Close Menu
    Top News

    ವಿಟ್ಲ ಗ್ರಾಮೀಣ ಸಹಕಾರಿ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

    August 17, 2026

    ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯ

    August 17, 2026

    ದಕ್ಷಿಣ ಕನ್ನಡ ಹಾಲು ಒಕ್ಕೂಟ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪ ಬಿಡುಗಡೆ

    August 14, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ
    News

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    adminBy adminJune 30, 2026

    ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆಯು ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.

    https://chat.whatsapp.com/FCEnlTkAKCC0MGPhXtX4i4
    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಹೆಚ್‌.ಜಗನ್ನಾಥ ಸಾಲ್ಯಾನ್‌ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪುತ್ತೂರು ಶಾಸಕರಾದ ಅಶೋಕ್‌ ಕುಮಾರ್‌ ರೈ ಶಾಖಾ ಕಚೇರಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಸಂಜೀವ ಮಠಂದೂರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಎಚ್‌.ಎನ್‌ ರಮೇಶ್‌ ಶಾಖೆಯ ಗಣಕೀಕರಣ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪಸಿಂಹ ನಾಯಕ್‌ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಕೆ.ಅಬ್ದುಲ್‌ ರಹಿಮಾನ್‌, ಸಹಕಾರ ಭಾರತಿ ದ.ಕ. ಜಿಲ್ಲಾ ಉಪಾಧ್ಯಕ್ಷ ಹಾಗೂ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಕೆ.ವಿ ಪ್ರಸಾದ್‌, ಉಪ್ಪಿನಂಗಡಿ ಗಾಂಧಿ ಪಾರ್ಕ್‌ ರಾಮಗೋಪಾಲ ಕಾಂಪ್ಲೆಕ್ಸ್‌ ಕಟ್ಟಡ ಮಾಲೀಕರಾದ ಕೆ.ರಾಜೇಶ್‌ ನಾಯಕ್‌ ಭಾಗವಹಿಸಲಿದ್ದಾರೆ. ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮನೋರಂಜನ್‌ ಕೆ.ಆರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್‌ ಮತ್ತು ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
    ವಿಟ್ಲ ಗ್ರಾಮೀಣ ಸಹಕಾರಿ ಸಂಘವು 1955ರಲ್ಲಿ ಮದ್ರಾಸ್‌ ಸರಕಾರದ ಯೋಜನೆಯಂತೆ ಉಪನಿಬಂಧಕರ ಕಚೇರಿ ಕಾಸರಗೋಡು ಇಲ್ಲಿ “ವಿಟ್ಲ ಕೋ ಆಪರೇಟಿವ್ ರೂರಲ್ ಬ್ಯಾಂಕ್ ನಿಯಮಿತ” ಎಂದು ನೋಂದಾಯಿಸಿ ಪ್ರಾರಂಭವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿ ಇಂದು ವಿಟ್ಲ ಗ್ರಾಮೀಣ ಸಹಕಾರಿ ಸಂಘ ಎಂಬ ಹೆಸರಿನಲ್ಲಿ ಸುಮಾರು 9000ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿ, ಕಾರ್ಯಾಚರಿಸುತ್ತಿದೆ. ವಿಟ್ಲದಲ್ಲಿ ಪ್ರಧಾನ ಕಚೇರಿ ಹೊಂದಿದು, ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡು, ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದ್ದು, ಸಂಘವು ಹಲವಾರು ವರ್ಷಗಳಿಂದ ಉತ್ತಮ ಲಾಭ ಗಳಿಸುತ್ತ ಬರುತ್ತಿದ್ದು, ಸದಸ್ಯ ಗ್ರಾಹಕರಿಗೆ ಶೇಕಡಾ 22 ಡಿವಿಡೆಂಡ್ ವಿತರಿಸಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದುಕೊಂಡಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುತ್ತದೆ. ಉಪ್ಪಿನಂಗಡಿ ಪರಿಸರದ ಅನೇಕ ಸದಸ್ಯ ಗ್ರಾಹಕರ ಅಪೇಕ್ಷೆಯಂತೆ ಸಂಘದ ಐದನೇ ಶಾಖೆಯು ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಶನಿವಾರ ಶುಭಾರಂಭಗೊಳ್ಳಲಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    H Jagannatha Salyan Vitla Shree Ramgopal Complex Uppinangadi Gandhi Park Vitla Co Operative Rural Bank Vitla Grameena Sahakari Sangha
    Previous Articleಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರದ ಸಿಬ್ಬಂದಿ ತರಬೇತಿ ಕಾರ್ಯಾಗಾರ
    Next Article ವಿಶೇಷ ಸಹಕಾರ ಸಪ್ತಾಹ: ಗಿಡ ನೆಟ್ಟ ಮೈಸೂರು ಲಕ್ಷ್ಮೀಪುರಂನ ವಿದ್ಯಾರ್ಥಿಗಳು

    Related Posts

    ವಿಟ್ಲ ಗ್ರಾಮೀಣ ಸಹಕಾರಿ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

    August 17, 2026

    ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯ

    August 17, 2026

    ದಕ್ಷಿಣ ಕನ್ನಡ ಹಾಲು ಒಕ್ಕೂಟ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪ ಬಿಡುಗಡೆ

    August 14, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ವಿಟ್ಲ ಗ್ರಾಮೀಣ ಸಹಕಾರಿ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

    August 17, 2026

    ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯ

    August 17, 2026

    ದಕ್ಷಿಣ ಕನ್ನಡ ಹಾಲು ಒಕ್ಕೂಟ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪ ಬಿಡುಗಡೆ

    August 14, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.