ಲಕ್ನೋ ಮಹಾಸಮ್ಮೇಳನದಲ್ಲಿ ದೇಶದಲ್ಲೇ ಅತ್ಯಧಿಕ ಪ್ರಶಸ್ತಿ ಪಡೆದ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆ: ತಂತ್ರಜ್ಞಾನ ಕ್ರಾಂತಿ ಹಾಗೂ ಆಡಳಿತಾತ್ಮಕ ಶ್ರೇಷ್ಠತೆಗೆ ಸಂದ ಜಾಗತಿಕ ಮಟ್ಟದ ಮಾನ್ಯತೆ
ಪುತ್ತೂರು: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪ್ರತಿಷ್ಠಿತ ರಾಷ್ಟ್ರೀಯ ಮಹಾಸಮ್ಮೇಳನದಲ್ಲಿ (National Conference of Urban Co-operative Banks) ಕರ್ನಾಟಕದ ಹೆಮ್ಮೆಯ ಬ್ಯಾಂಕಿಂಗ್ ಸಂಸ್ಥೆಯಾದ ‘ದಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್’ ಬರೋಬ್ಬರಿ ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶದ ಸಹಕಾರಿ ರಂಗದಲ್ಲಿ ಸುವರ್ಣ ಅಕ್ಷರಗಳ ಹೊಸ ದಾಖಲೆ ಬರೆದಿದೆ.
https://chat.whatsapp.com/FCEnlTkAKCC0MGPhXtX4i4
ದೇಶದ ಎಲ್ಲಾ ರಾಜ್ಯಗಳ ನೂರಾರು ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಭಾಗವಹಿಸಿದ್ದ ಈ ಉನ್ನತ ಮಟ್ಟದ ರಾಷ್ಟ್ರೀಯ ಸಮ್ಮೇಳನದಲ್ಲಿ, ಅತ್ಯಧಿಕ 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದೇಶದ ಏಕೈಕ ಬ್ಯಾಂಕ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಪಾತ್ರವಾಗಿದೆ. ಈ ಅಪೂರ್ವ ಸಾಧನೆಯ ಮೂಲಕ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಇಡೀ ದೇಶದ ಗಮನ ಸೆಳೆದಿದೆ.
ಬ್ಯಾಂಕ್ ಮುಡಿಗೇರಿಸಿಕೊಂಡ ಪಂಚ ರತ್ನ ಪ್ರಶಸ್ತಿಗಳ ವಿವರ:
ಅತ್ಯುತ್ತಮ ಅಧ್ಯಕ್ಷ (Best President): ಎನ್. ಕಿಶೋರ್ ಕೊಳತ್ತಾಯ
ಅತ್ಯುತ್ತಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ (Best CEO):ಬಿ. ಶೇಖರ್ ಶೆಟ್ಟಿ
ಅತ್ಯುತ್ತಮ ನಿರ್ದೇಶಕ (Best Director): ಚಂದ್ರಶೇಖರ್ ರಾವ್ ಬಪ್ಪಳಿಗೆ
ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಉಪಕ್ರಮ (Best Mobile Banking initiative)
ಅತ್ಯುತ್ತಮ ಸಿಬಿಎಸ್ ಅನುಷ್ಠಾನ (Best CBS implementation)
ಈ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು( ಭಾರತ್ ರತ್ನ ಸಹಕಾರಿತ್ ಸಮ್ಮಾನ) ಅಸ್ಸಾಂ ರಾಜ್ಯದ ಶಾಸಕ ಹಾಗೂ ಅಸ್ಸಾಂ ರಾಜ್ಯದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಶ್ವಜಿತ್ ಫುಕಾನ್ ವಿತರಿಸಿದರು. ಭಾರತ್ ಸಮ್ಮಾನ್ ಸಮಿತಿಯ ಮುಖ್ಯಸ್ಥರಾದ ಡಾ|| ಅನೂಪ್ ಗುಪ್ತ ಮತ್ತು ಅಭಿಷೇಕ ಶರ್ಮ ಉಪಸ್ಥಿತರಿದ್ದರು.

