ಮಂಗಳೂರು: ಮಂಗಳೂರಿನಲ್ಲಿ ಶನಿವಾರ ನಡೆದ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ -ರೋಟರಿ ಕೋಸ್ಟಲ್ ಎಂಎಸ್‌ಎಂಇ ಕಾಂಕ್ಲೇವ್ -2025 ಕಾರ್ಯಕ್ರಮದಲ್ಲಿ ವಿಶ್ವಕರ್ಮ ಕಲಾ ಪರಿಷತ್‌ನ ಖಜಾಂಚಿ, ಎ.ಜಿ ಜ್ಯುವೆಲ್ಲರಿ ವರ್ಕ್ಸ್ ಇದರ ಮಾಲೀಕರಾದ ಎ.ಜಿ ಸದಾಶಿವ ಮಂಗಳಾದೇವಿ ಇವರಿಗೆ ಪ್ರತಿಷ್ಠಿತ ಆರ್ಟಿಸನ್ ಆಫ್ ದ ಇಯರ್(ವರ್ಷದ ಅತ್ಯುತ್ತಮ ಕುಶಲಕರ್ಮಿ) ಪ್ರಶಸ್ತಿ ನೀಡಿ ಗೌರವಿಸಲಾಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಇವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಉತ್ತಮ ಗ್ರಾಹಕರಾಗಿದ್ದು ಇವರಿಗೆ 2024-25ನೇ ಸಾಲಿನಲ್ಲಿ ವಿಶ್ವಕರ್ಮ ಬ್ಯಾಂಕ್ ದಿವಂಗತ ಹರಿಶ್ಚಂದ್ರ ಆಚಾರ್ಯ ಪುರಸ್ಕಾರ ನೀಡಿ ಗೌರವಿಸಿದೆ. ವರ್ಷದ ಅತ್ಯುತ್ತಮ ಕುಶಲಕರ್ಮಿ ಪುರಸ್ಕಾರಕ್ಕೆ ಭಾಜನರಾದ ಎ.ಜಿ ಸದಾಶಿವ ಅವರಿಗೆ ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಮತ್ತು ಬ್ಯಾಂಕಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


