ಬೆಳ್ತಂಗಡಿ: ಸಹಕಾರ ರಂಗದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಪ್ರಸಕ್ತ ಸಾಲಿನಲ್ಲಿ ವಿಜಯ ಕ್ರೆಡಿಟ್ ಸಹಕಾರಿ ಸಂಘವು ರೂ.1100 ಕೋಟಿ ವಾರ್ಷಿಕವ್ಯವಹಾರ ನಡೆಸಿದ್ದು, ರೂ.3.00 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಗುರುವಾಯನಕೆರೆ ಬಂಟರ ಸಂಘದಲ್ಲಿ ನಡೆದ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 33,245 ಸದಸ್ಯರನ್ನು ಹೊಂದಿರುವ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 4 ಕೋಟಿ ರೂ. ಗಿಂತಲೂ ಅಧಿಕ ಪಾಲು ಬಂಡವಾಳ ಸಂಗ್ರಹಿಸಿದ್ದು, 247 ಕೋಟಿ ರೂ. ಠೇವಣಿ ಹೊಂದಿದೆ. 216 ಕೋಟಿ ರೂ.ಗಿಂತ ಅಧಿಕ ಸಾಲ ನೀಡಲಾಗಿದೆ. ಸಾಲ ವಿತರಣೆಯಲ್ಲಿ ಕಳೆದ ವರ್ಷಕ್ಕಿಂತ ಶೇ.39.71 ಹಾಗೂ ಠೇವಣಿ ಸಂಗ್ರಹದಲ್ಲಿ ಶೇ. 36.04 ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಮಾರ್ಗದರ್ಶಕ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಅವರು ಸಂಘದ ಸ್ಥಾಪಕಾಧ್ಯಕ್ಷ ಜಯರಾಮ ಶೆಟ್ಟಿ ಅವರ ಸಾಧನೆಯ ಬಗ್ಗೆ ತಿಳಿಸಿದರು. ಈ ಸಂದರ್ಭ ಸಂಘದ ಸ್ಥಾಪಕಾಧ್ಯಕ್ಷ ಎಸ್.ಜಯರಾಮ್ ಶೆಟ್ಟಿ ಪಡಂಗಡಿ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ದೇರಳಕಟ್ಟೆ ಶಾಖೆಯಲ್ಲಿ ಕೆಲಸ ನಿರ್ವಹಿಸಿದ ನವೀನ್ ರೈ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.
ನಿರ್ದೇಶಕರಾದ ಎಸ್.ಜಯರಾಮ ಶೆಟ್ಟಿ ಪಡಂಗಡಿ, ಎಂ.ಜಿ ಶೆಟ್ಟಿ ಉಜಿರೆ, ಬಾಲಕೃಷ್ಣ ಪೂಂಜ ಎಚ್., ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಜಯರಾಮ ಭಂಡಾರಿ ಎಂ.ಪುರಂದರ ಶೆಟ್ಟಿ ಮಂಜುನಾಥ ರೈ, ರಾಜು ಶೆಟ್ಟಿ ಜಯರಾಮ ಶೆಟ್ಟಿ ಸಾರಿಕಾ ಶೆಟ್ಟಿ ವಿಜಯಾ ಬಿ. ಶೆಟ್ಟಿ ವಿಶೇಷ ಆಹ್ವಾನಿತರಾದ ರಾಜೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಜಯಂತ ಶೆಟ್ಟಿ ಸ್ವಾಗತಿಸಿ, ಸುಜಯ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ನಿರ್ವಹಿಸಿ, ಬಿ.ಸೀತಾರಾಮ ಶೆಟ್ಟಿ ವಂದಿಸಿದರು.
ನೂತನ ಕಟಡ ನಿರ್ಮಾಣ ಯೋಜನೆ
ವಿಜಯ ಕ್ರೆಡಿಟ್ ಸೊಸೈಟಿ ಈಗಾಗಲೇ 19 ಶಾಖೆಗಳನ್ನು ಹೊಂದಿದ್ದು, ಧರ್ಮಸ್ಥಳ, ಕಾಪು, ವಾಮಂಜೂರು, ಅತ್ತಾವರದಲ್ಲಿ ಶಾಖೆ ತೆರೆಯಲು ಅನುಮತಿ ಪಡೆದುಕೊಂಡಿದೆ. ಬೆಳ್ತಂಗಡಿಯಲ್ಲಿ ಹೊಸ ಸ್ಥಿರಾಸ್ತಿ ಖರೀದಿಸಿದ್ದು 2030ಕ್ಕೆ ಸೊಸೈಟಿಯ ಬೆಳ್ಳಿಹಬ್ಬದ ಸಂದರ್ಭ ನೂತನ ಕಟ್ಟಡ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಗ್ರಾಹಕರ ವಿಶ್ವಾಸ, ಸಿಬ್ಬಂದಿಗಳ ನಿಸ್ವಾರ್ಥ ಸೇವೆ, ಹಿರಿಯ ನಿರ್ದೇಶಕರ ಮಾರ್ಗದರ್ಶನದಿಂದ ಸಂಸ್ಥೆ ಬೆಳೆದಿದೆ.
ಅಜಿತ್ ಜಿ.ಶೆಟ್ಟಿ
ಅಧ್ಯಕ್ಷರು, ವಿಜಯ ಕ್ರೆಡಿಟ್ ಸೊಸೈಟಿ ಗುರುವಾಯನಕೆರೆ

