ಮಂಗಳೂರು: ಸ್ವಾತಂತ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಆತ್ಮಸ್ಥೈರ್ಯ ತುಂಬಿದ್ದ, ಶಾಂತಿಯ ಕ್ರಾಂತಿಗೆ ಧ್ವನಿ ತುಂಬಿದ್ದ ವಂದೇ ಮಾತರಂ ರಾಷ್ಟ್ರೀಯ ಗೀತೆಗೆ ಈಗ 150ರ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ರಾಮಕೃಷ್ಣ ಮಠದ ಸಹಯೋಗದೊಂದಿಗೆ ನವೆಂಬರ್ 16ರಂದು ವಂದೇ ಮಾತರಂ ವಿಶೇಷ ಕಾರ್ಯಕ್ರಮ ಪ್ರಸ್ತುತಪಡಿಸಲಾಗುತ್ತಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕಾರ್ಯಕ್ರಮದ ಅಂಗವಾಗಿ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನವೆಂಬರ್ 16ರ ಭಾನುವಾರ ಸಂಜೆ 5ರಿಂದ ನಾಡಿನ ಹೆಮ್ಮೆಯ ಹೆಸರಾಂತ ಸುಮಧುರ ಕಂಠದ ಗಾಯಕ ಶಂಕರ್ ಶಾನಭಾಗ್ ಬೆಂಗಳೂರು, ಇವರಿಂದ ದೇಶಭಕ್ತಿ ಉದ್ದೀಪನಗೊಳಿಸುವ ವಂದೇ ಮಾತರಂ (ತಾಯೇ ವಂದಿಸುವೆ) ದೇಶಭಕ್ತಿ ಗೀತೆಗಳ ಗಾಯನ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೇಶಭಕ್ತ ನಾಗರಿರು ಪಾಲ್ಗೊಳ್ಳುವಂತೆ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ.ಎಸ್ ಗುರುರಾಜ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