ರಾಷ್ಟ್ರೀಯ ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರ ಉಪಸ್ಥಿತಿ
ಲಕ್ನೋದಲ್ಲಿ ನಡೆದ ಪ್ರಶಸ್ತಿ ವಿತರಣೆಯ ಅದ್ಧೂರಿ ಸಮ್ಮೇಳನದಲ್ಲಿ ಪ್ರಸಸ್ತಿ ಪುರಸ್ಕೃತ ದಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತಾಯ, ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಶೇಖರ್ ಶೆಟ್ಟಿ, ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರೊಂದಿಗೆ ಬ್ಯಾಂಕಿನ ಉಪಾಧ್ಯಕ್ಷರಾದ ಕೆ.ಶ್ರೀಧರ್ ಗೌಡ ಹಾಗೂ ನಿರ್ದೇಶಕರುಗಳಾದ ರಾಜು ಶೆಟ್ಟಿ, ಶ್ರೀಧರ್ ಪಟ್ಲ, ಮಲ್ಲೇಶ್ ಕುಮಾರ್, ಹರೀಶ್ ಬಿಜತ್ರೆ, ಗಣೇಶ್ ಕೌಕ್ರಾಡಿ ಮತ್ತು ಕೆ.ವಿಶ್ವಾಸ್ ಶೆಣೈ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.
ಬ್ಯಾಂಕಿನ ಈ ದಿಗ್ವಿಜಯಕ್ಕೆ ನಿರ್ದೇಶಕರುಗಳಾದ ಕಿರಣ್ ಕುಮಾರ ರೈ, ರಾಮಚಂದ್ರ ಕಾಮತ್, ಸುಜೀಂದ್ರ ಪ್ರಭು, ಸೀಮಾ ನಾಗರಾಜ್, ವೀಣಾ ಹಾಗೂ ಬ್ಯಾಂಕಿನ ಪುತ್ತೂರು ಶಾಖಾಧಿಕಾರಿ ಚಿದಂಬರ, ವಿಟ್ಲ ಶಾಖಾಧಿಕಾರಿ ಜ್ಯೋತಿ ಎನ್.ಎಸ್. ಮತ್ತು ಬ್ಯಾಂಕಿನ ಸಮಸ್ತ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದು, ಬ್ಯಾಂಕಿನ ಈ ಮಹತ್ ಸಾಧನೆಗೆ ಕಾರಣರಾದ ಬ್ಯಾಂಕಿನ ಸರ್ವ ಸದಸ್ಯರು ಹಾಗೂ ಗ್ರಾಹಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ
ಗ್ರಾಹಕರ ವಿಶ್ವಾಸ ಮತ್ತು ಸಿಬ್ಬಂದಿ ಶ್ರಮಕ್ಕೆ ಸಂದ ಜಯ
ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತಾಯ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿ ಜಂಟಿ ಪತ್ರಿಕಾ ಹೇಳಿಕೆ ನೀಡಿ, ಬ್ಯಾಂಕು ಕಳೆದ ಮೂರು ವರ್ಷಗಳಿಂದ ವ್ಯವಹಾರದಲ್ಲಿ ದಾಖಲೆಯ ಪ್ರಗತಿ ಸಾಧಿಸಿದ್ದಲ್ಲದೆ, ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವುದೇ ಈ ಅದ್ವಿತೀಯ ರಾಷ್ಟ್ರೀಯ ಪ್ರಶಸ್ತಿಗೆ ಕಾರಣ. ಬ್ಯಾಂಕಿನ ಗೌರವಾನ್ವಿತ ಸದಸ್ಯರು ಮತ್ತು ಗ್ರಾಹಕರು ನೀಡಿದ ನಿರಂತರ ಸಹಕಾರ, ಪ್ರೋತ್ಸಾಹ ಹಾಗೂ ಸಿಬ್ಬಂದಿ ವರ್ಗದ ಅಹರ್ನಿಶಿ ಶ್ರಮವೇ ಈ ಸಾಧನೆಯ ಹಿಂದಿನ ಶಕ್ತಿ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಆಡಳಿತ ಮಂಡಳಿ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

