Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಮುಂದಿನ ಪೀಳಿಗೆಗೆ ನಾವು ನೀಡಬಲ್ಲ ಅತ್ಯುತ್ತಮ ಕೊಡುಗೆ ಎಂದರೆ ಸ್ವಚ್ಛ ಪರಿಸರ ಮಾತ್ರ
    News

    ಮುಂದಿನ ಪೀಳಿಗೆಗೆ ನಾವು ನೀಡಬಲ್ಲ ಅತ್ಯುತ್ತಮ ಕೊಡುಗೆ ಎಂದರೆ ಸ್ವಚ್ಛ ಪರಿಸರ ಮಾತ್ರ

    adminBy adminNovember 23, 2025

    ವಿಶ್ವಕರ್ಮ ಸಹಕಾರ ಬ್ಯಾಂಕ್ ಉಜಿರೆ ಶಾಖೆಯಲ್ಲಿ ಡಾ. ಎಸ್. ಆರ್. ಹರೀಶ್ ಆಚಾರ್ಯ ಅಭಿಮತ

    ಬೆಳ್ತಂಗಡಿ: ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆ ನಮ್ಮೆಲ್ಲರ ಪ್ರಾಥಮಿಕ ಜವಾಬ್ದಾರಿ. ನಾವು ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಹಸ್ತಾಂತರಿಸಬೇಕಾದರೆ ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಭಾಗಿದಾರಿಕೆ ಬೇಕು. ಸಾಮಾಜಿಕ ಸಂಘ ಸಂಸ್ಥೆಗಳು ಸ್ವಚ್ಛತೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದಲ್ಲಿ ವ್ಯಾಪಕವಾಗಿ ಅರಿವು ಮತ್ತು ಜಾಗೃತಿಯನ್ನು ಮೂಡಿಸುವತ್ತ ಕಾರ್ಯಪ್ರವೃತರಾಗಬೇಕು ಎಂದು ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷ ಡಾ. ಎಸ್. ಆರ್. ಹರೀಶ್ ಆಚಾರ್ಯ ಹೇಳಿದರು.

    https://chat.whatsapp.com/JVAtKKe2M19AFO3W5629ZS?mode=ems_copy_t
    ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಜಿರೆ ಶಾಖೆಯ ಆಶ್ರಯದಲ್ಲಿ “ ಸ್ವಚ್ಛತಾ ಹೀ ಸೇವಾ “ ಧ್ಯೇಯದೊಂದಿಗೆ ಭಾನುವಾರ ನಡೆದ ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.
    ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಳೆಪೇಟೆ ಇದರ ಅಧ್ಯಕ್ಷ ಅಬುಬಕ್ಕರ್ ಯು. ಹೆಚ್ ಸುಪ್ರೀಮ್ ಮಾತನಾಡಿ ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಬ್ಯಾಂಕಿಂಗ್ ಚಟುವಟಿಕೆಗಳ ಜೊತೆಜೊತೆಗೆ ಸ್ವಚ್ಛತೆಯಂತಹ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಸ್ವಚ್ಛತೆಯ ಕೆಲಸ ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಸ್ವಚ್ಛತಾ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.
    ರೋಟರಿ ಕ್ಲಬ್ ಬೆಳ್ತಂಗಡಿಯ ಆಧ್ಯರಾದ ಪ್ರೊ.ಪ್ರಕಾಶ್ ಪಭು, ಹಳೆಪೇಟೆ ಉಜಿರೆ ಆಟೋ ಮಾಲಕ ಮತ್ತು ಚಾಲಕ ಸಂಘದ ಸ್ಥಾಪಕ ಅಧ್ಯಕ್ಷ ನಜೀರ್ ಕೆ, ಆದರ್ಶ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಪ್ರಭು ಹಾಗೂ ಎಸ್ ವೈ ಎಸ್ ಉಜಿರೆ ಯುನಿಟ್ ಅಧ್ಯಕ್ಷ ಅಶನ್ ಹೆಚ್ ಅವರು ಹಸಿರು ನಿಶಾನೆ ತೋರಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    1. ಉಜಿರೆ ಟಿಬಿ ಕ್ರಾಸ್ ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯ ಶ್ರಮದಾನ ಕಾರ್ಯಕ್ರಮವು ನಡೆಯಿತು.
      ವಿಶ್ವಕರ್ಮ ಬ್ಯಾಂಕ್ ನ ನಿರ್ದೇಶಕರಾದ ಡಿ ಬಾಸ್ಕರ ಆಚಾರ್ಯ, ಜಯಪ್ರಕಾಶ್ ಆಚಾರ್ಯ, ಭರತ್ ನಿಡ್ಪಳ್ಳಿ , ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸಲೀಂ, ಒಕ್ಕಲಿಗ ಸಂಘದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಜಿ ಕೆ , ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಂಘದ ಅಧ್ಯಕ್ಷ ಗಣೇಶ ಆಚಾರ್ಯ, ಮೊಹಿದ್ದೀನ್ ಜುಮ್ಮಾ ಮಸೀದಿಯ ಕಾರ್ಯದರ್ಶಿ ಆರೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿಶ್ವನಾಥ್ ಎಸ್ ಮತ್ತು ವಿದ್ಯಾರ್ಥಿಗಳು, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸದಸ್ಯರು, ಆದರ್ಶ ಸೇವಾ ಟ್ರಸ್ ನ ಸದಸ್ಯರು, ಆಟೋ ಚಾಲರು ಮತ್ತು ಮಾಲಕ ಅಸೋಸಿಯೇಷನ್ ಟಿ.ಬಿ.ಕಾಸ್ ಹಳೆಪೇಟೆ ಉಜಿರೆಯ ಸದಸ್ಯರು, ಎಸ್. ವೈ.ಎಸ್, ಎಸ್.ಎಸ್.ಎಫ್ ಹಾಗೂ ಕೆ.ಎಂ.ಟಿ ಉಜಿರೆಯ ಸದಸ್ಯರು, ಬ್ಯಾಂಕಿನ ಗ್ರಾಹಕರು, ಶಾಖಾ ವ್ಯವಸ್ಥಾಪಕ ಲೋಕೇಶ್ ಎಸ್.ಆರ್ ಮತ್ತು ಸಿಬ್ಬಂದಿ ವರ್ಗ ಸ್ವಯಂಸೇವಕರಾಗಿ ಸ್ವಚ್ಛ ಭಾರತ್ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Dr. S R Harish Acharya Muhiyuddien Jumma Masjid Haelepete Beltangady Swacchatha Hi Seva Swachha Bharath Ujire Vishwakarma Sahakara Bank Limited
    Previous Articleಸಹಕಾರ ಭಾರತಿ ಬಾಗಲಕೋಟೆ, ವಿಜಯಪುರ ಜಿಲ್ಲಾ ವಿಶೇಷ ಸಭೆ
    Next Article ಕುಂದಾಪುರ ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್. ಸಚ್ಚಿದಾನಂದ ಚಾತ್ರ , ಉಪಾಧ್ಯಕ್ಷರಾಗಿ ವಿವೇಕ್ ಯು ಅವಿರೋಧ ಆಯ್ಕೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.