ನವದೆಹಲಿ: ದೇಶಾದ್ಯಂತ ಸಹಕಾರಿ ಕ್ಷೇತ್ರದ ವ್ಯಾಪ್ತಿ ಇನ್ನಷ್ಟು ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ ಸಹಕಾರಿ ವಲಯಕ್ಕೆ ಶೀಘ್ರವೇ ಸಹಕಾರಿ ವಿಮಾ ಕಂಪನಿಯನ್ನು ಆರಂಭಿಸಲಾಗುತ್ತದೆ ಎಂದು ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ ಘೋಷಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಸಹಕಾರ ಸಚಿವಾಲಯದ ಐದನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಸಚಿವಾಲಯದ ಸ್ಥಾಪನೆಯು ದೇಶದಲ್ಲಿ ಸಹಕಾರ ಚಳವಳಿಗೆ ಹೊಸ ಜೀವ ನೀಡಿದೆ ಎಂದಿದ್ದಾರೆ. ಸಹಕಾರ ತತ್ವದ ಆಧಾರದಲ್ಲಿ ಜನ್ಮ ತಳೆದಿರುವ ‘ಭಾರತ್ ಟ್ಯಾಕ್ಸಿ ಸೇವೆಯನ್ನು ಮುಂದಿನ ವರ್ಷಗಳಲ್ಲಿ 500 ನಗರಗಳಿಗೆ ವಿಸ್ತರಿಸಲಾಗುತ್ತದೆ. ದೇಶದಲ್ಲಿ ಅಂದಾಜು 8.5 ಲಕ್ಷ ಸಹಕಾರ ಸಂಘಗಳು ಇವೆ, 30 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ನಾವು ಸಹಕಾರ ವಲಯದಲ್ಲಿ ಆರಂಭಿಸಲಿರುವ ಜೀವ ವಿಮಾ ಕಂಪನಿಯು ವಿಮಾ ವಲಯದಲ್ಲಿ ಸಹಕಾರ ಸಂಘಗಳ ಬೆಳವಣಿಗೆಗೆ ನೆರವಾಗಲಿದೆ’ ಎಂದು ಅಮಿತ್ ಷಾ ಹೇಳಿದ್ದಾರೆ.
ದೇಶದಲ್ಲಿ ಈಗ 26 ಜೀವ ವಿಮಾ ಕಂಪನಿಗಳು ಇವೆ. ಸಹಕಾರ ಸಂಘಗಳು ಹೈನುಗಾರಿಕೆ, ಸಕ್ಕರೆ, ರಸಗೊಬ್ಬರ ಮತ್ತು ಬ್ಯಾಂಕಿಂಗ್ ವಹಿವಾಟು ಮಾತ್ರವೇ ಅಲ್ಲದೆ ಹೊಸದಾಗಿ ಹಲವು ವಲಯಗಳನ್ನು ಪ್ರವೇಶಿಸಿವೆ. ಕೃಷಿ ಸಾಲಗಳಲ್ಲಿ ಶೇ.25ರಷ್ಟು ಪಾಲು, ರಸಗೊಬ್ಬರ ವಿತರಣೆಯಲ್ಲಿ ಶೇ.35ರಷ್ಟು ಪಾಲು, ಸಕ್ಕರೆ ಉತ್ಪಾದನೆಯಲ್ಲಿ ಶೇ.31ರಷ್ಟು ಪಾಲನ್ನು ಸಹಕಾರ ಸಂಘಗಳು ಹೊಂದಿವೆ ಎಂದು ಅಮಿತ್ ಷಾ ತಿಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 25ಕ್ಕೂ ಹೆಚ್ಚು ಬಗೆಯ ವಹಿವಾಟುಗಳಲ್ಲಿ ತೊಡಗುವುದಕ್ಕೆ ಅವಕಾಶ ಕಲ್ಪಿಸುವ ಮಾದರಿ ಉಪನಿಯಮಗಳಿಗೆ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿವ. ಗುಜರಾತ್‌ನ ಆನಂದ್‌ನಲ್ಲಿ ‘ತ್ರಿಭುವನ ಸಹಕಾರ ವಿಶ್ವವಿದ್ಯಾಲಯ’ ಸ್ಥಾಪಿಸಿ, ಈ ವಲಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸಲಾಗುತ್ತದೆ ಎಂದು ಅಮಿತ್ ಷಾ ತಿಳಿಸಿದ್ದಾರೆ.
ಸಹಕಾರಿ ವಿಮಾ ಕಂಪನಿ
ಖಾಸಗಿ ಕಂಪನಿಗಳ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ವಿಮೆ ಸೇವೆ ಒದಗಿಸುವ ಯೋಜನೆ. ಹೊಸ ಸಹಕಾರಿ ವಿಮೆ ಸಂಸ್ಥೆಯು ಗ್ರಾಮೀಣ ಮತ್ತು ಸಾಮಾನ್ಯ ಜನರಿಗೆ ವಿಮಾ ಸೌಲಭ್ಯಗಳನ್ನು ಸುಲಭವಾಗಿ ತಲುಪಿಸಲು ಹಾಗೂ ಸಹಕಾರಿ ರಂಗ ಬಲಗೊಳ್ಳಲು ನೆರವಾಗಲಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ವೃತ್ತಿಪರರನ್ನು ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಿಂದ ನೇಮಕಾತಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದು ದಕ್ಷತೆ, ಪಾರದರ್ಶಕತೆ ಹೆಚ್ಚಲಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com





