Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಮಹಾಸಭೆ
    News

    ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಮಹಾಸಭೆ

    adminBy adminSeptember 24, 2025

    ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಶಾಪಿಂಗ್ ಮಹಲ್ 1ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಉಪ್ಪಿನಂಗಡಿ ದೀನರ ಕನ್ಯಾಮಾತ ದೇವಾಲಯದ ಮಿನಿ ಹಾಲ್ ನಲ್ಲಿ ಭಾನುವಾರ ಅಧ್ಯಕ್ಷ ರಾಬರ್ಟ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಜರಗಿತು.

    https://chat.whatsapp.com/JVAtKKe2M19AFO3W5629ZS?mode=ems_copy_t
    ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಬರ್ಟ್ ಡಿಸೋಜ ಅವರು ಸಂಘದಲ್ಲಿ ವರದಿ ವರ್ಷಾಂತ್ಯಕ್ಕೆ 483 ಸದಸ್ಯರಿದ್ದು ರೂ. 43.21 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದ್ದು ವಿವಿಧ ಠೇವಣಿ ಮೊತ್ತವು ರೂ.9.33 ಕೋಟಿ ಆಗಿದ್ದು ವಿವಿಧ ರೂಪದಲ್ಲಿ ಸಂಘದ ಸದಸ್ಯರಿಗೆ ರೂ.3,07,48,461.00 ಸಾಲ ನೀಡಿ 31.03.2025 ಕ್ಕೆ ರೂ. 3,12,06,860.00 ಮರುಪಾವತಿ ಆಗಿ ರೂ. 8,38,47,381.00 ಹೊರ ಬಾಕಿ ಇರುತ್ತದೆ. ವರದಿ ವರ್ಷದಲ್ಲಿ ರೂ. 30,06,89,399.98 ವ್ಯವಹಾರ ನಡೆಸಿದ್ದು, 31.03.2025ಕ್ಕೆ ರೂ. 2,04,873.38 ಲಾಭ ಗಳಿಸಿದೆ. ಶೇರು ಬಂಡವಾಳ ಹೊಂದಿದ ಸದಸ್ಯರಿಗೆ 4% ಡಿವಿಡೆಂಡ್‌ ವಿಂಗಡಿಸಲಾಗುವುದು ಎಂದು ಘೋಷಣೆ ಮಾಡಿದರು.


    ಹಿಂದಿನ ಸಭೆಯ ವರದಿಯನ್ನು ಕಡಬ ಶಾಖಾ ಪ್ರಬಂಧಕರಾದ ಭವ್ಯ ನಿತ್ಯ ಲೋಬೋ ಮಂಡಿಸಿದರು, ಲೆಕ್ಕಪತ್ರಗಳನ್ನು ಕಾರ್ಯನಿರ್ವಾಹಕರಾದ ವಿಲ್ಫ್ರೆಡ್ ವಿನ್ಸೆಂಟ್ ಡಿಸೋಜ ಸಭೆಯ ಮುಂದಿರಿಸಿದರು. ಸಂಘದ ಲಾಭಾಂಶದಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತ ದೇವಾಲಯಕ್ಕೆ ಏರ್ ಕೂಲರ್ ಹಸ್ತಾಂತರಿಸಲಾಯಿತು. ಮಹಮ್ಮದ್ ಅನಾನ್ ಎಂಬುವವರಿಗೆ ಸಹಾಯಧನವನ್ನು ಉಪ್ಪಿನಂಗಡಿ ರೋಟರಿ ಅಧ್ಯಕ್ಷ ಹಾಗೂ ಸದಸ್ಯರಾದ ಜೋನ್ ಕೆನ್ಯೂಟ್ ಅವರ ಮೂಲಕ ಹಸ್ತಾಂತರಿಸಲಾಯಿತು. ಸಂಘದ ನಿರ್ದೇಶಕರಾದ ಮ್ಯಾಕ್ಸಿಂ ಲೋಬೋ ಅವರಿಗೆ ಮತ್ತು ಸದಸ್ಯ ಗ್ರಾಹಕರಾದ ಪ್ರಶಾಂತ್ ಡಿಕೋಸ್ಟ ಅವರನ್ನು ಗೌರವಿಸಲಾಯಿತು.


    ಸೊಸೈಟಿಯ ನಿರ್ದೇಶಕರಾದ ಗ್ರೆಗರಿ ಲೋಬೋ, ಹೆನ್ರಿ ಲೋಬೋ, ಸೆಬೆಸ್ಟಿಯನ್ ಲೋಬೋ, ಸಿಲ್ವೆಸ್ಟರ್ ವೇಗಸ್, ವಿನ್ಸೆಂಟ್ ಕೆನ್ಯೂಟ್ ಮಿನೇಜಸ್, ಮ್ಯಾಕ್ಸಿಂ ಲೋಬೋ, ಐರಿನ್ ಲೋಬೋ, ವಿನ್ಸೆಂಟ್ ವೇಗಸ್, ಯೋಹನ್ನಾನ್ ಎ ಯು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳನ್ನು ಹಾಗೂ ಪಿಗ್ಮಿ ಸಂಗ್ರಾಹಕರನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗಳಾದ ಸಂತೋಷ್ ಪಿಂಟೋ, ಶ್ರೇಯಸ್ ಶೆಟ್ಟಿ ಕೊಕ್ಕಡ, ಜೋನ್ಸಿ ಡಿಸೋಜ, ಭವ್ಯ ನಿತ್ಯ ಲೋಬೋ, ತನುಶ್ರೀ ಸಹಕರಿಸಿದರು. ಸಂಘದ ನಿರ್ದೇಶಕರಾದ ವಿನ್ಸೆಂಟ್ ಕೆನ್ಯೂಟ್ ಮಿನೇಜಸ್ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Anugraha Credit Souharda Co Operative Society Uppinangady Uppinangadi Uppinangadi Deenara Kanyaamatha Devalaya
    Previous Articleಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
    Next Article ಕ್ರಿಭ್ಕೋ ವ್ಯವಸ್ಥಾಪಕ ನಿರ್ದೇಶಕರಾಗಿ ಎಸ್.ಎಸ್. ಯಾದವ್ ನೇಮಕ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.