ಉಡುಪಿ: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕುಂದಾಪುರದ ಜನಶ್ರೀ ಸೌಹಾರ್ದ ಸಹಕಾರಿ ಸಂಘದ ಜಗನ್ನಾಥ ಶೆಟ್ಟಿ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿರಿಯಾರದ ಜೈಗಣೇಶ್ ಸೌಹಾರ್ದ ಸಹಕಾರಿ ಸಂಘದ ಅಶೋಕ್ ಪ್ರಭು ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಯಿತು. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಜಿ.ಸಾಲ್ಯಾನ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜನಾಥ ಎಸ್.ಕೆ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಉಪಸ್ಥಿತರಿದ್ದರು.

ನಿರ್ದೇಶಕರಾಗಿ ಉಡುಪಿ ವಲಯದಿಂದ ಸುಧೀರ್ ನಾಯಕ್ -ಹಂಸ ಚೈತನ್ಯ ಸೌಹಾರ್ದ ಸಹಕಾರಿ ಸಂಘ ಉಡುಪಿ, ಬಿ.ಮಧುಸೂದನ್ ನಾಯಕ್ -ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಡುಪಿ, ಸುಧಾಕರ ಕೆ. ಮುಳೂರು – ಅನಂತಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಡುಪಿ, ರಾಮ್ ವಿ.ಕುಂದರ್ -ಶ್ರೀರಸ್ತು ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಉಡುಪಿ, ಕಾಪು ವಲಯದಿಂದ ನವೀನ್‌ಚಂದ್ರ ಎಸ್.ಸುವರ್ಣ – ಅಡ್ವೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಾಪು, ಭಾಸ್ಕರ್ ಕೋಟ್ಯಾನ್ -ಭಾರತಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾಪು, ಬ್ರಹ್ಮಾವರ ವಲಯದಿಂದ ಮಂಜುನಾಥ ಎಸ್.ಕೆ -ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ, ಅಶೋಕ್ ಪ್ರಭು -ಜೈಗಣೇಶ್ ಸೌಹಾರ್ದ ಸಹಕಾರಿ ಸಂಘ ಶಿರಿಯಾರ, ಪ್ರಮೋದ್ ಕುಮಾರ್ ಶೆಟ್ಟಿ -ನವಭಾರತ್ ಸೌಹಾರ್ದ ಸಹಕಾರಿ ಮೈಕೊರ್ಮೆ, ಕುಂದಾಪುರ ವಲಯದಿಂದ ಜಗನ್ನಾಥ ಶೆಟ್ಟಿ -ಜನಶ್ರೀ ಸೌಹಾರ್ದ ಸಹಕಾರಿ ಸಂಘ ಕುಂದಾಪುರ, ನಾಗರಾಜ್ -ವಂದೇಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕುಂದಾಪುರ, ಭಾಸ್ಕರ್ ಬಿ -ಭಾರತ್ ವಿಕಾಸ್ ಸೌಹಾರ್ದ ಸಹಕಾರಿ ಸಂಘ ಕುಂದಾಪುರ, ಬೈಂದೂರು ವಲಯದಿಂದ ಎಂ.ವಿನಾಯಕ ರಾವ್ -ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು, ಸುಬ್ರಹ್ಮಣ್ಯ ಪಡುಕೋಣೆ -ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕೊಲ್ಲೂರು, ಭೀಮೇಶ್ ಕುಮಾರ್ ಎಸ್.ಜಿ -ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬೈಂದೂರು, ಕಾರ್ಕಳ ವಲಯದಿಂದ ನೇಮಿರಾಜ ಆರಿಗ -ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಾರ್ಕಳ ಇವರು ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





