ವಿಜಯಪುರ: ವಿಜಯಪುರ ಸೌಹಾರ್ದ ಸಹಕಾರಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಸಂಜಯ ಪಾಟೀಲ (ಕನಮಡಿ) ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ ಕವಟಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹೊಸ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಚುನಾವಣಾಧಿಕಾರಿ ವಿ.ಸಿ.ಕುದಾಪುರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ವಿಜಯಪುರ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನೂತನ ಆಡಳಿತ ಮಂಡಳಿ ಸದಸ್ಯರಾದ ಅರುಣ ವಾರದ್, ಸುರೇಶ ಬಿರಾದಾರ್, ಸಿದ್ದು ಮಲ್ಲಿಕಾರ್ಜುನಮಠ, ಅರುಣ ಮಠ, ಮೋನೇಶ ಪತ್ತಾರ, ಸತೀಶ ಶಿಂತ್ರೆ, ವಿವೇಕಾನಂದ ಶಿರೋಳ್ಕರ್, ಯಮನಪ್ಪ ಸಾತಿಹಾಳ್ (ವಿಜಯಪುರ ಗ್ರಾಮಾಂತರ), ಬಾಲಚಂದ್ರ ಮುಂಜಾನೆ (ಬಸವನ ಬಾಗೇವಾಡಿ), ರಾಜು ಹಂಚಾಟೆ (ಮುದ್ದೇಬಿಹಾಳ ), ಆರ್.ಡಿ.ಕುಲಕರ್ಣಿ (ಸಿಂದಗಿ), ಚಂದ್ರಕಾಂತ ಪಾಟೀಲ (ಚಡಚಣ ಇಂಡಿ), ಮಲಕಪ್ಪ ರೊಟ್ಟಿ (ತಾಂಬಾ, ಇಂಡಿ) ಹಾಗೂ ಸಹಕಾರ ಭಾರತಿ ಜಿಲ್ಲಾ ಸಂಘಟನೆ ಕಾರ್ಯದರ್ಶಿ ದೀಪಕ ಶಿಂತ್ರೆ ಮತ್ತು ಪ್ರಧಾನ ಕಾರ್ಯದರ್ಶಿ ಪರಶ್ರಾಮ ಚಿಂಚಲಿ ಉಪಸ್ಥಿತರಿದರು.

