ಮಂಗಳೂರು: ಶ್ರೀ ಭಗವತಿ ಸಹಕಾರ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ (2025-26) ಅತ್ಯುತ್ತಮ ವ್ಯವಹಾರ ದಾಖಲಿಸಿದ್ದು, ಬ್ಯಾಂಕಿನ ಚರಿತ್ರೆಯಲ್ಲೇ ಅತ್ಯಧಿಕ ಲಾಭ 1,35,92,000 ರೂ. ಗಳಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.85ರಷ್ಟು ಹೆಚ್ಚಾಗಿದೆ.
https://chat.whatsapp.com/FCEnlTkAKCC0MGPhXtX4i4
ಶ್ರೀ ಭಗವತಿ ಸಹಕಾರ ಬ್ಯಾಂಕ್ ಮಂಗಳೂರು, ತೊಕ್ಕೊಟ್ಟು, ಬಿ.ಸಿ.ರೋಡ್, ಕೈಕಂಬ, ವಿಟ್ಲ ಮತ್ತು ಪುತ್ತೂರುಗಳಲ್ಲಿ ಎಂಟು ಶಾಖೆಗಳನ್ನು ಹೊಂದಿದ್ದು, ಜಪ್ಪು ಮೋರ್ಗನ್ಸ್ ಗೇಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಬ್ಯಾಂಕಿನ ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು ಠೇವಣಿ 12,536.95 ಲಕ್ಷ ರೂ. ಆಗಿದ್ದು, ಹೊರಬಾಕಿ ಸಾಲ 10,545.87 ಲಕ್ಷ ರೂ. ಆಗಿರುತ್ತದೆ. ಒಟ್ಟು ವ್ಯವಹಾರವು 23,082.82 ಲಕ್ಷ ರೂ. ಆಗಿದೆ. ಬ್ಯಾಂಕಿನಲ್ಲಿ ಒಟ್ಟು 22,317 ಸದಸ್ಯರಿದ್ದು ಪಾಲು ಬಂಡವಾಳ ರೂ. 472.89 ಲಕ್ಷ ರೂ. ಇದ್ದು, 2,934.72 ಲಕ್ಷ ರೂ.ನಿಧಿಗಳಾಗಿ ಹಾಗೂ 13,589.16 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿರುತ್ತದೆ. ಬ್ಯಾಂಕಿನಲ್ಲಿ ಒಟ್ಟು 39 ಮಂದಿ ನೌಕರರಿದ್ದು, 12 ಮಂದಿ ಆಡಳಿತ ನಿರ್ದೇಶಕರು, 4 ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು, 10 ನಿತ್ಯನಿಧಿ ಏಜೆಂಟರು, 8 ಶರಾಪರು, 7 ಕಾನೂನು ತಜ್ಞರು, ಇಬ್ಬರು ಮೌಲ್ಯಮಾಪಕರು ಇದ್ದು ಬ್ಯಾಂಕಿನ ಬೆಳವಣಿಗೆಗೆ ಸಹಕರಿಸಿರುತ್ತಾರೆ.
ಬ್ಯಾಂಕ್‌ನ ಮಹಾಸಭೆಯ ಸಂದರ್ಭ, ಬ್ಯಾಂಕಿನ ಉತ್ತಮ ಗ್ರಾಹಕರನ್ನು ಸಮ್ಮಾನಿಸಲಾಗುತ್ತದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಉತ್ತಮ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಗುತ್ತದೆ ಹಾಗೂ ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿರುವ ಶಾಖೆಗಳನ್ನು ಸಮ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಬ್ಯಾಂಕ್‌ನ ಈ ಅಭಿವೃದ್ಧಿಗೆ ಕಾರಣಕರ್ತರಾದ ಬ್ಯಾಂಕ್ ನ ಎಲ್ಲ ಸಿಬಂದಿ, ಶಾಖಾಧಿಕಾರಿಗಳು, ಪ್ರಧಾನ ವ್ಯವಸ್ಥಾಪಕರು, ಎಲ್ಲ ಆಡಳಿತ ಮಂಡಳಿಯ ನಿರ್ದೇಶಕರು, ಬ್ಯಾಂಕ್‌ನ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತು ಬ್ಯಾಂಕ್‌ನ ಸದಸ್ಯರನ್ನು ಬ್ಯಾಂಕ್‌ನ ಅಧ್ಯಕ್ಷ ಬಿ.ಎಂ. ಮಾಧವ ಮತ್ತು ಮತ್ತು ಬ್ಯಾಂಕಿನ ಉಪಾಧ್ಯಕ್ಷರಾದ ದೇವದಾಸ್ ಕೊಲ್ಯ ಅವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


