ಬಂಟ್ವಾಳ: ಬಿ.ಸಿ.ರೋಡ್‌ನ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಮಾರ್ಚ್ 6ರಂದು ಬಿ.ಸಿ.ರೋಡಿನ ವಿವೇಕನಗರದ ಶಕ್ತಿ ಕಾಂಪೌಂಡ್‌ನಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಬಾಲಕೃಷ್ಣ ಪ್ರಭು ಮತ್ತು ಜಯಲಕ್ಷ್ಮಿ ಪ್ರಭು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಶ್ರೀ ದೇವಿ ನೃತ್ಯಾರಾಧನಾ ಕಲಾಕೇಂದ್ರ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ರೋಹಿಣಿ ಉದಯ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಬಂಟ್ವಾಳ ಇದರ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮತ್ತು ಅಪೂರ್ವ ಜ್ಯುವೆಲ್ಲರ್ಸ್ ಬಿ.ಸಿ.ರೋಡ್ ಇದರ ಮಾಲೀಕರಾದ ಸುನೀಲ್ ಬಿ. ಭಾಗವಹಿಸಿದ್ದರು.
ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ವೆಂಕಟೇಶ್ ಭಟ್ ಪ್ರಾಸ್ತಾವಿಕ ಮಾತನಾಡಿ, ಒಂದು ವರ್ಷದಲ್ಲಿ ಸಹಕಾರಿಯ ಅಭಿವೃದ್ಧಿಯ ಬಗ್ಗೆ ವಿವರಿಸಿದರು. ಒಂದು ವರ್ಷದಲ್ಲಿ ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಜಯಾನಂದ ಆಚಾರ್ಯ, ಪರಮೇಶ್ವರ ಮೊಯ್ಲಿ, ಪ್ರಜ್ವಲ್ ಪ್ರಸಾದ್, ಜಯಲಕ್ಷ್ಮಿ , ಬಿಂದು ಕುಡ್ವ, ಅನಿತಾ ನಾಯಕ್, ದಿವ್ಯಾ ಸಂಜಯ್, ಶ್ರದ್ಧಾ ಕಲ್ಲಡ್ಕ, ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿದರು, ಅನಿತಾ ನಾಯಕ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


