Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶೇ.20 ಡಿವಿಡೆಂಡ್
    News

    ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶೇ.20 ಡಿವಿಡೆಂಡ್

    adminBy adminSeptember 29, 2025

    ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

    ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬೆಂದೂರಿನ ಸೇಂಟ್‌ ಸೆಬಾಸ್ಟಿಯನ್‌ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

    https://chat.whatsapp.com/JVAtKKe2M19AFO3W5629ZS?mode=ems_copy_t
    ಸಂಘದ ಅಧ್ಯಕ್ಷ ಚಂದ್ರಶೇಖರ್‌ ಕೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ 2024-25 ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರ, ಬಜೆಟ್ ಮಂಡಿಸಿದರು. ಸೊಸೈಟಿಯ ಲಾಭದಲ್ಲಿ ಶೇ.20 ಡಿವಿಡೆಂಡ್ ಘೋಷಿಸಲಾಯಿತು. ಹಾಲಿ ಸಾಲಿನಲ್ಲಿ ಗರಿಷ್ಠ ಲಾಭ ಗಳಿಕೆ, ಠೇವಣೆ, ಸಾಲ ಸೌಲಭ್ಯ ಕಳೆದ ಸಾಲಿಗೆ ಹೋಲಿಸಿದಾಗ ಶೇ.29 ವೃದ್ಧಿಯಾಗಿದ್ದು, ವಾರ್ಷಿಕ ವಹಿವಾಟಿನಲ್ಲಿ ಗರಿಷ್ಠ ವೃದ್ಧಿಯ ದಾಖಲೆ ಮಾಡಿರುವುದನ್ನು ಸಭೆಯಲ್ಲಿ ಪ್ರಶಂಶಿಸಲಾಯಿತು.
    ಸೊಸೈಟಿಯು ಹಾಲಿ ನಾಲ್ಕು ಶಾಖೆಗಳನ್ನು ಹೊಂದಿದ್ದು ಮಂಗಳೂರು, ಸುರತ್ಕಲ್, ಉಡುಪಿ, ಬಂಟ್ವಾಳದ ಎಲ್ಲ ಶಾಖೆಗಳೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿವೆ. ಐದನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ತೆರೆದು ವ್ಯವಹಾರ ಆರಂಭಗೊಂಡಿದ್ದು ಅಧಿಕೃತ ಉದ್ಘಾಟನೆ ಅಕ್ಟೋಬರ್‌ ಒಂದರಂದು ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಸಂಸ್ಥೆಯು ಸತತ ಲಾಭ ಗಳಿಸುತ್ತ ಆಡಿಟ್‌ ವರ್ಗೀಕರಣದಲ್ಲಿ ಸತತ ಎ ವರ್ಗದ ಸಾಧನೆ ಮಾಡಿದೆಯಲ್ಲದೆ, ಐದು ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಾಧನಾ ಪ್ರಶಸ್ತಿ ಪಡೆಯುತ್ತಿದೆ.


    ಪಿಯುಸಿ ಮತ್ತು ಎಸ್ಸೆಸ್ಸೆಯಲ್ಲಿ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಾಸಭೆಯ ನೋಟಿಸ್‌ ಅನ್ನು ನಿರ್ದೇಶಕ ದಿವಾಕರ ಶಂಭೂರು ಓದಿದರು. ಸಭೆಯ ನಿರ್ಣಯವನ್ನು ನಿರ್ದೇಶಕ ಅಶೋಕ್ ಜಿ ಮಂಡಿಸಿದರು. ಲಾಭ ಹಂಚಿಕೆ ಮತ್ತು ಡಿವಿಡೆಂಡ್‌ ಘೋಷಣೆಯನ್ನು ನಿರ್ದೇಶಕ ರಾಜಾ ಬಂಟ್ವಾಳ ಮಂಡಿಸಿದರು. ಕಾರ್ಯಚಟುವಟಿಕೆಯ ವಿವರವನ್ನು ನಿರ್ದೇಶಕ ಬಿ.ಎಸ್. ಭಂಡಾರಿ ಹಾಗೂ ಪ್ರತಿಭಾ ಪುರಸ್ಕಾರ ಮಾಹಿತಿಯನ್ನು ನಿರ್ದೇಶಕ ರಮೇಶ್ ಸಿ.ಎಂ. ಭಂಡಾರಿ ಮಂಡಿಸಿದರು.
    ಸಭೆಯಲ್ಲಿ ನಿರ್ದೇಶಕರಾದ ರಘುವೀರ ಭಂಡಾರಿ, ಕುಮಾರ್‌ ಭಂಡಾರಿ, ಹರೀಶ್ ಪಿ.ಭಂಡಾರಿ, ರವೀಂದ್ರನಾಥ್ ಉಳ್ಳಾಲ, ಶೇಖರ್ ಎಚ್., ರಮಾನಾಥ್ ಭಂಡಾರಿ, ಶಾಂತಾ ಬಿ.ಎಸ್. ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಮ ಭಂಡಾರಿ ಎಚ್‌. ವಂದಿಸಿದರು. ನಿರ್ದೇಶಕ ಶಶಿಧರ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Bendooru Saint Sebastian Community Hall Kacchuru Credit Co Operative Society
    Previous Articleಶ್ರೀಶಾ ಸೌಹಾರ್ದ ಸಹಕಾರಿ ಸಂಸ್ಥೆಯಿಂದ ಕ್ಯಾ.ಪ್ರಾಂಜಲ್ ಸ್ಮರಣಾoಜಲಿ, 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ವೀಲ್ ಚೇರ್ ಕೊಡುಗೆ
    Next Article ಶ್ರೀಶಾ ಸೌಹಾರ್ದ ಸೊಸೈಟಿಯ ಸಾಮಾಜಿಕ ಕಳಕಳಿಗೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಸನ್ಮಾನ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.