದ ಸೊಸೈಟಿಯ ಬೆಳವಣಿಗೆಯಲ್ಲಿ ನಿರ್ದೇಶಕರು, ಸಿಬ್ಬಂದಿ ವರ್ಗ, ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರ ಸಹಕಾರವೇ ಪ್ರಮುಖ ಶಕ್ತಿಯಾಗಿದೆ. ಎಲ್ಲರ ಪರಿಶ್ರಮ ಮತ್ತು ಸಹಕಾರದಿಂದ ಸಂಸ್ಥೆ ಇಂದು ಉತ್ತಮವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಸೊಸೈಟಿಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಸೋಮಶೇಖರ್ ಬಿ.ವಿ., ನಿರ್ದೇಶಕರಾದ ಪ್ರದೀಪ್, ಯುವರಾಜ್, ಆಶಾ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ, ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು. ಗೋಪಿನಾಥ್ ವಂದಿಸಿದರು.









