Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀಶಾ ಸೌಹಾರ್ದ ಸೊಸೈಟಿ 2.16 ಕೋಟಿ ರೂ. ನಿವ್ವಳ ಲಾಭ
    News

    ಶ್ರೀಶಾ ಸೌಹಾರ್ದ ಸೊಸೈಟಿ 2.16 ಕೋಟಿ ರೂ. ನಿವ್ವಳ ಲಾಭ

    adminBy adminApril 4, 2026

    ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು 2025-26ನೇ ಆರ್ಥಿಕ ವರ್ಷದಲ್ಲಿ 2.16 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸೊಸೈಟಿಯ ಎಲ್ಲ ವಿಭಾಗಗಳಲ್ಲೂ ಅದ್ವಿತೀಯ ಸಾಧನೆ ಮಾಡಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ.ಎಸ್ ಗುರುರಾಜ್ ತಿಳುಸಿದ್ದಾರೆ.

    https://chat.whatsapp.com/FCEnlTkAKCC0MGPhXtX4i4

    ಬುಧವಾರ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನ lಡೆದ ಅವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಶಾ ಸೊಸೈಟಿ ಆರಂಭವಾಗಿ ಕೇವಲ ಆರು ವರ್ಷಗಳಷ್ಟೇ ಆಗಿದ್ದರೂ ಸಾಧನೆಯಲ್ಲಿ ಬಹುದೂರ ಕ್ರಮಿಸಿದೆ. ಈ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹದಲ್ಲಿ ಶೇ.30ರಷ್ಟು ಏರಿಕೆಯೊಂದಿಗೆ 54.30 ಕೋಟಿ ರೂ., ಸಾಲ ವಿತರಣೆಯಲ್ಲಿ ಶೇ.25ರಷ್ಟು ಏರಿಕೆಯೊಂದಿಗೆ 44.88 ಕೋಟಿ ರೂ. ತಲುಪಿರುವುದು ವಿಶೇಷ. ಸೊಸೈಟಿಯು ಶೇ.98 ವಸೂಲಾತಿಯೊಂದಿಗೆ ಹಾಗೂ ಶೇ.27 ಏರಿಕೆಯ ನಿವ್ವಳ ಲಾಭ 2.16 ಕೋಟಿ ರೂ. ಗಳಿಸಿದ್ದು ಇದಕ್ಕೆ ಇದರ ಶಿಸ್ತುಬದ್ಧ ಆಡಳಿತ ಹಾಗೂ ಸಿಬ್ಬಂದಿ ವರ್ಗದ ಶ್ರಮವೇ ಕಾರಣ ಎಂದು ಹೇಳಿದರು.
    ಶ್ರೀಶಾ ಸೊಸೈಟಿಯು ಐದು ಸುಸಜ್ಜಿತ ಶಾಖೆಗಳನ್ನು ಹೊಂದಿದ್ದು, ಎಲ್ಲವೂ ಸಂಪೂರ್ಣ ಗಣಕೀಕೃತವಾಗಿವೆ. ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ತ್ವರಿತಗತಿಯ ಸಾಲ ವಿತರಿಸಲಾಗುತ್ತಿದೆ. ಈ ವರ್ಷ ಸೊಸೈಟಿಯು ಪ್ರತಿ ಷೇರಿಗೆ 2,740 ರೂ. ಲಾಭ ಗಳಿಸಿದೆm ಠೇವಣಿ ಹಾಗೂ ನಿವ್ವಳ ಲಾಭದ ಅನುಪಾತ 1 : 4 ಎಂದರೆ ಪ್ರತಿ ಒಂದು ಕೋಟಿ ಠೇವಣಿಗೆ 4 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿದೆ. ಷೇರುದಾರರಿಗೆ ಕಳೆದ ಮೂರು ವರ್ಷಗಳಿಂದ ಪ್ರತಿವರ್ಷವೂ ಗರಿಷ್ಠ ನೀಡಬಹುದಾದ ಶೇ.25 ಡಿವಿಡೆಂಡ್ ನೀಡುತ್ತಿದೆ. ಗಳಿಸಿದ ಲಾಭದ ಒಂದು ದೊಡ್ಡ ಪಾಲನ್ನು ಆರೋಗ್ಯ, ಶಿಕ್ಷಣ ಮತ್ತು ಸಾಹಿತ್ಯ ಪ್ರಚಾರ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ. ಸೊಸೈಟಿಯು ಲೆಕ್ಕ ಪರಿಶೋಧಕರಿಂದ ನಿರಂತರವಾಗಿ ‘ಎ’ ಗ್ರೇಡ್ ಮಾನ್ಯತೆ ಪಡೆಯುತ್ತಿದೆ ಎಂದು ಗುರುರಾಜ್ ತಿಳಿಸಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Co Operative ministry Cooperative Cooperative Department M S Gururaj Shreesha Souharda Co Operative Society
    Previous Articleಗಂಗೊಳ್ಳಿ ಟೌನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಸಾರ್ವಕಾಲಿಕ ಸಾಧನೆ
    Next Article ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ದಾಖಲೆಯ 483 ಕೋಟಿ ರೂಪಾಯಿ ವ್ಯವಹಾರ

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.