Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ದಿ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿಗೆ 11.80 ಕೋಟಿ ರೂ. ಲಾಭ
    News

    ದಿ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿಗೆ 11.80 ಕೋಟಿ ರೂ. ಲಾಭ

    adminBy adminApril 18, 2026
    Oplus_131072

    ಮಂಗಳೂರು: ದಿ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ ಗರಿಷ್ಠ 11.80 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಎ.ಎಸ್. ವೆಂಕಟೇಶ್ ತಿಳಿಸಿದ್ದಾರೆ.

    https://chat.whatsapp.com/FCEnlTkAKCC0MGPhXtX4i4

    ಮಾರ್ಚ್‌ ಅಂತ್ಯಕ್ಕೆ ಸೊಸೈಟಿಯು ಒಟ್ಟು 15.90 ಕೋಟಿ ರೂ. ಪಾಲು ಬಂಡವಾಳ, 274.55 ಕೋಟಿ ರೂ. ಠೇವಣಿ, 42.02 ಕೋಟಿ ರೂ. ನಿಧಿ, 332.47 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ ಪ್ರಗತಿ ಪಥದಲ್ಲಿ ಸಾಗುತ್ತಿದೆ.
    ಸಂಘದ ಒಟ್ಟು 15 ಶಾಖೆಗಳಲ್ಲಿ 5 ಶಾಖೆಗಳು ಸ್ವಂತ ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರಿಗೆ ಉತ್ತಮ, ಉತ್ಕೃಷ್ಟ ಮಟ್ಟದ ತ್ವರಿತ ಸೇವೆ ನೀಡುವ ಉದ್ದೇಶದಿಂದ ಕೋರ್‌ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಎಲ್ಲ ಶಾಖೆಗಳಲ್ಲಿಯೂ ನೆಫ್ಟ್/ಆರ್‌ಟಿಜಿಎಸ್ ಸೌಲಭ್ಯ ಇದೆ. ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ಅಲ್ಲದೆ ಸಂಘವು 2024-25ನೇ ಸಾಲಿನಲ್ಲಿ ಶೇ.25 ಡಿವಿಡೆಂಡ್ ಘೋಷಿಸಿದೆ. ಲೆಕ್ಕಪರಿಶೋಧನೆಯಲ್ಲಿ ಕಳೆದ 30 ವರ್ಷಗಳಿಂದ ಎ ವರ್ಗ ಮಾನ್ಯತೆ ಪಡೆದಿದೆ. ಪ್ರಸ್ತುತ ಸಹಕಾರ ವರ್ಷದಲ್ಲಿ ಸಂಘದ 16ನೇ ಶಾಖೆಯನ್ನು ಮಂಗಳೂರಿನ ದೇರೆಬೈಲ್-ಕೊಂಚಾಡಿಯಲ್ಲಿ ತೆರೆಯಲು ಉದ್ದೇಶಿಸಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಸೊಸೈಟಿಯ ಅಸೈಗೋಳಿ ಶಾಖೆಯು ಹೊಸ ಸುಸಜ್ಜಿತ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಗೊಳ್ಳಲಿದೆ ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    A S Venkatesh Cooperative Cooperative Department Cooperative Registrar The Karavali Credit Cooperative Society
    Previous Articleಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿ.ಎನ್ ಶಂಕರ ಪೂಜಾರಿ ಬ್ರಹ್ಮಾವರ, ಉಪಾಧ್ಯಕ್ಷರಾಗಿ ರಾಜು ಪೂಜಾರಿ ಉಪ್ಪೂರು ಅವಿರೋಧ ಆಯ್ಕೆ
    Next Article ಸಾಮಾಜಿಕ ಬದ್ಧತೆಯ ಯೋಜನೆಗಳನ್ನು ಜಾರಿಗೆ ತರುವುದೇ ಆತ್ಮಶಕ್ತಿ ಸಹಕಾರಿ ಸಂಘದ ಶಕ್ತಿ

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.