Close Menu
    Top News

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ
    News

    ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ

    adminBy adminAugust 11, 2026

    ಕುಂದಾಪುರ: ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಉಪಾಧ್ಯಕ್ಷರಾದ ವಿವೇಕ್ ಯು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ಪ್ರಸಕ್ತ ಸಾಲಿನಲ್ಲಿ 65.37 ಲಕ್ಷ ರೂ. ಲಾಭ ಗಳಿಸಿ ಶೇ.15 ಡಿವಿಡೆಂಡ್ ಘೋಷಿಸಲಾಯಿತು.

    https://chat.whatsapp.com/FCEnlTkAKCC0MGPhXtX4i4
    2010ರಲ್ಲಿ ಪ್ರಾರಂಭಗೊಂಡ ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘವು ತೀವ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ತನ್ನಲ್ಲಿರುವ ಠೇವಣಾತಿಗಳನ್ನು ಸಮರ್ಪಕವಾಗಿ ಸಾಲ ವಿತರಣೆ ಹಾಗೂ ಸುಸ್ಥಿರ ಹೂಡಿಕೆ ಮಾಡಿ ಪ್ರಗತಿಯ ಸಾಧನೆಯಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ 3,867 ‘ಎ’ ತರಗತಿ ಸದಸ್ಯರು ಮತ್ತು ‘ಬಿ’ ತರಗತಿ 49 ಸದಸ್ಯರಿದ್ದಾರೆ. 2025-26ನೇ ಸಾಲಿನಲ್ಲಿ ರೂ.41.18 ಕೋಟಿ ಠೇವಣಿ ಹೊಂದಿದ್ದು ರೂ.34.34 ಕೋಟಿ ರೂಪಾಯಿ ಸಾಲ ನೀಡಿದೆ. ಠೇವಣಿಯಲ್ಲಿ ಕಳೆದ ಬಾರಿಗಿಂತ ಶೇ.13.91 ಪ್ರಗತಿ ಸಾಧಿಸಿದೆ. ಕಳೆದ ಬಾರಿ ನಿಗದಿಪಡಿಸಿದ ಠೇವಣಿ, ಸಾಲ ನೀಡಿಕೆ, ಸುಸ್ತಿ ಸಾಲ ಗುರಿ ಮೀರಿ ಪ್ರಗತಿ ಸಾಧಿಸಿದೆ. 40 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದ ಸಂಸ್ಥೆಯಾಗಿದ್ದು, ಇದರಲ್ಲಿ ನೌಕರರ ಶ್ರಮ ಗ್ರಾಹಕರ ಸಹಕಾರ ಶ್ರಮವಿದೆ. ಪ್ರಧಾನ ಕಚೇರಿಯಲ್ಲಿ ಠೇವಣಿ 18.27 ಕೋಟಿ ರೂಪಾಯಿ, 2013ಲ್ಲಿ ಪ್ರಾರಂಭಗೊಂಡ ಸಿದ್ಧಾಪುರ ಶಾಖೆ 9.21 ಕೋಟಿ, 2016ರಲ್ಲಿ ಪ್ರಾರಂಭವಾದ ಉಪ್ಪುಂದ ಶಾಖೆ 7.81 ಕೋಟಿ ಮತ್ತು 2019ರಲ್ಲಿ ಪ್ರಾರಂಭವಾದ ತೆಕ್ಕಟ್ಟೆ ಶಾಖೆ 5.87 ಕೋಟಿ ಠೇವಣಿ ಹೊಂದಿರುತ್ತದೆ.


    ಸಿದ್ಧಾಪುರ ಶಾಖೆಯಲ್ಲಿ ರೂ.7.83 ಕೋಟಿ, ಉಪ್ಪುಂದ ಶಾಖೆಯಲ್ಲಿ 6.52 ಕೋಟಿ ಮತ್ತು ತೆಕ್ಕಟ್ಟೆ ಶಾಖೆಯಲ್ಲಿ 5.22 ಕೋಟಿ ರೂಪಾಯಿ ಮತ್ತು ಪ್ರಧಾನ ಕಚೇರಿಯಲ್ಲಿ 14.76 ಕೋಟಿ ಸಾಲ ನೀಡಿದ್ದು ಎಲ್ಲಾ ಶಾಖೆಯು ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘವು ವರದಿ ವರ್ಷದಲ್ಲಿ ರೂ.81,88,217ರಷ್ಟು ಇ-ಸ್ಟ್ಯಾಂಪ್‌ ವ್ಯವಹಾರ ನಡೆಸಿದೆ. ಮುಂದಿನ ಸಾಲಿನಲ್ಲಿ ಸಾಲ ವಸೂಲಾತಿ, ಠೇವಣಿ ಸಂಗ್ರಹ ಮುಂತಾದ ವ್ಯವಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು ಠೇವಣಿಯ ಶೇ.28ರಂತೆ ರೂ.11.86 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ.

    ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ 7 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಕಾಲದಲ್ಲಿ ಸಾಲ ಮರುಪಾವತಿಸಿದ 11 ಸದಸ್ಯರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.
    2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಅಡಿಗ ಇವರು ಮಂಡಿಸಿದರು. ನಿರ್ದೇಶಕರಾದ ಪಿ.ಸುಬ್ರಾಯ ಹೆಬ್ಬಾರ್, ನಟರಾಜ ಹೆಚ್, ಗಾಯತ್ರಿ ಕಾರಂತ್, ರವೀಂದ್ರ ಕನ್ನಂತ ,ಕುಷ್ಟ ನಾಯಕ್, ನಾಗೇಶ್ ರಾವ್, ಟಿ.ರಾಮ, ಪ್ರಭಾಕರ ಪೈ ಹಾಜರಿದ್ದರು. ಸಿಬ್ಬಂದಿ ಮಮತಾ ಮತ್ತು ರೇಷ್ಮಾ ಖಾರ್ವಿ ಅವರಿಂದ ಪ್ರಾರ್ಥನೆ ಜರಗಿತು. ಸುಪ್ರೀತ್ ಚಾತ್ರ ಸ್ವಾಗತಿಸಿ, ರಮಾನಂದ ಕಾರಂತರು ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ರಾವ್ ವಂದಿಸಿದರು.

    Banking Cooperative Cooperative Department Cooperative Registrar Kundapura Shree Brahmi Souharda Credit Co operative Society Kundapura Vivek U
    Previous Articleಸಹಕಾರಿ ಕ್ಷೇತ್ರಕ್ಕೆ ಮಹತ್ವದ ಬದಲಾವಣೆ: ಎನ್‌ಸಿಡಿಸಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
    Next Article ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಮಹಾಸಭೆ

    Related Posts

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.