ಮಂಗಳೂರು: ಇಲ್ಲಿನ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾರತ ಸೇನೆಯ ಅಪ್ರತಿಮ ಯೋಧರ ಸಾಹಸ ಮತ್ತು ಬಲಿದಾನಗಳ ಗೌರವ ಸ್ಮರಣೆಯ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಜುಲೈ 25ರಂದು ಶನಿವಾರ ಸಂಜೆ 5.30ಕ್ಕೆ ಮಂಗಳಾದೇವಿಯ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ ಕರ್ನಲ್ ಎನ್.ಎಸ್. ಭಂಡಾರಿ ಕಾರ್ಗಿಲ್ ವಿಜಯಗಾಥೆ ಪ್ರಸ್ತುತಪಡಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಎಂ.ಎಸ್ ಗುರುರಾಜ್, ಉಪಾಧ್ಯಕ್ಷ ಉದಯ ಶಾಸ್ತ್ರಿ, ಸಿಇಒ ಚಿತ್ರಾ ಡಿಸೋಜ ಉಪಸ್ಥಿತರಿರಲಿದ್ದಾರೆ. ನಿವೃತ್ತ ಸೈನಿಕರ, ಗಣ್ಯರ, ದೇಶಭಕ್ತರ ಉಪಸ್ಥಿತಿಯಲ್ಲಿ ಅಮರ ಯೋಧರಿಗೆ ಪುಷ್ಪಾಂಜಲಿ, ಕಾರ್ಗಿಲ್ ಯುದ್ಧವೀರರಿಗೆ ಸನ್ಮಾನ ಹಾಗೂ ಕಾರ್ಗಿಲ್ ವಿಜಯದ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





