ಬಂಟ್ವಾಳ: ಮೆದುಳಿನ ರಕ್ತಸ್ರಾವದಿಂದ ಕೋಮಾದ ಸ್ಥಿತಿಯಲ್ಲಿ ಇದ್ದ ತನ್ನ ಅವಿವಾಹಿತ ಮಗಳ ಅಂಗಾಂಗಗಳಾದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್ ಹಾಗೂ ಕಣ್ಣುಗಳನ್ನು ದಾನ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಮಮತಾ ಶೆಟ್ಟಿಯವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ಮಂಗಳವಾರ ಸಂಘದ ಸಭಾಂಗಣದಲ್ಲಿ ಗೌರವಿಸಿ ಆರ್ಥಿಕ ನೆರವನ್ನು ನೀಡಲಾಯಿತು.
https://chat.whatsapp.com/FCEnlTkAKCC0MGPhXtX4i4
ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇತರರ ಜೀವಗಳಿಗೆ ಜೀವದಾನ ನೀಡಿದ ಸಾರ್ಥಕತೆಯ, ತಾಯಿ ಹೃದಯದ ಶ್ರೀಮಂತಿಕೆಯ ಮಮತಾ ಶೆಟ್ಟಿಯವರ ಧೈರ್ಯದ ದಿಟ್ಟ ನಿರ್ಧಾರವು ಇತರರಿಗೆ ಮಾದರಿಯಾಗಿದೆ. ಇದು ಪ್ರೇರಣಾದಾಯಿ ನಡೆಯಾಗಿದ್ದು, ಇತರರಿಗೆ ಅನುಕರಣೀಯವೂ ಹೌದು. ಈ ಹೃದಯ ವೈಶಾಲ್ಯತೆಯನ್ನು ಗೌರವಿಸಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮಮತಾ ಶೆಟ್ಟಿಯವರನ್ನು ಗೌರವಿಸಿದೆ. ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಉಪಾಧ್ಯಕ್ಷ ಸಂದೇಶ ಶೆಟ್ಟಿ, ನಿರ್ದೇಶಕರಾದ ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ವೀರಪ್ಪ ಪರವ, ಜಾರಪ್ಪ ನಾಯ್ಕ, ರಾಜೇಶ್ ಶೆಟ್ಟಿ, ನವೀನ ಹೆಗ್ಡೆ, ಮಂದಾರತಿ ಶೆಟ್ಟಿ, ಪುಷ್ಪಲತಾ ಎಸ್. ಆರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ಮಮತಾ ಶೆಟ್ಟಿಯವರ ಸಹೋದರ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

