ಬೆಳ್ತಂಗಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಪ್ರಗತಿ ಕುರಿತ ಅಧ್ಯಯನಕ್ಕಾಗಿ ನಬಾರ್ಡ್ ಅಧಿಕಾರಿಗಳ ತಂಡ ಆಗಮಿಸಿ ವಿವಿಧ ಕಾರ್ಯಚಟುವಟಿಕೆಗಳ ಮಾಹಿತಿ ಪಡೆಯಿತು. ದೇಶದ ವಿವಿಧ ರಾಜ್ಯಗಳ 45 ಮಂದಿ ಸದಸ್ಯರ ತಂಡವು ಮಂಗಳವಾರ ಬಂಗಾಡಿಗೆ ಭೇಟಿ ನೀಡಿದ್ದು, PACS As MSC ಯೋಜನೆಯಡಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಡಿರುದ್ಯಾವರ ಶಾಖೆಗೆ ಭೇಟಿ ನೀಡಿತು.
https://chat.whatsapp.com/FCEnlTkAKCC0MGPhXtX4i4
ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಹರೀಶ್ ಸಾಲ್ಯಾನ್ ಅವರು ಅಧಿಕಾರಿಗಳಿಗೆ ಸಂಘದ ಸಾಲ ವಿತರಣೆಯ ಯೋಜನೆಗಳು, ಸಂಘದ ಮೂಲಕ ನಡೆಯುತ್ತಿರುವ ಮಾರಾಟ ವ್ಯವಹಾರಗಳ ಸಮಗ್ರವಾದ ಮಾಹಿತಿ ನೀಡಿದರು.
ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 1200 ಕೋಟಿ ರೂ. ವ್ಯವಹಾರ ನಡೆಸಿದ್ದು, 6720 ಸದಸ್ಯರನ್ನು ಹೊಂದಿದ್ದು 203 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಇದರಲ್ಲಿ 75.28 ಕೋಟಿಗೂ ಮಿಕ್ಕಿ ಕೃಷಿ ಸಾಲ ವಿತರಿಸಲಾಗಿದೆ. 127.72 ಕೋಟಿ ರೂ. ಕೃಷಿಯೇತರ ಸಾಲ ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ 4.81 ಕೋಟಿ ರೂ. ಲಾಭ ಗಳಿಸಿದೆ. ಸಂಘವು ಪೂರ್ಣ ಪ್ರಮಾಣದ ಮುಖ್ಯ ಕಚೇರಿ ಸೇರಿ ಒಂಬತ್ತು ಶಾಖೆಗಳನ್ನು ಹೊಂದಿದೆ. ಸಂಘದ ಎಲ್ಲಾ ವ್ಯವಹಾರಗಳ ಯಶಸ್ವಿ ಅನುಷ್ಠಾನಗಳ ಮೂಲಕ ನಬಾರ್ಡ್‌ನ ಗಮನ ಸೆಳೆದಿದ್ದು, ಸಂಘದ ಉನ್ನತ ಯಶಸ್ವಿಗೆ ಅಪೆಕ್ಸ್ ಬ್ಯಾಂಕಿನ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಜಿಲ್ಲಾಮಟ್ಟದ ಉತ್ತಮ ಸಹಕಾರ ಸಂಘವೆಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ನಬಾರ್ಡ್ ಸಂಸ್ಥೆಯ ಡಿಡಿಎಂ ಯೋಗೀಶ್, ಸಂಘದ ಉಪಾಧ್ಯಕ್ಷರಾದ ಆನಂದ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಗೌಡ ಹಾಗೂ ಸಂಘದ ಸಿಬ್ಬಂದಿಗಳು ಹಾಜರಿದ್ದರು.


