Close Menu
    Top News

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಸಂಸ್ಥೆಗಳ ಏಳಿಗೆಗೆ ಎಲ್ಲರ ಬೆಂಬಲ ಅಗತ್ಯ
    News

    ಸಹಕಾರ ಸಂಸ್ಥೆಗಳ ಏಳಿಗೆಗೆ ಎಲ್ಲರ ಬೆಂಬಲ ಅಗತ್ಯ

    adminBy adminAugust 13, 2026

    ಅಂಕಿತ ಕ್ರೆಡಿಟ್ ಸೌಹಾರ್ದ ಸಹಕಾರ ಸಂಸ್ಥೆಯಲ್ಲಿ ಎಚ್.ಎಸ್.ಮಂಜಪ್ಪ ಅಭಿಪ್ರಾಯ

    ಸಾಗರ: ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಾಪನೆಯಾಗುವ ಸಹಕಾರ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿ ರೂಪುಗೊಳ್ಳಲು ಎಲ್ಲರ ಬೆಂಬಲ ಅಗತ್ಯ ಎಂದು ಸಹಕಾರಿ ರತ್ನ ಎಚ್.ಎಸ್.ಮಂಜಪ್ಪ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಸಾಗರದ ಅಂಕಿತ ಕ್ರೆಡಿಟ್ ಸೌಹಾರ್ದ ಸಹಕಾರ ಸಂಸ್ಥೆಯಿಂದ ಏರ್ಪಡಿಸಿದ್ದ ಷೇರುದಾರರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರಕ್ಕೆ ಕರ್ನಾಟಕ ನೀಡಿದ ಕೊಡುಗೆ ಅಪಾರವಾಗಿದೆ. ಅನೇಕ ವರ್ಷಗಳಿಂದ ಸಹಕಾರ ಸಂಸ್ಥೆಗಳು ಷೇರುದಾರರ ಹಿತ ಕಾಯುವ ಜತೆ ಸ್ಥಳೀಯವಾಗಿ ಸೇವಾಕಾರ್ಯಗಳಿಗೆ ಒತ್ತು ನೀಡುತ್ತಿದೆ. ಸಾಗರ ತಾಲೂಕಿನಲ್ಲಿ ಅನೇಕ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
    ಸಂಸ್ಥೆಯ ಅಧ್ಯಕ್ಷ ಎಚ್.ಎನ್.ರಮೇಶ್ ಮಾತನಾಡಿ, ಅಂಕಿತ ಸೌಹಾರ್ದ ಸಹಕಾರ ಸಂಸ್ಥೆ ಪ್ರತಿವರ್ಷ ಷೇರುದಾರರ ಸಮಾಲೋಚನಾ ಸಭೆ ನಡೆಸುತ್ತಿದ್ದು, ಆರ್ಥಿಕ ಶಕ್ತಿ ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡುತ್ತಿದೆ. 2025-26ನೇ ಸಾಲಿನಲ್ಲಿ ಸಂಸ್ಥೆಯು 27 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ.11 ಡಿವಿಡೆಂಡ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಷೇರುದಾರ ಸ್ನೇಹಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.
    ಸಂಘದ ಉಪಾಧ್ಯಕ್ಷೆ ಹೇಮಾ ಸಹದೇವ, ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್, ಮಂಗಳಾ, ವಿನುತಾ ಕಲ್ಸಿ, ಕೆ.ಸಹದೇವ್, ಎನ್.ಪ್ರಕಾಶ್, ಅಂಕಿತಾ ಕಲ್ಸಿ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

    Ankitha Crdit Souharda Co Operative Society Sagara B.V Ravindranath Hema Sahadeva Sahakara Ratna S H Manjappa
    Previous Articleಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಯಾದರೆ ಮಾತ್ರ ಸೊಸೈಟಿಯ ಪ್ರಗತಿ ಸಾಧ್ಯ
    Next Article ದಕ್ಷಿಣ ಕನ್ನಡ ಹಾಲು ಒಕ್ಕೂಟ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪ ಬಿಡುಗಡೆ

    Related Posts

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.