52ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಾಹಿತಿ
ಬೀದರ್: ನಗರದ ದಿ ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ದಾಖಲಿಸಿದ್ದು, ₹1.34 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ವಿಜಯಕುಮಾರ ಅಣ್ಣಪ್ಪ ಪಾಟೀಲ ಗಾದಗಿ ತಿಳಿಸಿದರು.
https://chat.whatsapp.com/FCEnlTkAKCC0MGPhXtX4i4
ಭಾನುವಾರ ನಡೆದ ಬ್ಯಾಂಕ್‌ನ 52ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನ ಪ್ರಗತಿ ಹಾಗೂ ವಿವಿಧ ಆರ್ಥಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಆಡಿಟ್‌ನಲ್ಲಿ ‘ಎ’ ಗ್ರೇಡ್ ದೊರೆತಿದೆ. ಬೀದರ್ ಮತ್ತು ಚಿಟಗುಪ್ಪ ತಾಲೂಕು ಕೇಂದ್ರಗಳಲ್ಲಿ ಹೊಸ ಶಾಖೆ ಆರಂಭಿಸಲು ಚಿಂತನೆ ನಡೆದಿದೆ. ಈಗಾಗಲೇ ಪ್ಲಾಟಿನಮ್ ಡೆಬಿಟ್ ಕಾರ್ಡ್, ಯುಪಿಐ, ಐಎಂಪಿಎಸ್ ನ್ಯಾಚ್, ಆರ್‌ಟಿ ಜಿಎಸ್, ಎನ್‌ಇಎಫ್‌ಟಿ, ಲಾಕರ್ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಶೆಟಕಾರ್ ವಾರ್ಷಿಕ ವರದಿ ಮಂಡಿಸಿ, ‘ಬ್ಯಾಂಕ್‌ನಲ್ಲಿ ₹ 371 ಕೋಟಿ ಠೇವಣಿ ಸಂಗ್ರಹವಾಗಿದ್ದು, ಈ 240 ಕೋಟಿ ಸಾಲ ನೀಡುವ ಗುರಿ, ದುಡಿಯುವ ಬಂಡವಾಳ ₹ 471 ಕೋಟಿ ಗುರಿ ಇಟ್ಟುಕೊಳ್ಳಲಾಗಿದೆ. ಗ್ರಾಹಕರಿಗಾಗಿ ಡಿಜಿಟಲ್ ಸೇವೆ ನೀಡಲಾಗುತ್ತಿದೆ. ಬೀದರ್ ಹೊರ ವಲಯದಲ್ಲಿ ಸಹಕಾರಿ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದರು.
ಬ್ಯಾಂಕ್ 8,930 ಸದಸ್ಯರನ್ನು ಹೊಂದಿದೆ. ₹ 5.79 ಕೋಟಿ ಷೇರು ಬಂಡವಾಳ, ₹ 313.19 ಕೋಟಿ ಠೇವಣಿ, 355.28 ಕೋಟಿ ದುಡಿಯುವ ಬಂಡವಾಳ, ದುರ್ಬಲ ವರ್ಗದ ಸಾಲ ₹ 24.68 ಕೋಟಿ ಇದೆ’ ಎಂದು ವಿವರಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಸುನೀಲ ಕುಮಾರ ಬಿರಾದಾರ ಗುನ್ನಳ್ಳಿ, ನಿರ್ದೇಶಕರಾದ ಅಶೋಕ ಕುಮಾರ ಲಾಚುರಿಯೆ, ಕಾಶಿನಾಥ ಶೆಟಕಾರ್, ಸೂರ್ಯಕಾಂತ ಶೆಟಕಾರ್, ಡಿ.ವಿ. ಸಿಂದೋಲ್, ಜಯಕುಮಾರ ಕಾಂಗೆ, ಮಡಿವಾಳಪ್ಪ ಗಂಗಶೆಟ್ಟಿ, ಭರತ ಶೆಟಕಾರ್, ಶಿವನಾಥ ಪಾಟೀಲ, ಅಮರನಾಥ ಫುಲೇಕರ್, ವಿಶ್ವನಾಥ ಕಾಜಿ, ಉಮೇಶ ಮೂಲಿಮನಿ, ಜ್ಯೋತಿ ಗೌರಶೆಟ್ಟಿ, ಪ್ರವೀಣಾ ರೆಡ್ಡಿ, ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಾರಬಾರಿ, ಸಹಾಯಕ ಮುಖ್ಯ ನಿರ್ವಹಣಾಧಿಕಾರಿ ಮಹಾನಂದ ಪಾಟೀಲ ಹಾಜರಿದ್ದರು.


