ಬೆಳ್ತಂಗಡಿ: ಇಲ್ಲಿನ ರಾಮನಗರದ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯ ಶ್ರೀದೇವಿ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರವರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ದೀಪ ಬೆಳಗಿಸಿ ಸೊಸೈಟಿಯನ್ನು ಲೋಕಾರ್ಪಣೆಗೊಳಿಸಿದರು. ನೂರಾರು ಕಾಲ ಈ ಜ್ಯೋತಿ ಹೀಗೆಯೇ ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್ ಸೊಸೈಟಿಯ ಸದಸ್ಯರಿಗೆ ವ್ಯವಹಾರದ ಮಾಹಿತಿ ನೀಡಿದರು. ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಮಂಜೊಟ್ಟಿ ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ಅತಿ ವಂದನೀಯ ಪೌಲ್ ಸೆಬೆಸ್ಟಿಯನ್ ಡಿಸೋಜ ಆಶೀರ್ವಚನ ನೀಡಿದರು.
ಪೆರಾಡಿ ಪ್ಯಾಕ್ಸ್ ಅಧ್ಯಕ್ಷ, ಸಹಕಾರ ರತ್ನ ಸತೀಶ್ ಕೆ ಕಾಶಿಪಟ್ಣ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎಸ್, ಕಾಂಪ್ಲೆಕ್ಸ್‌ನ ಮಾಲೀಕ ಶರತ್ ಆರ್.ನಾಯಕ್, ಸೊಸೈಟಿಯ ಮುಖ್ಯ ಪ್ರವರ್ತಕರಾದ ರಾಜೀತ್ ರೈ ಟಿ.ಸಿ, ಪ್ರಜ್ವಲ್ ಕುಮಾರ್, ಕಾರ್ಯಿಕ್ ಭಟ್, ಸುಧೀರ್ ಭಂಡಾರಿ, ಸಮರ್ ಕುಮಾರ್ ಜೈನ್, ಶಿವಣ್ಣ ಶೆಟ್ಟಿ, ಹೆನ್ವಿಲ್ ಮರ್ವಿನ್ ಡಿಸೋಜ, ಪುಷ್ಪವೇಣಿ, ಪ್ರವರ್ತಕರಾದ ಜಯಂತ ಡಿಸೋಜ, ಸಿಸಿಲಿಯ, ಸುಕೇಶ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪವನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮ್ ರೋಶಲ್ ಡಿಸೋಜ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


