ವಿಶ್ವಕರ್ಮ ಸಹಕಾರ ಬ್ಯಾಂಕ್ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ಮೂಲಭೂತವಾಗಿ ಒಂದು ಆರ್ಥಿಕ ಸಂಸ್ಥೆ. ಆದರೆ ಆರ್ಥಿಕ ಕಾರ್ಯ ಚಟುವಟಿಕೆಗಳ ಜೊತೆಗೆ ಸಮಾಜಮುಖಿಯಾಗಿಯೂ ಕಾರ್ಯತತ್ಪರವಾಗಿರುವುದು ಅತ್ಯಂತ ಸಂತಸದ ವಿಚಾರ. ಸ್ವಚ್ಛತೆಯಂತಹ ಸಮಾಜದ ಮೂಲಭೂತ ಸಂಗತಿಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಜಾಗೃತಿಯ ಸ್ವಚ್ಛ ಭಾರತ್ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವುದು ಸ್ತುತ್ಯರ್ಹ ಸಂಗತಿಯಾಗಿದೆ ಎಂದು ರೊಟೇರಿಯನ್ ಪಿಡಿಜಿ ಡಾ. ದೇವದಾಸ್ ರೈ ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ “ಸ್ವಚ್ಛತಾ ಹೀ ಸೇವಾ” ಧೈಯದೊಂದಿಗೆ ಆಯೋಜಿಸಿರುವ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ರೋಟರಿ ಕ್ಲಬ್ ಮಂಗಳೂರು ಕೇಂದ್ರ ಇದರ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟ ಅವರು ಸ್ವಚ್ಛ ಭಾರತ್ ನಂತಹ ಸಾಮಾಜಿಕ ಕಾರ್ಯಗಳು ಜನರ ಪರಿಣಾಮಕಾರಿ ಭಾಗೀದಾರಿಕೆಯಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ. ಅದುದರಿಂದ ವಿಶ್ವಕರ್ಮ ಬ್ಯಾಂಕ್ ಆಯೋಜಿಸಿರುವ ಈ ಸಾಮಾಜಿಕ ಕಾರ್ಯದಲ್ಲಿ ನಮ್ಮಂತಹ ಸಂಘಟನೆಗಳು ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ, ರೋಟೇರಿಯನ್ ಡಾ. ದೇವದಾಸ್ ರೈ, ಅವೇಕ್ ಕುಡ್ಲ ಇದರ ಸಂಯೋಜಕರಾದ ಕಮಲಾಕ್ಷ ಪೈ, ರೋಟರಿ ಕ್ಲಬ್ ಮಂಗಳೂರು ಕೇಂದ್ರ ಇದರ ಅಧ್ಯಕ್ಷರಾದ ಶ್ರೀ ಭಾಸ್ಕರ್ ರೈ ಕಟ್ಟ ಹಸಿರು ನಿಶಾನೆ ತೋರುವ ಮೂಲಕ ಸ್ವಚ್ಛ ಭಾರತ್ ಶ್ರಮದಾನವು ಪ್ರಾರಂಭವಾಯಿತು. ಮಂಗಳೂರಿನ ರಥಬೀದಿ, ಕಾಳಿಕಾಂಬ ದೇವಸ್ಥಾನ ರಸ್ತೆ, ಮುಖ್ಯಪ್ರಾಣ ದೇವಸ್ಥಾನ ರಸ್ತೆ, ಫೈವರ್ ಮಾರ್ಕೆಟ್, ಅಜೀಜುದ್ದೀನ್ ರಸ್ತೆ, ಬಸವನಗುಡಿ ರಸ್ತೆ, ನ್ಯೂಚಿತ್ರಾ ಟಾಕೀಸ್ ಪರಿಸರದಲ್ಲಿ ಸ್ವಯಂಸೇವಕರು ಸ್ವಚ್ಛತೆಯ ಕಾರ್ಯವನ್ನು ನಡೆಸಿದರು.
ಶ್ರಮದಾನದಲ್ಲಿ ಭಾಗವಹಿಸಿದ ಚಿಂತಕ ಅರವಿಂದ ಚೊಕ್ಕಾಡಿಯವರು ಸ್ವಚ್ಛತೆ ಎನ್ನುವುದು ಮಹಾತ್ಮಾ ಗಾಂಧೀಜಿಯವರ ಕನಸಿನ ಭಾಗವಾದರೂ ಅದು ಪ್ರಕೃತಿದತ್ತವಾದುದಾಗಿದೆ. ಮಾನವ ಜೀವನದ ಸಂಪೂರ್ಣ ಜೈವಿಕ ಪರಿಸರದ ಶುಚಿತ್ವವನ್ನು ಕಾಪಾಡಬೇಕಾದದ್ದು ಎಷ್ಟು ಮುಖ್ಯವೋ, ನಮ್ಮ ಗುಣ, ನಡತೆ, ವ್ಯವಹಾರದಲ್ಲಿಯೂ ಶುಚಿತ್ವವನ್ನು ಕಾಪಾಡುವುದು ಕೂಡಾ ಅಷ್ಟೇ ಮುಖ್ಯ ಎಂದು ಕರೆ ನೀಡಿದರು.

ಬ್ಯಾಂಕಿನ ನಿರ್ದೇಶಕರಾದ ಹರಿಪ್ರಸಾದ್, ಕೆನರಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಯೋಜನಾಧಿಕಾರಿಗಳಾದ ಸುಶಾಮಾ ಸಿ, ಸ್ಮಿತಾ ಎಂ ಹಾಗೂ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕರಾದ ಪುಷ್ಪಲತಾ, ರೋಟರಿ ಕ್ಲಬ್ ಮಂಗಳೂರು ಕೇಂದ್ರದ ರಾಜಗೋಪಾಲ್ ರೈ, ಶ್ರೀ ಸಾಯಿಬಾಬಾ ಮತ್ತು ಸದಸ್ಯರು, ಅವೇಕ್ ಕುಡ್ಲದ ಪುನೀತ್ ಮತ್ತು ಸಂಗಡಿಗರು, ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಕೆ. ಎಲ್. ಹರೀಶ್, ಉದಯ ಆಚಾರ್ಯ ಮತ್ತು ಸದಸ್ಯರು, ಕಾಳಿಕಾಂಬಾ ಸೇವಾ ಸಮಿತಿಯ ಜಗದೀಶ್ ಸಿದ್ಧಕಟ್ಟೆ, ರವೀಂದ್ರ ಮಂಗಳಾದೇವಿ, ರವೀಂದ್ರ ಎಸ್. ಮತ್ತು ಸದಸ್ಯರು, ಗುರುಸೇವಾ ಪರಿಷತ್ತಿನ ಗಣೇಶ್ ಕೆಮ್ಮಣ್ಣು, ಕೆ.ಜೆ. ಗುರುರಾಜ್, ಶೇಖರ ಆಚಾರ್ಯ ಮತ್ತು ಸದಸ್ಯರು, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸ್ವಯಂಸೇವಕರಾಗಿ ಭಾಗವಹಿಸಿದರು. ಸ್ವಚ್ಛ ಭಾರತ್ ಶ್ರಮದಾನದ ಸಂಚಾಲಕರಾದ ಪ್ರಕಾಶ್ ಆಚಾರ್ಯ ಹಲೇಜಿ ಇವರು ಶ್ರಮದಾನದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದರು.

