ಮೂಲ್ಕಿ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ಉತ್ತಮ ಸಾಧನೆಗಳನ್ನು ಮಾಡಿ ಮೌಲ್ಯಾಧಾರಿತ ಜೀವನ ನಡೆಸಿ ಬದುಕು ಸಾರ್ಥಕಗೊಳಿಸಬೇಕು ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ ಬೆರ್ನಾಡ್ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಅವರು 2024- 25ನೇ ಸಾಲಿನ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿ ಮಾತನಾಡಿದರು.

ಸೊಸೈಟಿಯ ವಿವಿಧ ಶಾಖೆಗಳಲ್ಲಿ ಸುಮಾರು 40 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಚಿತವಾಗಿ ಇಂಟರ್ನ್‌ಶಿಪ್ ತರಬೇತಿ ಪಡೆದಿದ್ದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಚೇರಿಯ ಸಾಲ ವಿಭಾಗದ ಮ್ಯಾನೇಜರ್ ಅಕ್ಷತಾ ಶೆಟ್ಟಿ ಸ್ವಾಗತಿಸಿದರು. ಅಕೌಂಟೆಂಟ್ ಲೋಲಾಕ್ಷಿ ಧನ್ಯವಾದ ಅರ್ಪಿಸಿದರು.

