Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಡಾ.ಚಂದ್ರಪಾಲ್ ಸಿಂಗ್ ಯಾದವ್ ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟ-ಏಷ್ಯಾ ಪೆಸಿಫಿಕ್ ಅಧ್ಯಕ್ಷರಾಗಿ ಮರು ಆಯ್ಕೆ
    News

    ಡಾ.ಚಂದ್ರಪಾಲ್ ಸಿಂಗ್ ಯಾದವ್ ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟ-ಏಷ್ಯಾ ಪೆಸಿಫಿಕ್ ಅಧ್ಯಕ್ಷರಾಗಿ ಮರು ಆಯ್ಕೆ

    adminBy adminNovember 28, 2025

    ನವದೆಹಲಿ: ಹಿರಿಯ ಭಾರತೀಯ ಸಹಕಾರಿ ಡಾ.ಚಂದ್ರಪಾಲ್ ಸಿಂಗ್ ಯಾದವ್ ಅವರು ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟ-ಏಷ್ಯಾ ಪೆಸಿಫಿಕ್ (ಐಸಿಎ-ಎಪಿ) ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

    https://chat.whatsapp.com/JVAtKKe2M19AFO3W5629ZS?mode=ems_copy_t
    ಗುರುವಾರ ಕೊಲಂಬೊದಲ್ಲಿ ನಡೆದ ಪ್ರಾದೇಶಿಕ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮಂಡಳಿಯ ಸದಸ್ಯರ ಚುನಾವಣಾ ಪ್ರಕ್ರಿಯೆ ನಡೆಯಿತು. ಇದರಲ್ಲಿ ಡಾ.ಚಂದ್ರಪಾಲ್‌ ಸಿಂಗ್‌ ಯಾದವ್‌ ಅವರ ಆಯ್ಕೆಯನ್ನು ಪ್ರಕಟಿಸಲಾಗಿದೆ. ಇಬ್ಬರು ಉಪಾಧ್ಯಕ್ಷರನ್ನು ಆರಿಸಲಾಗಿದ್ದು, ಚೀನಾದ ಆದಿಲಿ ವುಬುಲಿ ಮತ್ತು ಮಲೇಷ್ಯಾದ ಡಾಟುಕ್ ಸೆರಿ ಡಾ. ಅಬ್ದುಲ್ ಫತ್ತಾಹ್ ಅಬ್ದುಲ್ಲಾ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಚುನಾವಣೆಯಲ್ಲಿ ಜೋರ್ಡಾನ್‌ನ ಅಬ್ದುಲ್ಫತ್ತಾಹ್ ಎಂ.ಕ್ಯೂ. ಅಲ್-ಶಲಾಬಿ ಅವರು ಪರಾಭವಗೊಂಡರು. ಚುನಾವಣಾ ಪ್ರಕ್ರಿಯೆಯ ಪ್ರಕಾರ, ನಿರ್ದೇಶಕರ ಮಂಡಳಿಯನ್ನು ಮೊದಲು ಆಯ್ಕೆ ಮಾಡಲಾಗುತ್ತದೆ, ನಂತರ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಐಸಿಎ-ಎಪಿ ಮಂಡಳಿಯ 11 ಸ್ಥಾನಗಳಿಗೆ, 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

    ಅಧ್ಯಕ್ಷ ಹುದ್ದೆಯ ಘೋಷಣೆಯ ನಂತರ ಮಾತನಾಡಿದ ಡಾ.ಚಂದ್ರಪಾಲ್ ಸಿಂಗ್ ಯಾದವ್ ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯ ರಾಷ್ಟ್ರಗಳ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು. ಈ ಸರ್ವಾನುಮತದ ಆಯ್ಕೆಗೆ ನಾನು ತುಂಬಾ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಇದು ಇಡೀ ಏಷ್ಯಾ-ಪೆಸಿಫಿಕ್ ಸಹಕಾರಿ ಸಮುದಾಯದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. “ಈ ಗೆಲುವು ನನ್ನೊಬ್ಬನದ್ದಲ್ಲ – ಇದು ಏಕತೆಯ ಶಕ್ತಿಯನ್ನು ನಂಬುವ ಪ್ರತಿಯೊಬ್ಬ ಸಣ್ಣ ರೈತ, ಕಾರ್ಮಿಕ, ಕುಶಲಕರ್ಮಿ ಮತ್ತು ತಳಮಟ್ಟದ ಸಹಕಾರಿಯ ಗೆಲುವು. ಏಷ್ಯಾ-ಪೆಸಿಫಿಕ್ ಪ್ರದೇಶವು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
    ಡಾ.ಯಾದವ್ ಅವರು ಝಾನ್ಸಿಯಲ್ಲಿ ತಮ್ಮ ಸಹಕಾರಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ತಳಮಟ್ಟದ ನಾಯಕರಾದ ಅವರು ಇವತ್ತು ಏಷ್ಯಾದ ಅತ್ಯಂತ ಗೌರವಾನ್ವಿತ ಸಹಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಮಾರ್ಚ್ 19, 1959ರಂದು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಜನಿಸಿದ ಡಾ.ಯಾದವ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕೃಷಿಕರ ಕುಟುಂಬದಿಂದ ಬಂದವರು. ಅವರು ಎಂ.ಎಸ್ಸಿ., ಬಿ.ಎಡ್., ಎಲ್.ಎಲ್.ಬಿ. ಮತ್ತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಅವರು ಹಲವಾರು ಉನ್ನತ ಮಟ್ಟದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಕ್ರಿಭ್ಕೋ ಮತ್ತು ಅದರ ಅಂಗಸಂಸ್ಥೆಗಳ ಮಾಜಿ ಅಧ್ಯಕ್ಷರು, ಎನ್‌ಸಿಯುಐನ ಮಾಜಿ ಅಧ್ಯಕ್ಷರು, ಐಸಿಎ -ಎಪಿ ಉಪಾಧ್ಯಕ್ಷರು (2010–2021), ಜರ್ಮನಿಯ ಅಂತಾರಾಷ್ಟ್ರೀಯ ರೈಫಿಸೆನ್ ಯೂನಿಯನ್ (ಐಆರ್‌ಯು) ಸದಸ್ಯರು, ಎನ್‌ಸಿಸಿಎಫ್‌, ನಾಫೆಡ್‌ ಮತ್ತು ಹಲವಾರು ರಾಷ್ಟ್ರೀಯ ಸಂಸ್ಥೆಗಳ ಮಂಡಳಿಯ ಸದಸ್ಯರಾಗಿದ್ದರು. ರಾಜ್ಯಸಭೆಯ ಸದಸ್ಯರೂ ಆಗಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Adili Wubuli (China) and Datuk Seri Dr. Abdul Fattah Abdullah (Malaysia) Chandra Pal re-elected ICA-AP President unopposed Dr. Chandra Pal Singh Yadav International Cooperative Alliance–Asia Pacific (ICA-AP)
    Previous Articleಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗಾವಕಾಶ
    Next Article ನ.30ರಂದು ಮೆಲ್ಕಾರ್‌ನಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕಿನ 10ನೇ ಸ್ವಚ್ಛತಾ ಶ್ರಮದಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.