ಮೂಡುಬಿದಿರೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 35ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಐ. ತಾರಾನಾಥ ಪೂಜಾರಿ ಅಭಿಪ್ರಾಯ
ಮೂಡುಬಿದಿರೆ: ಆರ್ಥಿಕ ಸೇವೆಗಳ ಜೊತೆಗೆ ಸಾಮಾಜಿಕ ಬದ್ಧತೆ ಹೊಂದಿರುವ ಯೋಜನೆಗಳನ್ನು ಜಾರಿಗೆ ತರುವುದೇ ಆತ್ಮಶಕ್ತಿ ಸಹಕಾರಿ ಸಂಘದ ಶಕ್ತಿ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಐ. ತಾರಾನಾಥ ಪೂಜಾರಿ ಹೇಳಿದರು.
ಮೂಡುಬಿದಿರೆ ಅಂಚೆ ಕಚೇರಿ ಎದುರಿನ ರಾಮಯ್ಯ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಆತ್ಮಶಕ್ತಿ ಸಹಕಾರಿ ಸಂಘದ 35ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ 100ನೇ ಶಾಖೆ ತಲುಪಲಿ ಎಂದು ಆಶಯ ವ್ಯಕ್ತಪಡಿಸಿದರು. ವ್ಯವಹಾರಗಳಲ್ಲಿ ಜನರು ಅನವಶ್ಯಕ ವ್ಯಾಜ್ಯಗಳಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಖೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದರು.
ವಿಶೇಷ ಆಫರ್‌ಗಳು: ಗ್ರಾಹಕರಿಗೆ 500 ದಿನಗಳ ಠೇವಣಿಗಳಿಗೆ ಶೇ.10 ಬಡ್ಡಿ ದರ, 1000 ದಿನಗಳ ಠೇವಣಿಗಳಿಗೆ ಶೇ.10.50 ಬಡ್ಡಿ, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ ರೂ.12,000 ಸದಸ್ಯರಿಗೆ ಸೇವಾ ಶುಲ್ಕವಿಲ್ಲದೆ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಲಭ್ಯ ಸಂಘದ ಎಲ್ಲಾ ಶಾಖೆಗಳಲ್ಲಿ ಕಚೇರಿ ವೇಳೆಯಲ್ಲಿ ಇ-ಮುದ್ರಾಂಕ ಸೇವೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳು ವಿವಿಧ ಜನರಲ್ ಇನ್ಸುರೆನ್ಸ್ ಸೇವೆಗಳು ಗ್ರಾಹಕರಿಗೆ ಸುಲಭ ಹಾಗೂ ವೇಗದ ಸೇವೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.





ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಐ. ತಾರಾನಾಥ ಪೂಜಾರಿ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100 ಅಂಕ ಗಳಿಸಿದ ದಿಶಾ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿ ಶುಭ ಹಾರೈಸಿದರು.
ವಿವಿಧ ಯೋಜನೆಗಳಿಗೆ ಚಾಲನೆ
ನಿರಖು ಠೇವಣಿ ಯೋಜನೆಗೆ ಭಾಸ್ಕರ ಎಸ್. ಕೋಟ್ಯಾನ್, ಭದ್ರತಾ ಕೋಶಕ್ಕೆ ಸುರೇಶ್ ಕೆ. ಪೂಜಾರಿ, ಬ್ಯಾಂಕಿಂಗ್ ಸೇವೆಗೆ ಸೀತಾರಾಮ ಆಚಾರ್ಯ ಚಾಲನೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ಉಪಾಧ್ಯಕ್ಷ ನೇಮಿರಾಜ ಪಿ., ನಿರ್ದೇಶಕರಾದ ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ ಎನ್., ರಾಮನಾಥ ಸನಿಲ್, ಮುದ್ದು ಮೂಡುಬೆಳ್ಳೆ. ದಿವಾಕರ ಬಿ.ಪಿ., ಗೋಪಾಲ್ ಎನ್.. ಚಂದ್ರಾವತಿ. ಉಮಾವತಿ ಹಾಗೂ ಶಾಖಾ ಪ್ರಬಂಧಕಿ ರವಿಕಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ಸ್ವಾಗತಿಸಿ, ಧನಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ವಿಶ್ವನಾಥ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

