೨೫% ಡಿವಿಡೆಂಡ್ ಘೋಷಣೆ
ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಭಾನುವಾರ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ.ಭಾಸ್ಕರ್ ರಾವ್ (ಮಾಜಿ ಕಾರ್ಪೋರೇಟರ್) ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಸಂಘದ ಅಧ್ಯಕ್ಷ ಭಾಸ್ಕರ್ ರಾವ್ ಸ್ವಾಗತಿಸಿದರು. 2025-26ನೇ ಸಾಲಿನ ಆಡಳಿತ ಮಂಡಳಿಯ ವರದಿ, ನಿವ್ವಳ ಲಾಭ, ಉಪನಿಯಮ ಪ್ರಕಾರ ಅಂದಾಜು ಬಜೆಟ್ ಅನ್ನು ಮಂಡಿಸಲಾಯಿತು. ಲೆಕ್ಕಪರಿಶೋಧನೆಗೆ ಸಿಎ ಕೆ.ವಿ ಚಂದ್ರಮೋಹನ್ ಅವರನ್ನು ಮಂಜೂರು ಪಡೆಯಲಾಯಿತು. ನಿರ್ದೇಶಕರಾದ ಜಯಪ್ರಕಾಶ್ ವರದಿ ಮಂಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಭಾರತಿ ಗಣೇಶ್ ಭಟ್, ಚಂದ್ರಿಕಾ ಡಿ.ರಾವ್ ಅವರನ್ನು ಅಭಿನಂದಿಸಲಾಯಿತು. ಸಹಕಾರಿಗಳು ಯಾವ ರೀತಿ ಸದಸ್ಯರಿಗೆ ಸೇವೆ ಕೊಡಬೇಕು -ಸಹಕಾರಿಯ ಜವಾಬ್ದಾರಿ ಬಗ್ಗೆ ಸದಸ್ಯರ ಜವಾಬ್ದಾರಿ –ಅಭಿವೃದ್ಧಿ ಬಗ್ಗೆ ಅಗತ್ಯ ಮಾಹಿತಿ ನೀಡಿದರು. ಸದಸ್ಯರ ಮಕ್ಕಳಿಗೆ ಪುಸ್ತಕ-ಪೆನ್-ಕಂಪಾಸ್ ಬಾಕ್ಸ್ ವಿತರಣೆ-ಅಗತ್ಯದ ಅಕ್ಕಿ ವಿತರಣೆ, ವೈದ್ಯಕೀಯ ನೆರವು-ಜ್ಯೋತಿ ಕೆ.ಎಂ.ಸಿ ವತಿಯಿಂದ ಬಿ.ಪಿ, ಶುಗರ್-ಶಿಬಿರದ ಮಾಹಿತಿ-ಉಚಿತ ಶಿಬಿರ ನಡೆಯಿತು. ಸದಸ್ಯರಿಗೆ ನೆನಪಿನ ಕಾಣಿಕೆ ವಿತರಿಸಿ ಸಹಕಾರಿಯ ಪ್ರಗತಿಪರ ಪ್ರಮುಖ ಕಾರ್ಯಕ್ರಮದ ಬಗ್ಗೆ ಭಾರತಿ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕರಾದ ಎ.ಕೃಷ್ಣಭಟ್ –ವಿಜೇತಾ ಎಸ್ ರಾವ್ -ಸುಂದರ ಸಾಲ್ಯಾನ್-ಸುಪ್ರೀತ್ ಜೆ.ಕೆ-ಲತಾ ಎನ್ ಆಳ್ವ -ಸದಾಶಿವ ಅಮೀನ್ -ಪೂರ್ಣಿಮಾ ಬಿ.ರಾವ್ –ಜಯಪ್ರಕಾಶ್ – ಕಾನೂನು ಸಲಹೆಗಾರರಾದ ಐವನ್ ಡಿಸೋಜ ಮತ್ತು ಹಿರಿಯ ಸದಸ್ಯರಾದ ಉಷಾ ಭವಾನಿಶಂಕರ್ -ಸುಧಾ ಭಾಸ್ಕರ್ –ಜೆ ಕೊರಗಪ್ಪ –ವಾರಿಜಾ ಕೊರಗಪ್ಪ-ವಸಂತ ಶೆಟ್ಟಿ –ಮೀರಾ ರವೀಂದ್ರ –ರಘುವೀರ್ ಬಪ್ಪಾಲ್ -ಶುಭಾ ಪ್ರಶಾಂತ್ –ಆನಂದ ಸೋನ್ಸ್ –ತುಕಾರಾಮ್-ಪ್ರದೀಪ್ ಕುಮಾರ್-ಮಿಲಾಜ್ ಅತ್ತಾವರ- ಎ.ಆರ್.ಇಬ್ರಾನ್ ಬಂದರ್-ಎ.ಜೆ ಶರ್ಮ-ಕ್ರೀಡಾಪಟು ಪದ್ಮನಾಭ -ಹರೀಶ್ ಕುಮಾರ್ ಸಲಹೆ ಸೂಚನೆ ನೀಡಿ ಸಹಕಾರಿಗೆ ಮಾರ್ಗದರ್ಶನ ಮಾಡಿದರು. ಚಂದ್ರಿಕಾ ಡಿ.ರಾವ್ ಕಾರ್ಯಕ್ರಮ ಸಂಯೋಜಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆ ಸಂಪನ್ನಗೊಂಡಿತು, ಸದಾಶಿವ ಅಮೀನ್ ವಂದಿಸಿದರು.









