Close Menu
    Top News

    ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ

    October 1, 2026

    ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    October 1, 2026

    ಭಾರತ್ ಟ್ಯಾಕ್ಸಿ ಪ್ರಥಮ ವಾರ್ಷಿಕ ಮಹಾಸಭೆ

    October 1, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಹಿರಿಯೂರು ವೀರಶೈವ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ, 27ನೇ ವಾರ್ಷಿಕ ಮಹಾಸಭೆ
    News

    ಹಿರಿಯೂರು ವೀರಶೈವ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ, 27ನೇ ವಾರ್ಷಿಕ ಮಹಾಸಭೆ

    adminBy adminAugust 3, 2026

    ಹಿರಿಯೂರು: ಹಿರಿಯೂರು ವೀರಶೈವ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಹಾಗೂ 27ನೇ ವಾರ್ಷಿಕ ಮಹಾಸಭೆಯು ಭಾನುವಾರ ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ| ಶ್ರೀ ಬಸವಕುಮಾರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಂಘದ ಆಡಳಿತ ಮಂಡಳಿಯು ನಿರಂತರವಾಗಿ ಉತ್ತಮ ಸೇವೆ ಸಲ್ಲಿಸುತ್ತ ಬಂದಿರುವುದರಿಂದ ಸಂಘವು ಪ್ರಗತಿಪಥದಲ್ಲಿ ಸಾಗಿದೆ. ಎಲ್ಲರ ಪರಿಶ್ರಮದಿಂದ ಈ ಸಂಸ್ಥೆ ಉನ್ನತ ಮಟ್ಟಕ್ಕೆ ಹೋಗಿ ಅಭಿವೃದ್ಧಿ ಸಾಧಿಸಿ ಮುಂದಿನ ದಿನಗಳಲ್ಲಿ ಸುವರ್ಣ ಮಹೋತ್ಸವ ಆಚರಿಸಲಿ ಎಂದರು.
    ಸಂಘದ ಅಧ್ಯಕ್ಷರಾದ ಸಿ.ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, 1999-2000ರಲ್ಲಿ ಬಾಡಿಗೆ ಕಟ್ಟಡದಲ್ಲಿ ಸಣ್ಣದಾಗಿ ಪ್ರಾರಂಭವಾದ ಈ ಸಂಸ್ಥೆಯು ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸಂಘವು 25 ವರ್ಷಗಳಿಂದ ಪ್ರತಿವರ್ಷವೂ ಲಾಭ ಹೆಚ್ಚಿಸಿಕೊಳ್ಳುತ್ತ ಬಂದಿದ್ದು ಈ ವರ್ಷ 16,50,179 ರೂ. ಲಾಭ ಗಳಿಸಿ ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಮುಂದುವರಿಸಿದೆ. ಸಾಲ ವಸೂಲಾತಿಯಲ್ಲಿ ಶೇ.100ರ ಸಮೀಪದಲ್ಲಿದ್ದು ಕಳೆದ 26 ವರ್ಷಗಳಲ್ಲಿ ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಾತಿ, ಲಾಭಾಂಶ ಗಳಿಕೆಯ ವಲಯಗಳಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.


