ಭಟ್ಕಳ: ಕೆನರಾ ದೈವಜ್ಞ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಸೋನಾರಕೇರಿ ಭಟ್ಕಳ ಇದರ ಏಳನೇ ವರ್ಷದ 2024-25ನೇ ಸಾಲಿನ ವಾಷಿ೯ಕ ಸಾಮಾನ್ಯ ಸಭೆ ದೈವಜ್ಞ ಸಭಾಭವನ ಭಟ್ಕಳದಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಹಕಾರಿಯ ಅಧ್ಯಕ್ಷರಾದ ಬಾಲಕೃಷ್ಣ ಎಂ.ಶೇಟ್ ಸಭೆಯ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಸಹಕಾರಿ ಸಂಘವು ವರದಿ ವರ್ಷದಲ್ಲಿ 35 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ರೂ.14.09 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ 4% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿ, ಸಹಕಾರಿಯ ಅಭಿವೃದ್ಧಿ ಹಾಗೂ ಮುಂದಿನ ಗುರಿಗಳ ಬಗ್ಗೆ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರಾದ ಸುನೀಲ್ ಆರ್.ಶೇಟ್ ಹಾಗೂ ಸುನೀತಾ ಪಿ.ಶೇಟ್ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಡಿ.ಶೇಟ್ ಕಾರ್ಯಕ್ರಮ ನಿರೂಪಿಸಿ, ವಾರ್ಷಿಕ ವರದಿ ಮಂಡಿಸಿದರು. ಸಹಕಾರಿಯ ಉಪಾಧ್ಯಕ್ಷರಾದ ಸಂದೀಪ್ ಎಸ್.ಕೊಲ್ಲೆ ಹಾಗೂ ನಿರ್ದೇಶಕರಾದ ಸಾಯಿನಾಥ್ ಕೆ.ಶೇಟ್, ದಿನೇಶ್ ಕೆ.ಶೇಟ್, ಸುಬ್ರಮಣ್ಯ ಆರ್.ಶೇಟ್, ಬಬಿತಾ ಎಂ.ಶೇಟ್ ಉಪಸ್ಥಿತರಿದ್ದರು. ಸಹಕಾರಿಯ ಸಿಬ್ಬಂದಿ ಅಭಿಷೇಕ್ ಶೇಟ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