    ಮುಖ್ಯ ಅತಿಥಿಗಳಾಗಿ ಹಿರಿಯೂರು ಗಾಣಿಗ ಸಮಾಜದ ಅಧ್ಯಕ್ಷರಾದ ಡಿ.ಎಸ್.ಮಹೇಶ್ ಭಾಗವಹಿಸಿದ್ದರು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ವೃತ್ತಿ ಶಿಕ್ಷಣ ಹಾಗೂ ಪದವಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಹಾಗೂ ಸಂಘದಲ್ಲಿ ಅತಿಹೆಚ್ಚು ಡಿಪಾಸಿಟ್‌ ಮಾಡಿದದವರನ್ನು ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಮಹಂತೇಶ್, ನಿರ್ದೇಶಕರುಗಳಾದ ಎಸ್.ಬಿ.ಶಿವಕುಮಾರ್, ಆರ್.ಟಿ.ನಾಗರಾಜ್, ವಿ.ಮಂಜುನಾಥ್, ಸಿ.ಸಿದ್ದರಾಮಣ್ಣ, ಬಿ.ರತ್ನಮ್ಮ, ವಿ.ಮಲ್ಲಿಕಾರ್ಜುನಪ್ಪ, ಡಿ.ಎಸ್.ಮಹೇಶ್, ಸಿ.ಸಿದ್ದರಾಮಣ್ಣ, ಸಿದ್ದಗಂಗಯ್ಯ ವಿ.ನಿರ್ಮಲ, ಜಿ.ಎಸ್ ಸೋಮಶೇಖರ್, ಉಗ್ರನರಸಿಂಹಯ, ಎಂ.ರಂಗಪ್ಪ ಮತ್ತು ವ್ಯವಸ್ಥಾಪಕರಾದ ವಿ.ಪ್ರಸನ್ನಕುಮಾರ್, ಹಾಗೂ ಸಿಬ್ಬಂದಿ ವರ್ಗದವರಾದ ಜೆ ಸರ್ಪಬೂಷಣ, ಎಚ್.ಎಸ್ ಮಂಜುನಾಥ್, ಎಂ ಎಲ್ ಸುಧಾ, ವಿ ಎನ್ ಚಿತ್ತಯ್ಯ, ಎಸ್.ಚಂದ್ರಶೇಖರ್ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
    ಸಂಘದ ನಿರ್ದೇಶಕರಾದ ರತ್ನಮ್ಮ ಪ್ರಾರ್ಥಿಸಿದರು. ನಿರ್ದೇಶಕರಾದ ಎಸ್.ಬಿ.ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಜಮಾ ಖರ್ಚುನ್ನು ನಿರ್ದೇಶಕರಾದ ಎಂ.ರಂಗಪ್ಪ ಮಂಡಿಸಿದರು. ನಿರ್ದೇಶಕರಾದ ಆರ್.ಟಿ.ನಾರಾಜ್ ಲೆಕ್ಕ ಪರಿಶೋಧನಾ ವರದಿಯಲ್ಲಿನ ನ್ಯೂನತೆಗಳಿಗೆ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಸಂಘದ ಕಾನೂನು ಸಲಹೆಗಾರರಾದ ಎಚ್.ಪಿ.ಮಹಂತೇಶ್ ಸ್ವಾಗತಿಸಿದರು. ಸಂಘದ ಆಡಳಿತ ಮಂಡಳಿ ವರದಿಯನ್ನು ನಿರ್ದೇಶಕರರಾದ ಸಿದ್ದರಾಮ ಹಾಗೂ ಲಾಭಾಂಶ ವಿಲೇವಾರಿ ಬಗ್ಗೆ ನಿರ್ದೇಶಕರಾದ ವಿ.ಮಂಜುನಾಥ್ ವರದಿ ಮಂಡಿಸಿದರು. ನಿರ್ದೇಶಕರಾದ ಜಿ.ಎಸ್.ಸೋಮಶೇಖರ್ ಆಯ-ವ್ಯಯ ಮಂಡಿಸಿದರು. ಕೆ.ಮಹಂತೇಶ್ ವಂದಿಸಿದರು. ಸಂಘದ ಲೆಕ್ಕ ಪರಿಶೋಧಕರ ನೇಮಕದ ಬಗ್ಗೆ ನಿರ್ದೇಶಕರಾದ ಕೆ.ಸಿದ್ದಗಂಗಯ್ಯ ಮಂಡಿಸಿದರು, ನಿರ್ದೇಶಕರಾದ ವಿ.ನಿರ್ಮಲಾ ಮಹಾಸಭೆಯ ನೋಟಿಸ್‌ ಓದಿದರು.

    C.Siddaramanna Chitradurga Murugha Rajendra Bruhanmata Dr.Basava Kumara Swameeji Hiriyuru Veerashaiva Pathhina Sahakara Sangha
    Previous Articleಗ್ರಾಹಕ ಕೇಂದ್ರಿತ ಸೇವೆ, ಸುಸ್ಥಿರ ಬೆಳವಣಿಗೆಯತ್ತ ಎಂಸಿಸಿ ಬ್ಯಾಂಕ್‌ ಬದ್ಧತೆ
    Next Article ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಅಧಿಕಾರಾವಧಿ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆಗಸ್ಟ್‌ 6ಕ್ಕೆ ಮುಂದೂಡಿದ ಹೈಕೋರ್ಟ್

    Related Posts

    ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ

    October 1, 2026

    ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    October 1, 2026

    ಭಾರತ್ ಟ್ಯಾಕ್ಸಿ ಪ್ರಥಮ ವಾರ್ಷಿಕ ಮಹಾಸಭೆ

    October 1, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ

    October 1, 2026

    ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    October 1, 2026

    ಭಾರತ್ ಟ್ಯಾಕ್ಸಿ ಪ್ರಥಮ ವಾರ್ಷಿಕ ಮಹಾಸಭೆ

    October 1, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.